About Us Advertise with us Be a Reporter E-Paper

ವಿ +

ಕೋಪ ತಾಪ ಬಿಟ್ಟು ಬಿಡಿ…

- ರಂಗನಾಥ ಎನ್ ವಾಲ್ಮೀಕಿ

ಹಣ, ಅಧಿಕಾರ, ಅಂತಸ್ತು, ಕಾರ್ಯ ಧಕ್ಷತೆ ಎಲ್ಲವೂ ಇದ್ದರೂ ಮನುಷ್ಯ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲವೆನ್ನುತ್ತಾನೆ. ಕಾರಣ ಆತನ ಕೋಪ. ಕೋಪವೊಂದರಿಂದ ಮಾನಸಿಕವಾಗಿ ಅಲ್ಲದೆ ತನ್ನ ಸುತ್ತಮುತ್ತಲಿನವರಿಂದ ಗೌರವ, ಅಭಿಮಾನ ಭಾವನೆಯನ್ನು ಕಳೆದುಕೊಂಡು ಏಕಾಂಗಿಯಾಗುವನು. ‘ನನಗೆ ಕೋಪ ಬರುತ್ತದೆ’ ಎನ್ನುವ ಭಾವನೆ ನಿಮ್ಮ ಮನಸ್ಸಿನಲ್ಲಿದ್ದರೂ ಸಹ ಅದು ನಿಮ್ಮ ದೌರ್ಬಲ್ಯವೇ ಆಗಿರುತ್ತದೆ. ನಮ್ಮ ಕೋಪ ನಮಗಷ್ಟೇ ಅಲ್ಲದೇ ನಮ್ಮ ಸುತ್ತಲಿನ ವಾತಾವರಣವನ್ನು ಹಾಳು ಮಾಡುತ್ತದೆ. ತಾಳಿದವನು ಬಾಳಿಯಾನು ಎಂಬ ಮಾತು ಸಾರ್ವಕಾಲಿಕ ಸತ್ಯ. ಕೆಲವರು ಪದೇ ಪದೇ ಕೂಗಾಡುವುದು, ಸಿಟ್ಟು ಮಾಡಿಕೊಂಡು ರೇಗಾಡುತ್ತಾರೆ. ಅದರಿಂದ ಲಾಭಕ್ಕಿಂತ ಹಾನಿಯೇ ಅಧಿಕ. ಒಂದು ಕ್ಷಣದ ಕೋಪ ಅರವತ್ತು ನಿಮಿಷದ ನೆಮ್ಮದಿಯನ್ನು ಹಾಳು ಮಾಡುವುದು. ಸಿಟ್ಟಿನಿಂದಲೇ ಎಲ್ಲಾ ಕಾರ್ಯ ಆಗುತ್ತೆ ಅಂದರೆ ಅದರಂತಹ ತಪ್ಪು ತಿಳುವಳಿಕೆ ಮತ್ತೊಂದಿಲ್ಲ. ಆ ಕೋಪವನ್ನು ಬಿಟ್ಟು ನೆಮ್ಮದಿಯಾಗಿರಲು ಹೀಗೆ ಮಾಡಿ.

ಯೋಗ ಧ್ಯಾನ ಮಾಡಿ:
ಅತಿಯಾದ ಕೋಪ ಅನೇಕ ಮಾನಸಿಕ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಆದಷ್ಟು ನಮ್ಮ ಮನಸ್ಸು ಮತ್ತು ಭಾವಾವೇಶಗಳು ಹತೋಟಿಯಲ್ಲಿ ಇಡಬೇಕು. ಅದೆಷ್ಟೇ ಒಳ್ಳೆಯ ಕಾರ್ಯ ಮಾಡಲಿ, ಶ್ರೀಮಂತ ಆಗಿರಲಿ, ದೊಡ್ಡ ಹುದ್ದೆಯಲ್ಲಿಯೇ ಇರಲಿ, ನನ್ನಲ್ಲಿ ಕೋಪ ಮನೆ ನಾವು ಅತಿ ಆಪ್ತರೆನಿಸಿಕೊಂಡವರನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ನಾವೆಂದುಕೊಂಡಿದ್ದು ಆಗಲಿಲ್ಲ ಎಂದಾಕ್ಷಣ ನಿರಾಸೆ, ಕೋಪ ನಮ್ಮನ್ನಾವರಿಸುವುದು ಸಹಜ. ಆದರೆ ನಮ್ಮ ಬಯಕೆಯನ್ನು ಶಾಂತಿಯಿಂದಲೂ ಪಡೆಯಬಹುದು. ಈ ಕಾರಣ ಕೋಪ ನಿಯಂತ್ರಿಸಲು ಯೋಗ, ಧ್ಯಾನ ಮಾಡಿ. ಧ್ಯಾನದಿಂದ ನಿಮ್ಮ ಕೋಪ ನಿಯಂತ್ರಣಕ್ಕೆ ಬರುತ್ತದೆ. ಯೋಗ ನಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಗಟ್ಟಿಯಾಗಿ ಇಡುತ್ತದೆ.

