About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ಕಾಂಗ್ರೆಸ್‌ ಕುಟುಂಬವೊಂದರ ಉದ್ಯಮವಾಗಿದೆ: ಅಮಿತ್‌ ಶಾ

ದೆಹಲಿ: ಕಾಂಗ್ರೆಸ್‌ ಪಕ್ಷವು ಕುಟುಂಬವೊಂದು ನಡೆಸುತ್ತಿರುವ ಉದ್ಯಮವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವಿಟ್‌ ಮಾಡಿರುವ ಅಮಿತ್‌ ಶಾ, “ನೆಹರೂ-ಗಾಂಧಿ ಕುಟುಂಬದಿಂದ ಆಚೆಗಿನ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪ್ರಧಾನಿ ಬಹಿರಂಗ ಸವಾಲೆಸೆದಿರುವುದು ಅನೇಕರ ಹುಬ್ಬೇರಿಸಿದೆ. ಕುಟುಂಬಕ್ಕೆ ತಮ್ಮ ನಿಷ್ಠೆಯನ್ನು ತೋರಿಕೊಳ್ಳಲು ಅನೇಕ ಮಂದಿ ಪೈಪೋಟಿಗೆ ಬಿದ್ದವರಂತೆ ಮುಂದೆ ಬರುತ್ತಿದ್ದಾರೆ. ಪ್ರಧಾನ ಮಂತ್ರಿ ಸರಿಯಾದ ಜಾಗಕ್ಕೇ ಪೆಟ್ಟು ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

ತಮ್ಮ ಮಾತು ಮುಂದುವರೆಸಿ, “ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ, ಕುಟುಂಬಕ್ಕೆ ಸೇರದ ಇಬ್ಬರು ಮಂದಿಯನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಪಿ ವಿ ನರಸಿಂಹರಾವರ ದೇಹವನ್ನು ಕಾಂಗ್ರೆಸ್‌ ಪಕ್ಷದ ಕಚೇರಿಯೊಳಗೆ ಸೇರಲು ಬಿಡಲಿಲ್ಲ.ಮತ್ತೊಬ್ಬ ವರಿಷ್ಠ ಸೀತಾರಾಮ್‌ ಕೇಸರಿಯನ್ನು ಯಾವ ಮಟ್ಟಿಗೆ ನಡೆಸಿಕೊಳ್ಳಲಾಯಿತು ಎಂಬುದನ್ನು ನಮ್ಮೆಲ್ಲರಿಗೂ ತಿಳಿದಿದೆ” ಎಂದು ಶಾ ಹೇಳಿದ್ದಾರೆ.

“ಬಾಬು ಜಗಜೀವನ ರಾಂ, ಎಸ್‌ ನಿಜಲಿಂಗಪ್ಪ, ಕೆ ಕಾಮರಾಜ್‌ರಂಥ ನಾಯಕರ‍ನ್ನು ಆ ಒಂದು ಕುಟಂಬ ಅವಮಾನಿಸಿದೆ. ಹಿರಿಯರಾದರೂ ನೀಲಂ ಸಂಜೀವ ರೆಡ್ಡಿಗೆ ರಾಷ್ಟ್ರಪತಿಯಾಗಲು ಆ ಕುಟುಂಬ ಬಿಡಲಿಲ್ಲ. ಇಂದಿರಾ ಗಾಂಧಿಗಾಗಿ ಯುಎನ್‌ ದೇಭರ್‌ರನ್ನು ಪಕ್ಷದ ಉನ್ನತ ಸ್ಥಾನದಿಂದ ಕೆಳಗಿಳಿಸಲಾಯಿತು” ಎಂದು ಶಾ ತಿಳಿಸಿದ್ದಾರೆ.

“ಗಾಂಧೀಜಿ ಹಾಗು ಸರ್ದಾರ್‌ ಪಟೇಲರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಆಚಾರ್ಯ ಕೃಪಲಾನಿರನ್ನು, ನೆಹರೂ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ತಂದ ಕಾರಣ 1950-1960ರ ದಶಕದ ಅವಧಿಯಲ್ಲಿ ಅವರಿಗೆ ಭಾರೀ ಅವಮಾನ ಮಾಡಲಾಯಿತು” ಎಂದು ಶಾ ತಿಳಿಸಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close