About Us Advertise with us Be a Reporter E-Paper

ವಿವಾಹ್

ಅಮ್ಮಾ.. ನೀ ನನ್ನ ನಂಬು..!

• ಜಮುನಾ ರಾಣಿ

Smiling teenage daughter hugging her mother from the back

ಆ ತಾನೆ ಕಾಲೇಜು ಜೀವನ ಮುಗಿಸಿ ಕೆಲಸಕ್ಕೆ ಸೇರಿದ್ದೆ. ನಾಲ್ಕೈದು ವರ್ಷಗಳಿಂದ ಪ್ರತಿ ವಿಷಯಕ್ಕೂ ಅಮ್ಮ ನೊಂದಿಗೆ ವಾಗ್ವಾದವೇ ಆಗಿತ್ತು. ಇಲ್ಲ, ಅಮ್ಮನೇ ಜಿದ್ದಿಗೆ ಬಿದ್ದಂತೆ ನನ್ನ ಪ್ರತಿ ಚಲನವಲನಗಳಲ್ಲೂ ಮೂಗು ತೂರಿಸುತ್ತಿದ್ದಳು. ಅದೆಷ್ಟೇ ಇಂದಿನ ಆಧುನಿಕತೆ, ಬದಲಾವಣೆ, ಜನರೇ ಶನ್ ಗ್ಯಾಪ್ ಬಗ್ಗೆ ಅವಳಿಗೆ ವಿವರಿಸಿ ಹೇಳಿದರೂ ಅವಳ ಚೌಕಟ್ಟಿನಿಂದ ಹೊರಗೆ ಬಂದು ಅರ್ಥವಾಗುವಷ್ಟರಲ್ಲಿ, ಮತ್ತೆ ತನ್ನದೇ ಅಂತಿಮ ನಿರ್ಣಯ ಎನ್ನುವ ಮಟ್ಟಿಗೆ ತನ್ನನ್ನು ತಾನು ನಂಬಿಸಿಬಿಟ್ಟಿದ್ದಳು. ದಿನಾಲೂ  ಒಂದು ಕಾರಣಕ್ಕೆ ಮನೆಯಲ್ಲಿ ಕೂಗಾಟ. ಅದೆಷ್ಟೇ ಅವಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಿದರೂ ಇದೊಂದು ಹಂತ ದಲ್ಲಿ ಉಹೂಂ, ಸಾಧ್ಯವಾಗಲೇ ಇಲ್ಲ. ಯಾಕಮ್ಮಾ ಈಗೀಗ ತುಂಬಾ ಅನುಮಾನಿಸುವೆ ಎಂದು ಬಾಯ್ಬಿಟ್ಟು ಕೇಳಿದರೂ ಅವಳು ಜಪ್ಪಯ್ಯಾ ಅನ್ನುತ್ತಿರಲಿಲ್ಲ.

ಎಲ್ಲಿಗೆ ಹೋದರೂ ಅಂಕೆಯಲ್ಲಿಡಲು ಪ್ರಯತ್ನಿಸು ತ್ತಾಳೆ. ‘ಬಾಯಿ ಬಡ್ಕಿತರ ಸುಮ್ಮನೆ ಮಾತನಾಡುತ್ತಾ ಹಲ್ಲು ಕಿರಿಯು ತ್ತೀಯ. ಸ್ವಲ್ಪ ಹದ್ದು ಬಸ್ತಿನಲ್ಲಿರು. ಪದೇ ಪದೇ ಕನ್ನಡಿಯ ಮುಂದೆ ಏಕೆ ನಿಲ್ಲುವೆ ? ಕಾಲೇಜಿಗೆ ಇಷ್ಟೊಂದು ಮೇಕಪ್ಪು  ನನ ಗ್ಯಾಕೋ ಅದ್ಯಾವನೋ ಜೊತೆ ಓಡಿ ಹೋದ ಮೂಲೆ ಮನೆ ಸವಿತಾಳ ಪ್ರಭಾವ ಬೀರಿದೆ ಎನ್ನಿಸುತ್ತಿದೆ’ ಎನ್ನುವಾ ಗಲಂತೂ ಇದೇ ಅಮ್ಮನಾ ನನ್ನ ಪುಟ್ಟ ಪುಟ್ಟ ಮಾತುಗಳ ಕೇಳಿ ಊರಲ್ಲಿರುವವರಿಗೆಲ್ಲಾ ಹೇಳಿಕೊಂಡು ಖುಷಿ ಪಟ್ಟಿದ್ದು ಅಂತ ನನಗೇ ಆಶ್ಚರ್ಯವಾಗುತ್ತದೆ.

