About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಬಾಂಗ್ಲಾ ವಲಸಿಗರು ಕ್ರಿಮಿಗಳು, ಅವರನ್ನು ಮತದಾರರ ಪಟ್ಟಿಯಿಂದ ಕಿತ್ತೊಗೆಯಬೇಕು: ಅಮಿತ್‌ ಶಾ

ಜೈಪುರ: ಬಾಂಗ್ಲಾ ವಲಸಿಗರು ಕ್ರಿಮಿಗಳಾಗಿದ್ದು ಪ್ರತಿಯೊಬ್ಬರನ್ನೂ ಮತದಾರರ ಪಟ್ಟಿಯಿಂದ ಕಿತ್ತೊಗೆಯಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಹಾಗು ಮೇಲ್ಮನೆ ಸಂಸದ ಅಮಿತ್‌ ಶಾ ತಿಳಿಸಿದ್ದಾರೆ.

ಆಸ್ಸಾಂನಲ್ಲಿ ಕೈಗೊಳ್ಳಲಾದ ರಾಷ್ಟ್ರೀಯ ಪೌರತ್ವ ನೋಂದಣಿ  ಕಾರ್ಯಕ್ರಮದ ಕುರಿತು ಮಾತನಾಡಿದ ಶಾ, “ಎನ್‌ಆರ್‌ಸಿ ಕರಡನ್ನು ತರುವ ಮೂಲಕ ಬಿಜೆಪಿ ಸರಕಾರ ಮೇಲುನೋಟಕ್ಕೇ 4 ಲಕ್ಷ ಅಕ್ರಮ ವಲಸಿಗರನ್ನು ಪತ್ತೆ ಮಾಡಿದೆ” ಎಂದಿದ್ದಾರೆ.

ಪ್ರತಿಯೊಬ್ಬ ನುಸುಳುಕೋರನನ್ನೂ ಪತ್ತೆ ಮಾಡಿ ಅವರನ್ನು ಮತದಾರರ ಪಟ್ಟಿಯಿಂದ ಕೊತ್ತೊಗೆಯಲಾಗುವುದು ಎಂದು ಶಾ ತಿಳಿಸಿದ್ದಾರೆ.  ವರ್ಷಾಂತ್ಯ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ರ‍್ಯಾಲಿಯೊಂದರಲ್ಲಿ ಶಾ ಮಾತನಾಡಿದ್ದಾರೆ.

ನಾಯಕನಾಗಲೀ, ನೀತಿಯಾಗಲೀ ಇಲ್ಲದ ಕಾಂಗ್ರೆಸ್‌ ಪಕ್ಷದಿಂದ ದೇಶಕ್ಕೆ ಯಾವುದೇ ಒಳಿತಾಗುವ ಸಾಧ್ಯತೆ ಇಲ್ಲ ಎಂದ ಶಾ, ಬಿಜೆಪಿ ಸರಕಾರದಿಂದ ದೇಶಕ್ಕೆ ಏನೇನೆಲ್ಲಾ  ಆಗಿದೆ ಎಂದು ಕೇಳುತ್ತಿರುವ ರಾಹುಲ್‌ ಬಾಬಾಯ ಕುಟುಂಬದ ನಾಲ್ಕು ತಲೆಮಾರುಗಳು ದೇಶಕ್ಕೆ ಏನೆಲ್ಲಾ ಮಾಡಿದೆ ಎಂದು ತಿಳಿಯಲು ಜನತೆ ಇಚ್ಛಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close