ಅಮ್ಮ ಐ ಲವ್ ಯೂ…

Posted In : ಸಿನಿಮಾಸ್

ಮಮತೆಗೊಂದು ಮುದ್ದು ಚಿತ್ರ

‘ಚೌಕ’ ಚಿತ್ರದಲ್ಲಿ ಅಪ್ಪ ಐ ಲವ್ ಯೂ ಎಂದಿದ್ದ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಈಗ ‘ಅಮ್ಮ ಐ ಲವ್ ಯೂ..’ ಎನ್ನುತ್ತಿದ್ದಾರೆ. ಹೌದು, ದ್ವಾರಕೀಶ್  ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 51ನೇ ಚಿತ್ರದ ಹೆಸರು ‘ಅಮ್ಮ ಐ ಲವ್ ಯೂ..’ ತಾಯಿಯನ್ನು, ಆಕೆಯ ಪ್ರೀತಿಯ ಎಳೆಯ ಹೊಸ ಅನುಭವವನ್ನು ಈ ಚಿತ್ರದ ಮೂಲಕ ತೆರೆಮೇಲೆ ಹೇಳುತ್ತಿದ್ದಾರೆ ಯೋಗೀಶ್ ದ್ವಾರಕೀಶ್. ಸದ್ಯಕ್ಕೆ ಬಿಡುಗಡೆಯಾಗಿರುವ ಟ್ರೇಲರ್ ಮತ್ತು ಹಾಡುಗಳ ಮೂಲಕ ಸ್ಯಾಂಡಲ್‌ವುಡ್ ಸಿನಿ ಪ್ರಿಯರ ಗಮನ ಸೆಳೆಯುತ್ತಿರುವ ‘ಅಮ್ಮ ಐ ಲವ್ ಯೂ..’ ಇದೇ ಜೂನ್ 15ರಂದು ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ‘ವಿ ಸಿನಿಮಾಸ್’ ದೊಂದಿಗೆ  ಸಿಕ್ಕ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಮತ್ತು ಚಿತ್ರತಂಡ, ಚಿತ್ರದ ಒಂದಷ್ಟು ವಿಶೇಷತೆಗಳನ್ನು ಹಂಚಿಕೊಂಡಿದೆ.

ಇಡೀ ಜಗತ್ತಿನಲ್ಲಿ ಎಲ್ಲಾ ಪ್ರೀತಿ ಒಂದೇ ಕಡೆ ಸಿಗುವುದು ಅಮ್ಮನ ಹತ್ತಿರ ಮಾತ್ರ. ತಾಯಿ ಇಲ್ಲದೆ ಜಗತ್ತಿನಲ್ಲಿ ಏನು ಇಲ್ಲ. ಅವಳಿಗಿಂತ ಮಿಗಿಲಾಗಿರುವುದು ಕೂಡ ಏನೂ ಇಲ್ಲ. ತಾಯಿ ಅಂದ್ರೆ ಪ್ರೀತಿ, ತಾಯಿ ಅಂದ್ರೆ ನಂಬಿಕೆ. ಅದು ಜೊತೆಯಲ್ಲಿದ್ರೆ ಏನು ಬೇಕಾದ್ರೂ ಸಾಧಿಸಬಹುದು ಅನ್ನೋದೆ ಈ ಸಿನಿಮಾ. ಅದಕ್ಕಾಗಿಯೇ ಈ ಸಿನಿಮಾಕ್ಕೆ ‘ಅಮ್ಮ ಐ  ಯೂ’ ಅಂಥ ಹೆಸರಿಟ್ಟಿದ್ದೇವೆ ಎನ್ನುತ್ತ ಮಾತಿಗಿಳಿದವರು ನಿರ್ಮಾಪಕ ಯೋಗೀಶ್ ದ್ವಾರಕೀಶ್.ಯೋಗೀಶ್ ಅವರ ಮಾತುಗಳಲ್ಲಿ ಸಿನಿಮಾದ ಬಗ್ಗೆ ಸ್ಪಷ್ಟತೆ ಮತ್ತು ವಿಶ್ವಾಸವಿತ್ತು. ತಾವು ಸಿನಿಮಾದಲ್ಲಿ ಏನು ಹೇಳುತ್ತಿದ್ದೇವೆ..? ಯಾರಿಗಾಗಿ ಹೇಳುತ್ತಿದ್ದೇವೆ..? ಯಾಕಾಗಿ ಹೇಳುತ್ತಿದ್ದೇವೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿತ್ತು. ಇಲ್ಲಿಯವರೆಗೆ ನಮ್ಮ ಬ್ಯಾನರ್‌ನಲ್ಲಿ 50 ಸಿನಿಮಾಗಳನ್ನ ಮಾಡಿ ದ್ದೇವೆ. ಅದರದ್ದೇ ಆದ ಮಹತ್ವವನ್ನು ಇಟ್ಟುಕೊಂಡು ಪ್ರತಿ ಸಿನಿಮಾವನ್ನೂ ಮಾಡಿದ್ದೇವೆ. ಹಿಂದಿನ ‘ಚೌಕ’ ಸಿನಿಮಾದಲ್ಲಿ ಅಪ್ಪನ ಪ್ರೀತಿಯನ್ನು  ಈ ಸಿನಿಮಾದಲ್ಲಿ ಅಮ್ಮನ ಪ್ರೀತಿಯನ್ನು ಪ್ರೇಕ್ಷಕರ ಮುಂದೆ ಹೇಳುತ್ತಿದ್ದೇವೆ. ಇಡೀ ಸಿನಿಮಾದಲ್ಲಿ ಒಂದೊಳ್ಳೆ ಎಮೋಷನ್ಸ್ ಇದೆ. ‘ಅಮ್ಮ ಐ ಲವ್ ಯೂ’ ಕಂಪ್ಲೀಟ್ ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ಎನ್ನುವುದು ಯೋಗೀಶ್ ಅವರ ಮಾತು.