ಸದಾ ಟೀವಿ ಧಾರವಾಹಿಗಳ ಒಳಗೆ ಮುಳುಗಿ ಹೋಗಿರುವ ಅವಳಿಗೆ ನಾನು ಮಾತ್ರ ಮೊಬೈಲ್, ಕಂಪ್ಯೂಟರ್‌ಗಳ ಉಪಯೋಗಿ ಸುವುದೇ ಒಂದು ಅಪರಾಧ. ‘ಅದ್ಯಾರು ನಿನಗೆ ಫೋನು ಮಾಡು ತ್ತಾರೆ. ಮೂರು  ಮೊಬೈಲ್ ನೋಡುತ್ತಾ ಕಿಸಿಕಿಸಿ ನಗು ತಿರ್ತೀಯಲ್ವಾ? ಏನು ಸಮಾಚಾರ? ಪ್ರತಿಕ್ಷಣವೂ ಅವಳ ಕಣ್ಣುಗಳು ನನ್ನ ಮೇಲೆ ಗೂಢಚಾರಿಕೆ ಮಾಡುತ್ತಿರುತ್ತವೆ.

ಅದೇಕೆ ಅಮ್ಮ ಹೀಗಾದಳು? ಜೀವನದಲ್ಲಿ ಬಹು ಎತ್ತರಕ್ಕೆ ಏರಬೇಕು. ನಿನ್ನ ಕಾಲ ಮೇಲೆ ನೀನು ನಿಂತು ಕೊಳ್ಳಬೇಕು ಅಂತೆಲ್ಲಾ ಚಿಕ್ಕಂದಿನಿಂದ ಹುರಿದುಂಬಿಸು ತ್ತಿದ್ದ ಅಮ್ಮ ಇವಳೇನಾ? ಅನ್ನುವ ಅನುಮಾನ ಬರುತ್ತದೆ.

ಹೀಗೆ ಬಾಲ್ಯದಲ್ಲಿ ಗೆಳತಿಯಾಗಿದ್ದ ಅಮ್ಮ ಹರೆಯ ಎದುರು ಗೊಂಡಾಗ ಮಿಲಿಟರಿ ಆಫೀಸರ್ ಆಗಿ ಬದಲಾಗಿಬಿಡುತ್ತಾಳೆ. ಹುಡುಗಿಯರಲ್ಲಿ ವಯೋ  ಉಂಟಾದ  ಏರಿಳಿತಗಳು ಅಮ್ಮನ ದೃಷ್ಟಿ ಯಲ್ಲಿ ಮಹಾಪರಾಧವಾಗಿ ಬಿಡುತ್ತದೆ. ಅದಕ್ಕೆ ಯಾರು ಹೊಣೆ ? ಬಾಲ್ಯ ದಾಟಿ ಹೆಣ್ಣಾಗುವ ಹೊಸ್ತಿಲಲ್ಲಿ ಸಮಾ ಧಾನದಿಂದ ತಿದ್ದಬೇಕಿರುವ ಅಮ್ಮ ವ್ಯಂಗ್ಯ ವಾಡುತ್ತಾ, ಹೀಯಾ ಳಿಸುತ್ತಾ ತಿದ್ದಲು ಪ್ರಯತ್ನಿಸು ವುದು ಏಕೆ ? ಅವಳನ್ನು ಖುಷಿ ಪಡಿಸಲು ಭಾವನೆಗಳನ್ನು ಅದುಮಿಟ್ಟುಕೊಂಡರೂ ಜೀವನ ನಾಟಕೀಯ ವಾಗುವುದಿಲ್ಲವೇ?

