ಶಾಸಕ ಆನಂದ್ ಸಿಂಗ್ ನಾಪತ್ತೆ: ದೂರು ದಾಖಲು

Posted In : ರಾಜ್ಯ

ಹೊಸಪೇಟೆ: ವಿಜಯನಗರ ಶಾಸಕ ಆನಂದ್ ಸಿಂಗ್ ನಾಪತ್ತೆಯಾಗಿದ್ದು ಹುಡುಕಿಕೊಡುವಂತೆ ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ಶಿವಯೋಗಿ ಹೊಸಪೇಟೆ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶಾಸಕರಾಗಿ ಆಯ್ಕೆಯಾಗಿರುವ ಆನಂದ್ ಸಿಂಗ್ ಕಳೆದೆರಡು ದಿನಗಳಿಂದ ಕಾಣೆಯಾಗಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಿಗಾಗಲಿ ಅಥವಾ ಜಿಲ್ಲಾ ಮಟ್ಟದ ನಾಯಕರಿಗಾಗಲಿ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಲ್ಲ ಮೂಲಗಳ ಪ್ರಕಾರ ಬಿಜೆಪಿಯವರು ಅಥವಾ ಇನ್ನಾರಾದರೂ ಕಿಡ್ನಾಪ್ ಮಾಡಿರುವ ಶಂಕೆಯಿದ್ದು ಅವರನ್ನು ಹುಡುಕಿಕೊಡುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಬಹುಮತ ಸಾಬೀತು ಪಡಿಸಲು ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ಇಳಿದಿದ್ದು, ಆನಂದ್ ಸಿಂಗ್ ಅವರನ್ನು ಖರೀದಿ ಮಾಡಿರುವ ಶಂಕೆಯಿದೆ. ಅಲ್ಲದೇ ಆನಂದ್ ಸಿಂಗ್ ಅವರಿಗೆ ಬೆದರಿಕೆ ಕೊಟ್ಟು ಕಾಂಗ್ರೆಸ್‌ನಿಂದ ದೂರ ಉಳಿಯುವಂತೆ ಸೂಚಿಸಿರುವ ಬಗ್ಗೆಯೂ ಗುಮಾನಿಯಿದೆ. ಹೀಗಾಗಿ ಆನಂದ್ ಸಿಂಗ್ ಅವರನ್ನು ಪೊಲೀಸರು ಹುಡುಕಿಕೊಡಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಮತ್ತೊಂದೆಡೆ ಆನಂದ್ ಸಿಂಗ್ ವಿರುದ್ಧ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಿಂಗ್ ಎಲ್ಲೇ ಇದ್ದರೂ ಕಾಂಗ್ರೆಸ್‌ಗೆ ಮರಳಬೇಕು, ಪಕ್ಷ ದ್ರೋಹಕ್ಕೆ ಅವರು ಇಳಿಯಬಾರದು. ಆನಂದ್ ಸಿಂಗ್ ಕಾಂಗ್ರೆಸ್ ತೊರೆದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅಸಮಾಧಾನ ವ್ಯಕ್ತ ಪಡಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ಆನಂದ್ ಸಿಂಗ್ ಪಕ್ಷ ಬದಲಿಸಿದ್ದೇ ಆದಲ್ಲಿ ಅವರು ಎದುರು ಮಹಿಳೆಯನ್ನು ಚುನಾವಣೆಯಲ್ಲಿ ನಿಲ್ಲಿಸಿ ಸೋಲಿಸುವುದಾಗಿಯೂ ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *

19 − five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top