ಹೋಲಿಕೆ ಸಲ್ಲದು:
ಮನುಷ್ಯನ ಕೆಟ್ಟ ಗುಣವೆಂದರೆ ಅದು ಹೋಲಿಕೆ ಮಾಡುವುದು. ಇತರರಿಗೆ ಸಿಕ್ಕ ಭಾಗ್ಯವೆಲ್ಲವೂ ತನಗೂ ಎನ್ನುವುದು ಸರಿಯಲ್ಲ. ವ್ಯಕ್ತಿಗಳಲ್ಲಿ, ವ್ಯಕ್ತಿತ್ವದಲ್ಲಿ ಭಿನ್ನತೆ ಸಹಜ. ಎಲ್ಲರ ಜತೆ ಸೇರಿ ಪ್ರೀತಿ ವಿಶ್ವಾಸದಿಂದ ಬದುಕು ಮುನ್ನಡೆಸುವುದು ಜೀವನದ ಬಯಕೆಯಾಗಬೇಕು. ಹೀಗಾಗಿ ನಾವೂ ಯಾವುದೇ ಕಾರಣಕ್ಕೂ ನಮ್ಮನ್ನು ಇತರರ ಜತೆ ಹೋಲಿಸಿಕೊಳ್ಳಬಾರದು.

ಪುಸ್ತಕಗಳನ್ನು ಓದಿ:
ಮನುಷ್ಯ ನೆಮ್ಮದಿಯಿಂದಿರಲು ಬದುಕಿನ ಮೂರು ರಂಗಗಳಲ್ಲಿ ತೃಪ್ತಿ ಇರಬೇಕು. ವೃತ್ತಿ ಜೀವನ, ಸಾಮಾಜಿಕ ಜೀವನ, ವೈಯಕ್ತಿಕ ಜೀವನ. ಈ ಮೂರು ರಂಗಗಳಲ್ಲು ತೃಪ್ತಿ ಇದ್ದರೆ ನೆಮ್ಮದಿ ಸಾಧ್ಯ. ಅದರ ಜತೆ ಮಾನಸಿಕ ನೆಮ್ಮದಿಗಾಗಿ ಹವ್ಯಾಸವನ್ನು ಬೆಳೆಸಿಕೊಳ್ಳಿ. ಓದು, ಆಟ, ಸಂಗೀತ, ನಾಟಕ ಇತರ ಕ್ರಿಯಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ತ್ಸಾಹದಿಮದ ತುಂಬಿರುತ್ತದೆ. ಮೂರು ರಂಗಗಳಲ್ಲೂ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಈ ಹವ್ಯಾಸಗಳು ಸಹಕಾರಿಯಾಗಿವೆ.

ಕೋಪಕ್ಕೆ ಕಾರಣ ತಿಳಿದಿರಲಿ:
ಅನೇಕರಿಗೆ ತಾವು ಯಾವ ವಿಚಾರದಿಂದಾಗಿ ಕುಪಿತಗೊಂಡಿದ್ದೇವೆ ಎನ್ನುವುದೇ ತಿಳಿದಿರುವುದಿಲ್ಲ. ಕೋಪಕ್ಕೆ ಕಾರಣ ಹಲವು. ಕಾರಣವಿಲ್ಲೆ ಕೋಪಿಸಿಕೊಳ್ಳುವವರೂ ಇದ್ದಾರೆ. ಮೊದಲು ಕೋಪಕ್ಕೆ ಕಾರಣ ಹುಡುಕಿಕೊಂಡು ಸಮಾಧಾನವಾಗಿ ಆ ಸಂಕಷ್ಟದಿಂದ ಹೊರ ಬರುವ ಯೋಚನೆ ಮಾಡಿ. ಗೆಲ್ಲೋಕೆ ಆಗದಿರುವುದನ್ನು ಪ್ರೀತಿ, ತಾಳ್ಳೆಯಿಂದ ಗೆಲ್ಲಬಹುದು.

Tags

Related Articles

Leave a Reply

Your email address will not be published. Required fields are marked *

Language
Close