About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಆಂಬಿಡೆಂಟ್‌ ರೀತಿಯ ಮತ್ತೊಂದು ಹಗರಣ ಬಯಲಿಗೆ…!

ಬೆಂಗಳೂರು: ಹೂಡಿಕೆದಾರರಿಗೆ ಆಂಬಿಡೆಂಟ್ ವಂಚಿಸಿದ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ನಗರದಲ್ಲಿ ಮತ್ತೊಂದು ಇಂಥದ್ದೇ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಅಜ್ಮೀರ್‌ ಹೆಸರಿನಲ್ಲಿ ಸಾವಿರಾರು ಮಂದಿಯಿಂದ 100 ಕೋಟಿ ರೂ.ಗೂ ಅಧಿಕ ಹೂಡಿಕೆ ಹಣ ಪಡೆದು ಹಿಂದಿರುಗಿಸದ ಬಗ್ಗೆ ಈಗ ಆರೋಪ ಕೇಳಿ ಬಂದಿದೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯ ಎದುರು ಇಂದು ಬೆಳಗ್ಗೆ ಹಣ ಕಳೆದುಕೊಂಡ 50ಕ್ಕೂ ಅಧಿಕ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ. ಅಜ್ಮೀರ್‌ ಎಂಬ ಹೆಸರಿನ ಹೂಡಿಕೆ ಸಂಸ್ಥೆ ಸ್ಥಾಪಿಸಿದ್ದ ತಬ್ರೇಜ್ ಹಣ ನೀಡದೆ ವಂಚಿಸಿದ್ದಾರೆ. ಆಂಬಿಡೆಂಟ್ ವಂಚನೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ತಕ್ಷಣ ತಬ್ರೇಜ್ನನ್ನು ವಶಕ್ಕೆ ಪಡೆದು ನಮ್ಮ ಹಣ ಹಿಂದಿರುಗಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ಪ್ರಭಾವಿ ರಾಜಕೀಯ ವ್ಯಕ್ತಿಗಳೊಂದಿಗೆ ನಂಟು ಹೊಂದಿರುವ ತಬ್ರೇಜ್ ಅಜ್ಮೀರ್‌ ಎಂಬ ಪವಿತ್ರ ಯಾತ್ರಾ ಸಂಸ್ಥೆಯ ಹೆಸರಿನಲ್ಲಿ ಹೂಡಿಕೆ ಸಂಸ್ಥೆ ಮಾಡಿದ್ದಾರೆ. ಈಗಾಗಲೇ ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇದುವರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಲ್ಲ ಪ್ರತಿಭಟನಾಕಾರರು ಆರೋಪಿಸಿದರು. ಸಂತ್ರಸ್ಥರಿಂದ ಮನವಿ ಸ್ವೀಕರಿಸಿದ ಸಿಸಿಬಿ ಪೊಲೀಸರು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ.

ಆ್ಯಂಬಿಡೆಂಟ್ ಚಿಟ್ ಫಂಡ್ ರೀತಿಯಲ್ಲಿಯೇ ಕಾರ್ಯ ನಿರ್ವಹುಸುತ್ತಿದ್ದ ಅಜ್ಮೀರ್‌ ಚಿಟ್ ಫಂಡ್ ಕಂಪನಿ ವಿರುದ್ಧವೂ ವಂಚನೆ ಆರೋಪಿ ಕೇಳಿ ಬಂದಿದೆ. ಈ ಬಗ್ಗೆ ಕಳೆದ ಏಪ್ರಿಲ್‌ನಲ್ಲೇ ಜಯನಗರ ಹಾಗೂ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಅಜ್ಮೀರ್‌ ಗ್ರೂಪ್ ಚಿಟ್ ಫಂಡ್ ಮಾಲೀಕ ತಬ್ರೇಜ್ ಪಾಷ ಹಾಗೂ ಅಬ್ದುಲ್ ಎಂಬವರ ಮೇಲೆ ದೂರು ದಾಖಲಾಗಿತ್ತು.