ಪಟ್ಟು  ಹಿಡಿದು ಟೈಟಲ್ ಪಡೆದೆವು …
‘ಅಮ್ಮ ಐ ಲವ್ ಯೂ’ ಅಂಥ ಟೈಟಲ್ ಇಟ್ಟುಕೊಂಡಾಗ, ಫಿಲಂ ಚೇಂಬರ್‌ನವರು ಈ ಹೆಸರಿಗೆ ಸಮಾನವಾಗಿರುವ ಟೈಟಲ್ ರಿಜಿಸ್ಟರ್ ಆಗಿರುವುದರಿಂದ ಈ ಟೈಟಲ್ ನೀಡಲಾಗುವುದಿಲ್ಲ  ಆದ್ರೆ ನಮ್ಮ ಕಥೆಗೆ ಅದೇ ಟೈಟಲ್ ಸೂಕ್ತವಾಗಿದ್ದರಿಂದ, ನಾವು ಕೂಡ ಆ ಟೈಟಲ್ ಬಿಡಲು ತಯಾರಿರಲಿಲ್ಲ. ಹಾಗಾಗಿ ನಾವು ಕೂಡ ಒಂದಷ್ಟು ವಾದಗಳನ್ನು ಫಿಲಂ ಚೇಂಬರ್ ಮುಂದಿಟ್ಟಿದ್ದೆವು. ಇದೇ ತರದ ಸಮಾನಾರ್ಥ ಬರುವ ಅನೇಕ ಟೈಟಲ್‌ಗಳನ್ನು ಈಗಾಗಲೇ ಚೇಂಬರ್ ಕೊಟ್ಟಿರುವ ಹಲವು ನಿದರ್ಶನಗಳನ್ನ, ಉದಾಹರಣೆಗಳನ್ನ ಅವರ ಗಮನಕ್ಕೆ ತಂದೆವು. ಈ ಬಗ್ಗೆ ಒಂದಷ್ಟು ಚರ್ಚೆಗಳಾದ ನಂತರ ಅಂತಿಮವಾಗಿ ನಮ್ಗೆ ಬೇಕಾದ ‘ಅಮ್ಮ ಐ ಲವ್ ಯೂ’ ಟೈಟಲ್ ಪಡೆದುಕೊಳ್ಳಲು  ಯಾದೆವು.

