ವಿಶ್ವವಾಣಿ

ಯುವಕರಿಗೆ ನಿರುದ್ಯೋಗ ಭತ್ಯೆಯಾಗಿ ಮಾಸಿಕ 1000 ರು: ಆಂಧ್ರ ಸರಕಾರ

ಅಮರಾವತಿ: ನಿರುದ್ಯೋಗ ಯುವಕರ ಸಬಲೀಕರಣಕ್ಕೆ ’ಯುವ ನೆಸ್ತಂ ಯೋಜನೆ’ಯಡಿ ಮಾಸಿಕ 1000 ರುಗಳನ್ನು ನಿರುದ್ಯೋಗ ಭತ್ಯೆಯಾಗಿ ನೀಡುವುದಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.

 ಅಕ್ಟೋಬರ್‌ 2 ರಂದು ಈ ಯೋಜನೆಯನ್ನು ಜಾರಿಯಾಗಲಿದೆ. ಈ ಯೋಜನೆಯನ್ನು ಜಾರಿಗೊಳೊಸಲು ಮುಖ್ಯ ಕಾರಣ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವುದು, ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸುವುದು ಹಾಗೂ ಸ್ವಯಂ ಉದ್ಯೋಗಕ್ಕೆ ಆಧ್ಯತೆ ಕೊಡುವುದು ಅಲ್ಲದೇ ಯುವಕ ಸಬಲೀಕರಣದ ಜತೆಗೆ ದೇಶದ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವುದು ಇದರ ಗುರಿಯಾಗಿದೆ ಎಂದು ತಿಳಿಸಿದರು.

ರಾಜ್ಯ ಸರಕಾರ ಹತ್ತು ಲಕ್ಷ ಯುವಕರಿಗೆ ತರಬೇತಿ ನೀಡಲು ಸಿಂಗಾಪುರ, ಇಂಗ್ಲೇಂಡ್‌, ಜರ್ಮನಿಯಿಂದ 260 ತರಬೇತುದಾರರನ್ನು ನೇಮಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.