About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಆಗಸ್ಟ್ 30ಕ್ಕೆ ಲಾಲೂ ಮತ್ತೆ ಜೈಲಿಗೆ ವಾಪಸ್: ಹೈಕೋರ್ಟ್

ಪೆರೋಲ್ ಮೇಲೆ ಬಿಡುಗಡೆಯಾಗಿರುವ ಲಾಲೂ ಪ್ರಸಾದ್ ಯಾದವ್ ಆಗಸ್ಟ್ 30ಕ್ಕೆ ಶರಣಾಗಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

ಪಾಟ್ನಾ: ಮೇವು ಹಗರಣದಲ್ಲಿ ಅದಾಗಲೇ ಜೈಲು ಪಾಲಾಗಿರುವ ಲಾಲೂ ಪ್ರಸಾದ್ ಯಾದವ್‍ಗೆ ಮೂರು ತಿಂಗಳು ಪೆರೋಲ್ ನೀಡಬೇಕೆಂಬ ಬೇಡಿಕೆಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿದೆ.

ಇನ್ನು ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಇತ್ತೀಚೆಗಷ್ಟೇ ಪೆರೋಲ್ ಮೇಲೆ ಹೊರ ಬಂದಿದ್ದರು. ಇನ್ನೂ ಮೂರು ತಿಂಗಳು ಪೆರೂಲ್ ನೀಡಬೇಕೆಂಬ ಲಾಲೂ ಮನವಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿದೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ರಾಂಚಿಯ ಆರ್ ಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಅವರನ್ನು ಮುಂಬೈನ ಏಷ್ಯನ್ ಹಾರ್ಟ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ದಾಖಲು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳು ಪೆರೋಲ್ ನೀಡಬೇಕೆಂದು ಲಾಲೂ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಈಗಾಗಲೇ ಪೆರೋಲ್‍ನಲ್ಲಿರುವ ಲಾಲೂ ಪ್ರಸಾದ್ ಯಾದವ್ ಅವರು ಆಗಸ್ಟ್ 30ಕ್ಕೆ ಮತ್ತೆ ಶರಣಾಗಬೇಕು ಎಂದು ಆದೇಶ ಹೊರಡಿಸಿದೆ.

ಇನ್ನು ಭಾರತೀಯ ರೈಲ್ವೆಯ ಹೋಟೆಲ್ ಗಳ ಗುತ್ತಿಗೆ ನೀಡುವ ವಿಚಾರದಲ್ಲಿ ಅವ್ಯವಹಾರ ಎಸಗಿದ್ದ ಸಂಬಂಧ, ಲಾಲೂ ಕುಟುಂಬದ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ದಾಖಲಿಸಿದೆ. ಈ ಮೂಲಕ ಲಾಲೂ ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಶುರುವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close