ಅಮ್ಮನ ಮಡಿಲಲ್ಲಿ ಘಟಾನುಘಟಿಗಳ ಸಮಾಗಮ
‘ಅಮ್ಮ ಐ ಲವ್ ಯೂ’ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಚಿರಂಜೀವಿ ಸರ್ಜಾ, ನಿಶ್ವಿಕಾ, ಸಿತಾರಾ, ಪ್ರಕಾಶ ಬೆಳವಾಡಿ, ಚಿಕ್ಕಣ್ಣ, ರವಿಕಾಳೆ, ಗಿರಿ ದ್ವಾರಕೀಶ್ ಹೀಗೆ ದೊಡ್ಡ ಕಲಾವಿದರ ದಂಡೆ ಚಿತ್ರದಲ್ಲಿದೆ. ಇನ್ನು ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಮತ್ತು ವಿಶ್ವ ಎನ್.ಎಂ ಸಂಕಲನ ಕಾರ್ಯ ನಿರ್ವ ಹಿಸಿದ್ದಾರೆ. ರವಿವರ್ಮ, ಗಣೇಶ್, ವಿಕ್ರಂ ಸಾಹಸ ದೃಶ್ಯಗಳನ್ನು ಸಂಯೋ ಜಿಸಿದ್ದಾರೆ.  ರಾಜಶೇಖರ್ ಸಂಭಾಷಣೆಯನ್ನು ಬರೆದಿದ್ದಾರೆ. ಎಲ್ಲಾ ಟೆಕ್ನೀಷಿಯನ್‌ಸ್ ಕೂಡ ಸಾಕಷ್ಟು ಅನುಭವಿಗಳಾಗಿದ್ದರಿಂದ ಸಿನಿಮಾ ಕೂಡ ತುಂಬಾ ಕ್ವಾಲಿಟಿಯಲ್ಲಿ ಬಂದಿದೆ. ಇನ್ನು ಆಪ್ತಮಿತ್ರ ಸಿನಿಮಾದ ನಂತರ ನಮ್ಮ ಚಿತ್ರಕ್ಕೆ ಗುರುಕಿರಣ್ ಮ್ಯೂಸಿಕ್ ನೀಡಿದ್ದಾರೆ. ಹಾಡುಗಳು ತುಂಬಾ ಚೆನ್ನಾಗಿ ಬಂದಿದೆ. ಜೊತೆಗೆ ಸೆನ್ಸಿಬಲ್ ಡೈರೆಕ್ಟರ್ ಎಂದೆ ಕರೆಸಿಕೊಳ್ಳುತ್ತಿದ್ದ ಕೆ.ಎಂ ಚೈತನ್ಯ, ಈ ಸಿನಿಮಾದ ಮೂಲಕ ಕಂಪ್ಲೀಟ್ ಕಮರ್ಷಿಯಲ್ ಡೈರೆಕ್ಟರ್ ಆಗಿಯೂ ಸೈ ಎನಿಸಿಕೊಳ್ಳುತ್ತಾರೆ ಎನ್ನುವುದು ಯೋಗೀಶ್ ಅವರ ಮಾತು.

 ಭರವಸೆ ಮೂಡಿಸಿದ  ಕನ್ನಡದ ಬೆಡಗಿ…
‘ಅಮ್ಮ ಐ ಲವ್ ಯೂ’ ಸಿನಿಮಾದ ಮೂಲಕ ಕನ್ನಡಕ್ಕೆ ಹೊಸ ಮತ್ತೊಬ್ಬ ಭರವಸೆಯ ಹೀರೋಯಿನ್ ಸಿಗ್ತಾಳೆ ಅನ್ನೋದು ನನ್ನ ಭರವಸೆ. ಅಚ್ಚ ಕನ್ನಡದ ಹುಡುಗಿ ನಿಶ್ವಿಕಾ ನಮ್ಮ ಸಿನಿಮಾದ ಹೀರೋಯಿನ್. ತನ್ನ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾಳೆ. ಎಂಥಹವರನ್ನೂ ತನ್ನ ಅಭಿನಯದ ಮೂಲಕ ಆಕರ್ಷಿ ಸುವ ಕಲೆ ಆಕೆಯಲ್ಲಿದೆ. ಈ ಸಿನಿಮಾ ಬಿಡುಗಡೆಯಾದ ನಂತರ ಆಕೆಗೆ ಒಂದಷ್ಟು ಫ್ಯಾನ್ಸ್ ಸಿಗೋದಂತೂ ಗ್ಯಾರೆಂಟಿ. ಕನ್ನಡಕ್ಕೆ ಮತ್ತೊಬ್ಬ ಅಪ್ಪಟ  ಹೊಸ ಹೀರೋಯಿನ್ ಆಗಿ ಸಿಗ್ತಾಳೆ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ಯೋಗೀಶ್.

