About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಅಮೃತಸರ ಸ್ಫೋಟ: ಇಬ್ಬರು ಸ್ಥಳೀಯ ಯುವಕರಿಂದಲೇ ಕೃತ್ಯ ಶಂಕೆ

ಚಂಡೀಗಢ: ಇಬ್ಬರು ಸ್ಥಳೀಯ ಯುವಕರೇ ಅಮೃತಸರದಲ್ಲಿ ಗ್ರೆನೇಡ್ ದಾಳಿಯನ್ನು ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಯುವಕರು ಆಶ್ರಮದ ಆವರಣದಲ್ಲಿ ಎರಡು ಬಾರಿ ತಿರುಗಾಡಿದ್ದಾರೆ. ಮತ್ತು ಭಾನುವಾರದಂದು ಧಾರ್ಮಿಕ ಸಭೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಈ ದಾಳಿಗೆ ಖಲಿಸ್ತಾನ್ ಭಯೋತ್ಪಾದಕರು ಯುವಕರಿಗೆ ಗ್ರೆನೇಡ್‍ಗಳನ್ನು ಪೂರೈಸಿದ್ದಾರೆ ಎನ್ನಲಾಗಿದೆ.

ಭಾನುವಾರ ಉದ್ದವಾಗಿ ಗಡ್ಡ ಬಿಟ್ಟಿದ್ದ ಇಬ್ಬರು ಪುರುಷರು ಎರಡು ದ್ವಿಚಕ್ರವಾಹನದಲ್ಲಿ ಬಂದಿಳಿದಿದ್ದಾರೆ. ಬಳಿಕ ರಾಜಸಾನ್ಸಿ ಗ್ರಾಮದಲ್ಲಿರುವ ನಿರಾನ್ಕಾರಿ ಭವನದಲ್ಲಿ ಗ್ರೆನೇಡ್ ಸ್ಫೋಟಿಸಿದ್ದಾರೆ.

ಇನ್ನು ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪಂಜಾಬ್ ನಲ್ಲಿ ಆರು ಮಂದಿ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಆರು ಮಂದಿ ಭಯೋತ್ಪಾದಕರು ನುಸುಳಿದ್ದಾರೆ ಎಂದು ಶಂಕೆ ವ್ಯಕ್ತವಾಗಿತ್ತು. ಅಲ್ಲದೆ ಈ ಭಯೋತ್ಪಾದಕರು ದೆಹಲಿಗೆ ಹೋಗಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಹೀಗಾಗಿ ಪಂಜಾಬ್‍‌ನಾದ್ಯಂತ ಹೈಅಲರ್ಟ್ ಘೋಷಿಸಲಾಗಿತ್ತು. ಕಟ್ಟೆಚ್ಚರ ಘೋಷಿಸಿದ ಬಳಿಕ ಇದೀಗ ಈ ಸ್ಫೋಟ ಸಂಭವಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close