ಅಜ್ಮೀರ್‌ ಗ್ರೂಪ್ಸ್ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿಗೆ ₹500 ಕೋಟಿಗೂ ಹೆಚ್ಚಿನ ಹಣ ವಂಚಿಸಿದ್ದಾರೆ ಎನ್ನಲಾಗಿದೆ. ಕಂಪನಿಗೆ ಹಣ ಹೂಡಿದ್ರೆ 4 ತಿಂಗಳಿಗೆ ಹೂಡಿದ ಹಣವನ್ನು ಡಬಲ್ ಮಾಡಿಕೊಡ್ತೀವಿ ಅಂತ ಹೇಳಿ ತಬ್ರೇಜ್ ಮತ್ತು ದಸ್ತರ್ಗಿ ಜನರಿಂದ ಹಣ ಹೂಡಿಕೆ ಮಾಡಿಸಿಕೊಳ್ತಿದ್ರು. ನಂತರ ತಬ್ರೆಜ್ ಮತ್ತು ಅಬ್ದುಲ್ ದಸ್ತರ್ಗಿ ಹೂಡಿಕೆದಾರರ ಹಣವನ್ನ ಹಿಂದಿರುಗಿಸದೇ ತಲೆ ಮರೆಸಿಕೊಂಡಿದ್ದರು.

ಬಳಿಕ ತಬ್ರೇಜ್ ಜಯನಗರದ ಬಳಿ ಕಾರಿನಲ್ಲಿ ತಬ್ರೇಜ್ ತೆರಳೊ ವೇಳೆ ಆತನನ್ನ ಹಿಂಬಾಲಿಸಿ ಹಿಡಿದು ತಿಲಕ್ ನಗರ ಪೊಲೀಸರ ವಶಕ್ಕೆ ನೀಡಿದ್ದರು. ಈ ವೇಳೆಗಾಗಲೇ ಅಜ್ಮೀರಾ ಗ್ರೂಪ್ಸ್‌ನ ಮತ್ತೊಬ್ಬ ಮಾಲೀಕ ಅಬ್ದುಲ್ ದಸ್ತಗಿರ್‌ ಪೊಲೀಸರಿಗೆ ಸೆರೆಯಾಗಿದ್ದ. 6 ತಿಂಗಳೊಳಗಾಗಿ ಜನರ ಹಣವನ್ನ ಹಿಂದಿರುಗಿಸುವಂತೆ ಹೇಳಿ ಬೇಲ್ ಮೇಲೆ ಹೊರಬಂದಿದ್ದ. ಈ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗ್ತಿದ್ದಂತೆ ತಬ್ರೇಜ್ ಮತ್ತು ದಸ್ತಗಿರ್‌ ಪೊಲೀಸರ ಕೈಗೂ ಸಿಗದೆ ತಲೆಮರೆಸಿಕೊಂಡಿದ್ದಾರಂತೆ.

ಸದ್ಯ ಸಾರ್ವಜನಿಕರು ಅಜ್ಮಿರ್‌ ಕೇಸ್ ಕೂಡ ಸಿಸಿಬಿಯಲ್ಲಿಯೇ ಇದೆ ಆದರೆ ಯಾವುದೇ ಪ್ರಯೋಜನ ತಕ್ಷಣವೇ ಕಾರ್ಯ ಪ್ರಗತಿಗೊಳಿಸಿ ಹಣ ವಾಪಸ್ಸು ಕೊಡಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ರಾಜಕಾರಣಿಗಳ ಬೆಂಬಲದಿಂದ ತಬ್ರೆಜ್ ಮತ್ತು ಅಬ್ದುಲ್ ದಸ್ತರ್ಗಿ ಮರೆಸಿಕೊಂಡಿದ್ದಾರೆ. ತಕ್ಷಣವೇ ಅವರನ್ನ ಬಂಧನ ಮಾಡುವಂತೆ ವಂಚನೆಗೊಳಗಾದವರು ಆಗ್ರಹಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close