ವಯಸ್ಸು ತರುವ ಬದಲಾವಣೆಯನ್ನು ನಿರ್ಬಂಧ ಹೇರಿ ಸರಿಮಾಡುತ್ತೇನೆ ಎಂದುಕೊಳ್ಳುವುದು ಅದೆಷ್ಟು ಸರಿ. ಮಗಳು ಬೆಳೆದಿದ್ದಾಳೆ ಸ್ವಲ್ಪ ತಾನೂ  ತಕ್ಕಂತೆ ಹೊಂದಿಕೊಂಡು ಹೋಗಬೇಕು. ಮಗಳಿಗೆ ಜೀವನದ ಪಾಠಗಳ ಹೇಳಲು ಹೋಗಿ ಅದರಿಂದ ಅವಳಿಗೆ ನೋವು ಮಾಡುವುದು ಸರಿಯಲ್ಲ ಅನ್ನುವುದು ಅಮ್ಮನಿಗೆ ಅರ್ಥವಾಗುವುದು ಯಾವಾಗ ? ಮಗಳು ದುಡೀತಾಳೆ. ಬರೋದನ್ನೆಲ್ಲಾ ಬೇಕಾಬಿಟ್ಟಿ ಖರ್ಚು ಮಾಡುತ್ತಾಳೆ. ಇಷ್ಟು ದಿನ ಇಲ್ಲದ ಶಾಪಿಂಗ್ ಹುಚ್ಚು ಈಗೇಕೆ? ಟ್ರೆಕ್ಕಿಂಗು, ಪ್ರವಾಸ ಅಂತ ವಾರಾಂತ್ಯಕ್ಕೆ ಹೊರಗೋಗೋದು ಯಾಕೆ ? ಯಾಕಿಷ್ಟು ತಡ, ಎಂಟು ಗಂಟೆಯೊಳಗೆ ಮನೆಗೆ ಬಾ ಎಂದು ಹೇಳಿಲ್ಲವೇ, ನಿನ್ನಂತ ಬೇಜವಾಬ್ದಾರಿ ಹುಡುಗಿಯನ್ನು ನಾನು  ಇಲ್ಲ, ಈಗೆಲ್ಲಾ ಬದಲಾಗುತ್ತೀಯ ಅಂದಿ ದ್ದರೆ ಓದಿಸುತ್ತಲೇ ಇರಲಿಲ್ಲ. ಪಿಯುಸಿ ಆದ ಕೂಡಲೇ ಯಾರಿಗಾದರೂ ಕಟ್ಟಿ ಕೈತೊಳೆದುಕೊಳ್ಳುತ್ತಿ ದ್ದೆವು… ಇವೇ ಅವಳ ಆರೋಪಗಳು.

ನಿನ್ನೆ ಮೊನ್ನೆಯವರೆಗೂ ಹೇಳಿದ್ದನ್ನೆಲ್ಲ ಕಣ್ಣರಳಿಸಿ ಗೆಳತಿಯಂತೆ ಕೇಳುತ್ತಿದ್ದ ಅಮ್ಮ ಮಗಳು ಮೈನೆರೆದಳು ಎಂದ ತಕ್ಷಣ ಬದಲಾಗುವುದು ಅವಳಿಂದ ತಪ್ಪಿಸಿ ಕೊಂಡು ಓಡಾಡುವಂತೆ ಮಾಡುತ್ತದೆ. ದಿನಬೆಳಗಾದರೆ ಸಿಗುವ ಬುದ್ಧಿವಾದ ಸಾಕಪ್ಪಾ ಸಾಕು ಎನ್ನಿಸುತ್ತದೆ. ಒಂದೊಂಮ್ಮೆ ಅಪಾಯಮಾನವೆನಿಸುತ್ತಿದ್ದ ಅಮ್ಮನ ಸಾನಿಧ್ಯ, ಕಾಳಜಿ ಬರಬರುತ್ತ ಕಿರಿಕಿರಿ ಎನ್ನಿಸುತ್ತದೆ. ಕಡೆಗೆ  ಹೀಗೇ ಬಿಡು ಎಂದು ನಿರ್ಲಕ್ಷಿಸುವಂತೆ ಮಾಡುತ್ತದೆ.

