ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಅಮಿತ್ ಶಾ ರಣಕಹಳೆ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: 2018 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಾಗುತ್ತದೆ. ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು. ಪೂರ್ಣ ಕುಂಭ ಹೊತ್ತ ಕಾರ್ಯಕರ್ತೆಯರು ಸ್ವಾಗತಿಸಿದರು. ನಂದಿಕೋಲು, ಕೋಲುಕುದುರೆ, ಯಕ್ಷಗಾನ ಸೇರಿದಂತೆ ಜನಪದ ಕಲಾ ತಂಡಗಳ ಮೂಲಕ ಅಮಿತ್ ಶಾ ಗೆ ಸ್ವಾಗತ ಕೋರಲಾಯಿತು.

ಬಳಿಕ ಬಿಜೆಪಿ ಕಚೇರಿ ಎದುರು ಭಾಷಣಕ್ಕೆ ಸಿದ್ಧಗೊಂಡ ವೇದಿಕೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡಿದ ಅಮಿತ್ ಶಾ, ಇಡೀ ದೇಶದಲ್ಲಿ ಬೂತ್ ಮಟ್ಟದಿಂದ ಪಕ್ಷದ ಬಲವರ್ಧನೆ ಮಾಡುವುದು ನಮ್ಮ ಗುರಿ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯುವುದೇ ನಮ್ಮ ಗುರಿ ಇದೇ ಕಾರಣಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದೇನೆ ಎಂದು ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ರಣಕಹಳೆ ಊದಿದರು.

Leave a Reply

Your email address will not be published. Required fields are marked *

1 × four =

 
Back To Top