 ರಿಲೀಸ್‌ಗೂ ಮುನ್ನವೇ ನಿರೀಕ್ಷೆ ಮೂಡಿಸಿದ ಅಮ್ಮ…
ಟೈಟಲ್‌ನಿಂದ, ಸಬ್ಜೆಕ್‌ಟ್ನಿಂದಾಗಿ ‘ಅಮ್ಮ ಐ ಲವ್ ಯೂ’ ಸಿನಿಮಾದ ಮೇಲೆ  ಎಲ್ಲರಿಗೂ ಸಾಕಷ್ಟು ನಿರೀಕ್ಷೆಯಿದೆ. ನಮ್ಮ ಹಿತೈಷಿಗಳು, ಸ್ಪರ್ಧಿಗಳು, ಆಡಿಯನ್‌ಸ್ ಹೀಗೆ ಎಲ್ಲರಿಗೂ ಸಿನಿಮಾದಲ್ಲಿ ಏನಿರಬಹುದೆಂಬ ಕುತೂಹಲ, ನಿರೀಕ್ಷೆಯಿದೆ. ಹಲವರು ಸಿನಿಮಾ ಮುಹೂರ್ತ ಆದಾಗಿನಿಂದಲೇ ಸಿನಿಮಾದ ಅಪ್‌ಡೇಟ್ ಕೊಡುತ್ತ ಪಬ್ಲಿಸಿಟಿ ಮಾಡ್ತಾರೆ. ಆದ್ರೆ ನನ್ಗೆ ಅದ್ರಲ್ಲಿ ನಂಬಿಕೆ  ಮೊದ್ಲು ಸಿನಿಮಾ ಚೆನ್ನಾಗಿ ಮಾಡ್ಬೇಕು. ಮೊದಲು ಸಿನಿಮಾ ನಮ್ಗೆ ಇಷ್ಟವಾಗ್ಬೇಕು. ಸಿನಿಮಾ ಚೆನ್ನಾಗಿ ಬಂದ್ರೆ, ಒಳ್ಳೆ ಕ್ವಾಲಿಟಿಯಲ್ಲಿ ಬಂದ್ರೆ ಅದಕ್ಕೆ ಡಿಮ್ಯಾಂಡ್ ಬಂದೇ ಬರುತ್ತೆ. ಆಮೇಲೆ ಅದನ್ನು ಪ್ರಚಾರ ಮಾಡೋದು, ಆಡಿಯನ್ಸ್ ಹತ್ರ ತೆಗೆದುಕೊಂಡು ಹೋಗೋದು ಸುಲಭ. ಅದಕ್ಕಾಗಿಯೇ ಸಿನಿಮಾ ಕಂಪ್ಲೀಟ್ ಆಗುವವರೆಗೂ ನಾವು ಪ್ರಮೋಷನ್, ಪಬ್ಲಿಸಿಟಿ ಅಂತ ಯೋಚನೆ ಮಾಡಿರಲಿಲ್ಲ. ಈಗ ಸಿನಿಮಾದ ಮೇಲೆ ನಮ್ಗೂ ಕಾನ್ಫಿಡೆನ್‌ಸ್ ಇದ್ದು, ಜನಕ್ಕೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಅದೇ  ವಿಶ್ವಾಸದಲ್ಲಿ ಇದೇ ಜೂನ್ 15ರಂದು ಅಮ್ಮನನ್ನು ತೆರೆ ಮೇಲೆ ತರುತ್ತೇವೆ ಎನ್ನುತ್ತಾರೆ ಯೋಗೀಶ್.

Leave a Reply

Your email address will not be published. Required fields are marked *

fifteen + 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top