About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಸರ್ಜಿಕಲ್‌ ದಾಳಿ ದಿನಾಚರಣೆಗೆ ಅಲಿಘಡ ಮುಸ್ಲಿಂ ವಿವಿಯಲ್ಲಿ ವಿರೋಧ

ಪಾಕ್‌ ಆಕ್ರಮಿತ ಕಾಶ್ಮಿರಕ್ಕೆ ನುಗ್ಗಿ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಿ ಬಂದ ಭಾರತೀಯ ಸೇನೆಯ  ಯೋಧರ ಶೌರ್ಯವನ್ನು ಸ್ಮರಿಸಲೆಂದು ಸೆಪ್ಟೆಂಬರ್‌ 29ನ್ನು ಸರ್ಜಿಕಲ್‌ ದಾಳಿ ದಿವಸವನ್ನಾಗಿ ಆಚರಿಸಲು ಯುಜಿಸಿ ನೀಡಿರುವ ಕರೆಗೆ ಅಲಿಘಡ ಮುಸ್ಲಿಂ ವಿವಿ ವಿರೋಧ ವ್ಯಕ್ತಪಡಿಸಿದೆ.

ಭಾರತ ವಿಭಜನೆಗೆ ಕಾರಣನಾದ ಮೊಹಮ್ಮದ್‌ ಅಲಿ ಜಿನ್ನಾ ಭಾವಚಿತ್ರವನ್ನು ವಿವಿಯ ಅಂಗಳದಿಂದ ಕಿತ್ತೊಗೆಯಲು ನಿರಾಕರಿಸಿದ್ದ ವಿಚಾರವಾಗಿ ಅಲಿಘಡ ವಿವಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿವಾದಕ್ಕೆ ಗ್ರಾಸವಾಗಿತ್ತು.

ಈ ಕುರಿತು ಮಾತನಾಡಿದ ಎಎಂಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಮಶ್ಕೂರ್‌ ಅಹ್ಮದ್‌ ಉಸ್ಮಾನಿ, “ಸೇನೆಯನ್ನು ಈ ಮಟ್ಟದಲ್ಲಿ ವೈಭವೀಕರಿಸುವ ಕೆಲಸವನ್ನು ಹಿಂದಿನ ಯಾವ ಸರಕಾರವೂ ಈ ಮಟ್ಟದಲ್ಲಿ ಮಾಡಿಲ್ಲ. ಭಾರತೀಯ ಸೇನೆ ಮೇಲೆಯೇ ಈ ವಿಚಾರ ಸಾಕಷ್ಟು  ಪ್ರಶ್ನೆಗಳನ್ನು ಮೂಡಿಸುತ್ತಿದೆ. ಪ್ರತಿ ವರ್ಷವೂ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ. ಸರ್ಜಿಕಲ್ ದಾಳಿ ದಿವಸವನ್ನು ಆಚರಿಸುವ ಅಗತ್ಯವಿಲ್ಲ” ಎಂದು ಹೇಳಿದ್ಧಾರೆ.

“ಸರ್ಜಿಕಲ್‌ ದಾಳಿಯ ವಾರ್ಷಿಕೋತ್ಸವ ಆಚರಿಸಬೇಕೆನಿಸಿದರೆ ಕೇಂದ್ರ ಸರಕಾರ ಹೋಗಿ ಸಂಘಗಳ ಶಾಖೆಗಳಲ್ಲಿ ಆಚರಿಸಲಿ. ಈ ಮೂಲಕ ಅದರ ಸದಸ್ಯರಲ್ಲಿ ದೇಶಭಕ್ತಿಯ ಭಾವಗಳು ಮೂಡಲಿ. ಸಾಧ್ಯವಾದರೆ ರಾಷ್ಟ್ರ ಧ್ವಜವನ್ನು ಹಾರಿಸಲಿ” ಎಂದು ಉಸ್ಮಾನಿ ಹೇಳಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close