About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಾಹುಲ್‌ಗೆ ಇಟಾಲಿಕ್‌ ಬಂದಿದ್ದರೆ, ಆ ಭಾಷೆಲ್ಲೇ ಮಾತಾಡ್ತಿದ್ದೆ: ಅಮಿತ್ ಶಾ

ರಾಹುಲ್ ಗಾಂಧಿಯ ಮೂಲವನ್ನು ವ್ಯಂಗ್ಯ ಮಾಡಿದ ಅಮಿತ್ ಶಾ

ಜೈಪುರ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಇಟಾಲಿಕ್‌ ಬರುವುದಿಲ್ಲ. ಒಂದು ವೇಳೆ ಬಂದಿದ್ದರೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಯಾವೆಲ್ಲಾ ಯೋಜನೆಗಳನ್ನು ಜಾರಿಗೊಳಿಸಿದೆ ಎನ್ನುವುದನ್ನು ವಿವರಿಸುತ್ತಿದೆ ಆ ಭಾಷೆಯಲ್ಲೇ ಉತ್ತರಿಸುತ್ತಿದ್ದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಾರ್ವಜನಿಕ ಸಭೆಯೊಂದರಲ್ಲಿ ರಾಹುಲ್ ಕುರಿತು ವ್ಯಂಗ್ಯ ಮಾಡಿದ್ದಾರೆ.

ರಾಜಸ್ಥಾನದ ರಾಜ್ಸಾಮಂದ್‌ನಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಮಾತಾನಾಡಿದ ಅಮಿತ್ ಶಾ, ಬಿಜೆಪಿ ರಾಜಸ್ಥಾನಕ್ಕೆ ಏನು ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಮೋದಿ ಅವರ ಎನ್‌ಡಿಎ ಸರಕಾರ ರಾಜಸ್ಥಾನಿಗಳಿಗಾಗಿ 100 ಕ್ಕಿಂತ ಹೆಚ್ಚು ಯೋಜನೆಗಳನ್ನು ನೀಡಿದೆ ಎಂದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ರಾಜಸ್ಥಾನಿಗಳಿಗಾಗಿ ಬಿಜೆಪಿ ಏನು ಮಾಡಿದೆ ಎಂದು ಕೇಳಿದ್ದರು. ರಾಜಸ್ಥಾನದ ಜನತೆಗೆ ಬಿಜೆಪಿ ಸರಕಾರ 116 ಯೋಜನೆಗಳನ್ನು ಜಾರಿಗೊಳಿಸಿದೆ. ಬೇಕಾದರೆ ಏಣಿಕೆ ಮಾಡಿಕೊಳ್ಳಿ ರಾಹುಲ್ ಬಾಬಾ, ನನಗೆ ಇಟಲಿ ಭಾಷೆ ಬರುವುದಿಲ್ಲ ಇಲ್ಲದಿದ್ದರೆ ನಾನು ಇಟಲಿ ಭಾಷೆಯಲ್ಲೇ ಉತ್ತರಿಸುತ್ತಿದ್ದೆ ಎಂದು ರಾಹುಲ್‌ ಮೂಲದ ಕುರಿತು ವ್ಯಗ್ಯವಾಡಿದ್ದಾರೆ.

‘ರಾಜಸ್ಥಾನ ಗೌರವ್ ಯಾತ್ರೆ’ಗೆ ಮುಖ್ಯಮಂತ್ರಿ ವಸುಂಧರ ರಾಜೆ ಚಾರ್ಭುಜನಾಥ ದೇವಾಲದಲ್ಲಿ ಚಾಲನೆ ನೀಡಿದರು. ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಾಗಿ ಸಜ್ಜಾಗುತ್ತಿರುವ ಬಿಜೆಪಿ ಈ ಯಾತ್ರೆಯನ್ನು ನಡೆಸುತ್ತಿದೆ. ಯಾತ್ರೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ರಾಜಸ್ಥಾನಕ್ಕೆ ನೀಡಿದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲಿದೆ.
ರಾಜಸ್ಥಾನ ಗೌರವ್ ಯಾತ್ರೆಯು 200 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ 165 ಕ್ಷೇತ್ರಗಳನ್ನು ಸಂಚರಿಸಿದೆ. ಈ ಯಾತ್ರೆ ಸೆಪ್ಟೆಂಬರ್ 30 ರಂದು ಮುಕ್ತಾಯಗೊಳ್ಳಲಿದೆ.

Tags

Related Articles

Leave a Reply

Your email address will not be published. Required fields are marked *

Language
Close