About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮುಂದಿನ 50 ವರ್ಷ ಬಿಜೆಪಿ ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ: ಅಮಿತ್‌ ಶಾ

ರಾಜಸ್ಥಾನದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಬಿಜೆಪಿಯನ್ನು ಮಣಿಸಲು ಆಗದು ಎಂದು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ವರ್ಷಾಂತ್ಯ ನಡೆಯಲಿರುವ ವಿಧಾನ ಸಭಾ ಚುನಾವಣೆಗಳು ಟ್ರೆಂಡ್‌ ಸೃಷ್ಟಿಸಲಿದೆ ಎಂದು ಶಾ ತಿಳಿಸಿದ್ದಾರೆ.

ಜೈಪುರದಲ್ಲಿ ನಡೆಸ ಬಿಜೆಪಿ ಸಭೆಯಲ್ಲಿ ಅಮಿತ್‌ ಶಾ ಮಾತನಾಡಿದ್ದಾರೆ.

2019ರ ಲೋಕ ಸಭಾ ಚುನಾವಣೆಗೂ ಮುನ್ನ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಘಡ, ಮಿಝೋರಾಂ ಹಾಗು ತೆಲಂಗಾಣಗಳಲ್ಲಿ ವಿಧಾನಸಭಾ ಚುನಾವಣೆಗಳು ಜರುಗಲಿವೆ. 2014ರ ಚುನಾವಣೆಯಲ್ಲಿ ಮಧ್ಯ ಪ್ರದೇಶದ 29 ಲೋಕಸಭಾ ಕ್ಷೇತ್ರಗಳ ಪೈಕಿ 27ರಲ್ಲಿ ಜಯಿಸಿದ್ದ ಬಿಜೆಪಿ ಛತ್ತೀಸ್‌ಘಡದ 11ರಲ್ಲಿ 10 ಹಾಗು ರಾಜಸ್ಥಾನದ ಎಲ್ಲ 25 ಕ್ಷೇತ್ರಗಳಲ್ಲೂ ಜಯಭೇರಿ ಮೊಳಗಿಸಿತ್ತು.

2019ರಲ್ಲಿ ಇನ್ನೊಮ್ಮೆ ಸರಕಾರ ರಚನೆ ಮಾಡಲಿರುವ ಬಿಜೆಪಿ ಮುಂದಿನ 50 ವರ್ಷ ಹಿಂತಿರುಗಿ ನೋಡುವುದಿಲ್ಲ ಎಂದ ಅಮಿತ್‌ ಶಾ, “ನಮ್ಮನ್ನ ಇಂದಿನ ಮಟ್ಟಕ್ಕೆ ತರಲು ನಮ್ಮ ಪೂರ್ವಜರು 50 ವರ್ಷ ಶ್ರಮಿಸಿದ್ದಾರೆ. ಮುಂದಿನ 50 ವರ್ಷಗಳ ಕಾಲ ಆಳುವುದು ನಮ್ಮ ಜವಾಬ್ದಾರಿಯಾಗಿದೆ. ದೇಶದ 70%ನಷ್ಟು ಭೌಗೋಳಿಕ ಪ್ರದೇಶದಲ್ಲಿ ವ್ಯಾಪಿಸಿರುವ ಬಿಜೆಪಿ ಇಂದು 19 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ” ಎಂದು ಶಾ ತಿಳಿಸಿದ್ದಾರೆ.

ಮಹಾಘಟಬಂಧನ ರಚನೆ ಮಾಡುವ ವಿಪಕ್ಷಗಳ ಯೋಜನೆ ಉತ್ತರ ಪ್ರದೇಶದಲ್ಲಿ ಸ್ವಲ್ಪ ಬಿಟ್ಟರೆ ಮಿಕ್ಕ ಕಡೆಗಳಲ್ಲಿ ಯಾವುದೇ ಕೆಲಸ ಮಾಡದು ಎಂದ ಶಾ, “ಉರಿ ದಾಳಿ ನಡೆದಾಗ ಅದಕ್ಕೆ ಪ್ರತಿಯಾಗಿ ಸರ್ಜಿಕಲ್‌ ದಾಳಿ ನಡೆಸಬಹುದೆಂದು ಯಾರೂ ಎಣಿಸಿರಲಿಲ್ಲ. ಆದರೆ ಖುದ್ದು ಪ್ರಧಾನಿ ನೇತೃತ್ವದಲ್ಲಿ ಸರ್ಜಿಕಲ್‌ ದಾಳೆ ನಡೆಸಲಾಯಿತು. ಈ ವಿಚಾರವಾಗಿ ಮೋದಿಯನ್ನು ರಕ್ತದ ವ್ಯಾಪಾರಿ ಎಂದು ರಾಹುಲ್‌ ಗಾಂಧಿ ಕರೆದಿದ್ದರು. ರಾಹುಲ್‌ ನಿದ್ದೆ ಕಳೆಯುತ್ತಲೇ ಅವರ ಕನಸುಗಳೂ  ಛಿದ್ರವಾಗಲಿವೆ. ರಾಜಸ್ಥಾನ ಹಾಗು ಕೇಂದ್ರದಲ್ಲಿ ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ರಾಹುಲ್‌ ಹೇಳಿದ್ದರು. ಆದರೆ ಸೂಕ್ಷ್ಮದರ್ಶಕ ಹಾಕಿ ನೋಡಿದರೂ ಕಾಂಗ್ರೆಸ್‌ಗೆ ಗೆಲುವು ಕಾಣಿಸದು. ಸೂಕ್ತ ನಾಯಕತ್ವದ ಕೊರತೆ ಇರುವ ಪಕ್ಷ ಚುನಾವಣೆ ಗೆಲ್ಲಲು ಅರ್ಹವಾಗಿಲ್ಲ. ಬಿಜೆಪಿಯ ನೀತಿ ಹಾಗು ಕಾರ್ಯಕ್ರಮಗಳಲ್ಲಿ ಸ್ಪಷ್ಟತೆ ಇದೆ” ಎಂದು ಶಾ ತಿಳಿಸಿದ್ದಾರೆ.

ತನ್ನ ಮತಬ್ಯಾಂಕ್‌ಅನ್ನು ಭದ್ರ ಪಡಿಸಿಕೊಳ್ಳಲು ನೋಡುತ್ತಿರುವ ಕಾಂಗ್ರೆಸ್‌ ರಾಷ್ಟ್ರೀಯ ಪೌರತ್ವ ನೋಂದಣಿಯನ್ನೂ ವಿರೋಧಿಸುತ್ತಿದೆ ಎಂದು ಶಾ ಇದೇ ವೇಳೆ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close