ನಮ್ಮ ನಿನ್ನೆಗಳಿದ್ದಂತೆ ನಾಳೆಗಳಿರುವುದಿಲ್ಲ. ಬದುಕಿನ ಹಾದಿಯಲ್ಲಿ ಪ್ರತಿಯೊಂದು ಆಯಾಮಗಳೂ ಬದಲಾ ಗುತ್ತಲೇ ಸಾಗುತ್ತವೆ. ಆಧುನಿಕತೆಯನ್ನು ಮೇಳೈಸಿ ಕೊಳ್ಳುವುದು ತಪ್ಪಲ್ಲ. ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿ ಹೇಳುವುದು ತಾಯಿಯಿಂದ ಮಾತ್ರ ಸಾಧ್ಯ. ವ್ಯಂಗ್ಯವಾಗಿ ಮಾತನಾಡುವುದು, ಹಂಗಿಸುವುದು ಸರಿಯಲ್ಲ. ಎಲ್ಲದಕ್ಕೂ ಜನರೇಶನ್ ಗ್ಯಾಪ್‌ನ ಸಬೂಬು ನೀಡಿ ಈಗಿನವರೆಲ್ಲಾ ಸರಿ ಇಲ್ಲ ಎಂದು ಹಣೆಪಟ್ಟಿ ತಪ್ಪು. ಅಮ್ಮನ ಅತೀ ಬುದ್ದಿವಾದ, ಮಗಳ ಉದ್ಧಟತನ ಇಬ್ಬರಿಗೂ  ನೀಡುವುದು ಸಹಜ. ವಾದವಿವಾದಗಳು ಇಬ್ಬರ ಭಾವನೆಗಳಲ್ಲಿ ಬದಲಾವಣೆ ತಂದು ಸಂಬಂಧಗಳು ಹಾಳಾಗುತ್ತವೆ.

ಮನೆ, ಮಠ, ಗಂಡ, ಮಕ್ಕಳು ಎಂದೆಲ್ಲ ಯೋಚಿ ಸುವ ಅಮ್ಮನಿಗೂ ಬ್ಯುಸಿನೆಸ್, ಕೆರಿಯರ್, ಬ್ಯಾಂಕ್ ಬ್ಯಾಲೆನ್‌ಸ್ ಎಂದು ಓಡಾಡುವ ಮಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ದುಡ್ಡನ್ನು ಹೀಗೇ ಖರ್ಚು ಮಾಡ ಬೇಕು, ಇಷ್ಟೇ ಖರ್ಚು ಮಾಡಬೇಕೆಂಬ ಖಚಿತತೆ ಅವಳಲ್ಲಿರುತ್ತದೆ. ಗಂಡ ಕೊಟ್ಟ, ಅಪ್ಪ ಅಮ್ಮ ಕೊಟ್ಟ ದುಡ್ಡನ್ನು ಕೂಡಿಟ್ಟೂ ಕೂಡಿಟ್ಟೂ ಒಂದಷ್ಟು ಚಿನ್ನ ಮಾಡಿ

ಸ್ಕೊಂಡೆ ಎಂದು  ಕೊಚ್ಚಿಕೊಳ್ಳುವ ಅಮ್ಮಂದಿರ ಕಳಕಳಿ, ತನ್ನ ಸಂಬಳವನ್ನೆಲ್ಲ ಮನೆ, ಸೈಟ್ ಕೊಳ್ಳುವುದರಲ್ಲಿ, ಬೇರೆಬೇರೆ ಉದ್ಯಮದಲ್ಲಿ ಹಣ ತೊಡಗಿಸಿಕೊಳ್ಳುವ ಇಂದಿನ ಹೆಣ್ಣುಮಕ್ಕಳಿಗೆ

ಕಿರಿ ಕಿರಿ ಅನ್ನಿಸುವುದು ಸಹಜ. ಪಾಕೆಟ್ ಮನಿಗಾಗಿ ಗಂಡನನ್ನೇ ಅವಲಂಬಿಸುವ ಹುಡುಗಿಯರು ಕೂಡ ಈಗ ಅಪರೂಪ. ಇಷ್ಟೆಲ್ಲಾ ಮುಂದಾಲೋಚನೆ ಹೊಂದಿದ ಹೆಣ್ಣು ದಾರಿ ತಪ್ಪುವು ದಿಲ್ಲ. ಹೇಳಿ ಹೇಳಿ ತಪ್ಪಿಸುವ ಕೆಲಸವನ್ನು ಸುತ್ತಲಿನವರು ಮಾಡದಿದ್ದರಾಯಿತಷ್ಟೆ.

Tags

Related Articles

Leave a Reply

Your email address will not be published. Required fields are marked *

Language
Close