Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...
ಸಾಮಾನ್ಯವಾಗಿ ಎಷ್ಟೋ ಸಾಫ್ಟ್ʼವೇರ್ ಇಂಜಿನಿಯರ್‌ಗಳು ವಾರಾಂತ್ಯದ ಬೇಸರ ಕಳೆಯಲು ಬೇರೆ ಬೇರೆ ಜಾಗಗಳಿಗೆ ಹೋಗಿ ಗಿಡ ನೆಟ್ಟು ಬರುತ್ತಾರೆ. ಅದಾದ ಮೇಲೆ ಆ ಗಿಡಗಳು ಏನಾದವು ಎಂದು ತಿರುಗಿ ನೋಡುವುದು ಕಡಿಮೆ. ಆದರೆ ಇಲ್ಲಿ ಹತ್ತಾರು ಜನ ಇಂಜಿನಿಯರ್‌ಗಳು ತಾವು ನೆಟ್ಟ ಗಿಡಗಳನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಕಾಪಾಡಿಕೊಂಡು ಬಂದು, ಈಗಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳು ತ್ತಿರುವುದನ್ನು ನೋಡಿ ನನಗೂ ಆಶ್ಚರ್ಯವಾಯಿತು.