About Us Advertise with us Be a Reporter E-Paper

Breaking Newsದೇಶಪ್ರಚಲಿತ

ವಿಶ್ವಸಂಸ್ಥೆಯಿಂದ ಆಂಧ್ರ ಮುಖ್ಯಮಂತ್ರಿಗೆ ವಿಶೇಷ ಆಹ್ವಾನ

ಆಂಧ್ರಪ್ರದೇಶ್‌: ವಿಶ್ವಸಂಸ್ಥೆಯ ಪ್ರಧಾನ ಕಾರ್ಯ ಕ್ರಮವೊಂದಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ವಿಶ್ವಸಂಸ್ಥೆ ಆಹ್ವಾನಿಸಿದೆ.

ಸೆಪ್ಟೆಂಬರ್‌ 24 ರಂದು ನಡೆಯಲಿರುವ ವಿಶ್ವಸಂಸ್ಥೆಯಲ್ಲಿ ನಡೆಯಲಿರುವ  ’ಸುಸ್ಥಿರ ಕೃಷಿ ಆರ್ಥಿಕತೆ: ಅವಕಾಶ ಮತ್ತು ಸವಾಲುಗಳು’ ಎಂಬ ಶಿರ್ಶಿಕೆಯ ಪರಿಸರ ಕಾರ್ಯಕ್ರಮಕ್ಕೆ ವಿಶ್ವಸಂಸ್ಥೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಆಹ್ವಾನಿಸಿದೆ.

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಕಾರ್ಯ ನಿರ್ವಹಕ ಎರಿಕ್‌ ಸೊಲ್ಹಿಮ್‌  ಆಂಧ್ರಪ್ರದೇಶ ಸರಕಾರದ ’ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿಯ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಪ್ರಭಾವವನ್ನು ಪರಿವರ್ತಿಸುವುಕೆ’ ಯೋಜನೆಯ ಕುರಿತು ಚಂದ್ರಬಾಬು ಅವರಿಗೆ ಬರೆದ ಪತ್ರದಲ್ಲಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಅಲ್ಲದೇ ರಾಜ್ಯದಾದ್ಯಂತ 6 ಮಿಲಿಯನ್‌ ರೈತರಿಗೆ ಶೂನ್ಯ ಬಂಡವಾಳದಿಂದ ರಾಸಾಯನಿಕ ಬೇಸಾಯ ಮಾಡಲು ಹೊರಟಿರುವ ನಿಮ್ಮ ಮಹತ್ವಕಾಂಕ್ಷಿ ಯೋಜನೆಗೆ ವಿಶ್ವಸಂಸ್ಥೆಯ ಬೆಂಬಲವಿದೆ ಎಂದು ಸೊಲ್ಹಿಮ್‌ ಪತ್ರದಲ್ಲಿ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close