About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕಾವೇರಿ ನದಿಯಲ್ಲಿ ಅನಂತಕುಮಾರ ಚಿತಾಭಸ್ಮ ವಿಸರ್ಜನೆ

ಮಂಡ್ಯ: ಅಗಲಿದ ಕೇಂದ್ರ ಅನಂತಕುಮಾರ ಅವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಕಾವೇರಿ ನದಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಸರ್ಜನೆ ಮಾಡಲಾಯಿತು.

ಬೆಂಗಳೂರಿನಿಂದ ವಾಹನದಲ್ಲಿ ತರಲಾದ ಚಿತಾಭಸ್ಮಕ್ಕೆ ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪೂಜೆಯೊಂದಿಗೆ ಗೌರವ ಸಲ್ಲಿಸಿದರು. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಗೆ ಚಿತಾಭಸ್ಮದೊಂದಿಗೆ ಅನಂತಕುಮಾರ ಅವರ ಕುಟುಂಬ ಸದಸ್ಯರು ತಲುಪಿದರು.

ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡವು ಚಿತಾಭಸ್ಮಕ್ಕೂ ಮುನ್ನ ಪೂಜೆ ಜತೆಗೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿತು. ಅನಂತಕುಮಾರ ಸಹೋದರ ನಂದಕುಮಾರ ಅವರು ವೇದಘೋಷ, ಶಾಂತಿಮಂತ್ರ ಮತ್ತು ನೆರೆದಿದ್ದವರ ಜಯಘೋಷದ ನಡುವೆ ಚಿತಾಭಸ್ಮ ವಿಸರ್ಜಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close