About Us Advertise with us Be a Reporter E-Paper

Uncategorizedಅಂಕಣಗಳು

ಅತ್ಯಾಚಾರಗಳ ಹತೋಟಿಗೆ ಬೇರೆ ದಾರಿ ಯೋಚಿಸಬೇಕಿದೆ!

ವಿಶ್ಲೇಷಣೆ: ಡಾ. ಆರ್.ಜಿ. ಹೆಗಡೆ

‘ಡೆಕ್ಕನ್ ಹೆರಾಲ್‌ಡ್’ ಪತ್ರಿಕೆ ಇತ್ತೀಚೆಗೆ ಜಾಗತಿಕ ತಜ್ಞರ ವರದಿಯೊಂದನ್ನು ಆಧರಿಸಿದ ತುಂಬ ಕಳವಳಕಾರಿ ಸುದ್ದಿಯೊಂದನ್ನು ಪ್ರಕಟಿಸಿದೆ. ಅದೇನೆಂದರೆ ‘ಭಾರತ ಜಗತ್ತಿನಲ್ಲಿಯೇ  ಅತ್ಯಂತ ಅಪಾಯಕಾರಿ ದೇಶ’ ಎನ್ನುವುದು. ಆ ವರದಿಯ ಪ್ರಕಾರ ಮಹಿಳೆಯರ ವಿರುದ್ಧ ಹೆಚ್ಚಾಗಿ ಲೈಂಗಿಕ ಹಿಂಸೆಯ ಕುರಿತಾದ ಪ್ರಕರಣಗಳು 2007 ರಿಂದ 2016ರವರೆಗೆ ಶೇ.83ರಷ್ಟು ಹೆಚ್ಚಿದೆ. ಅಲ್ಲದೆ ಭಾರತದಲ್ಲಿ ಮಹಿಳೆಯರ ಸ್ಥಿತಿ ದಾರುಣವಾಗಿದೆ. ಯುದ್ಧಗಳಲ್ಲಿ ಸಿಲುಕಿ ನಲುಗಿ ಹೋಗಿರುವ ದೇಶಗಳಾದ ಅಪ್ಘಾನಿಸ್ತಾನ ಮತ್ತು ಸಿರಿಯಾದಂತಹ ದೇಶಗಳೇ ಮಹಿಳೆಯರ ಸ್ಥಿತಿಯ ದೃಷ್ಟಿಯಿಂದ ಒಳ್ಳೆಯ ಸ್ಥಾದಲ್ಲಿವೆ ಎಂದು ವರದಿ ಹೇಳಿದೆಯಂತೆ. ವರದಿ ನಿಜಕ್ಕೂ ಸತ್ಯವಾಗಿದ್ದರೆ ಇದು ತುಂಬ ದುಖಃದ, ನಮ್ಮ ನಾಗರಿಕ  ತಲೆತಗ್ಗಿಸಬೇಕಾದ ವಿಷಯ. ಕಳೆದ ಕೆಲವು ದಿನಗಳಲ್ಲಿಯಂತೂ ರೇಪ್ ಕುರಿತಾದ ತಲ್ಲಣಗೊಳಿಸುವಂತಹ ವರದಿಗಳು ದೇಶದ ಮೂಲೆ ಮೂಲೆಗಳಿಂದ ಹೊರಬಿದ್ದಿವೆ. ಉದಾಹರಣೆಗೆ ಇತ್ತೀಚಿಗೆ ನಡೆದ ಘಟನೆ ಇಪ್ಪತ್ತೇಳು ಬಾಲಕಿಯರ ಮೇಲೆ ನಡೆದ ಅತ್ಯಾಚಾರದ ಸುದ್ದಿ, ಎದೆ ನಡುಗಿಸುವಂತಹುದು.

ವರದಿಯ ಸತ್ಯಾಸತ್ಯತೆ ಪ್ರತ್ಯೇಕವಾಗಿ ಚರ್ಚಿಸಬೇಕಾದ ವಿಷಯ. ಆದರೂ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ದಾರುಣ ಕಥೆಗಳು ಪದೇ ಪದೇ ಸುದ್ದಿಯಾಗುತ್ತಿರುವುದು ಸತ್ಯವೇ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಇಂತಹ ಕಥೆಗಳು ಕೇಳಿ ಬರುತ್ತಲೇ ಇವೆ.  ಸರಕಾರಗಳೂ ಸ್ಮುುನೆ ಕುಳಿತಿಲ್ಲ. ಘಟನೆಗಳಿಗೆ ಗಂಭೀರವಾಗಿ, ತುರ್ತಿನಲ್ಲಿಯೇ ಸ್ಪಂದಿಸಿರುವ ಸರಕಾರ ‘ಫೋಕ್ಸೊ ಕಾಯಿದೆ’ಗೆ ತಿದ್ದುಪಡಿ ಮಾಡಿ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ವಿಧಿಸಬಹುದಾದ ಕಾನೂನನ್ನೂ ಜಾರಿಗೆತಂದಿದೆ. ಆದರೂ ಲೈಂಗಿಕ ದೌರ್ಜನ್ಯಗಳನ್ನು, ರೇಪ್‌ಗಳನ್ನು ತಡೆಗಟ್ಟಲು ಇನ್ನೂ ವಿಭಿನ್ನವಾದ ಕ್ರಮಗಳನ್ನೂ ಬಹುಶಃ ನಾವು ತೆಗೆದುಕೊಳ್ಳಬೇಕಾಗಿದೆ.

ಮಹಿಳೆಯರ ಮೇಲೆ ನಡೆಯಬಹುದಾದ ದೌರ್ಜನ್ಯಗಳಲ್ಲಿ ಅತಿ ಕ್ರೂರವಾದ ರೇಪ್ ಕುರಿತು, ಅದನ್ನು ತಡೆಗಟ್ಟುವ ಮಾರ್ಗೋಪಾಯಗಳ ಕುರಿತು ಯೋಚಿಸಬೇಕು. ಹೆಣ್ಣಿನ ಮೇಲೆ, ಅವಳು ಹೆಣ್ಣು ಎನ್ನುವ ಒಂದೇ ಕಾರಣಕ್ಕಾಗಿ  ನಡೆಸಬಹುದಾದ ಭೀಷಣ, ಕ್ರೂರಕ್ರಿಯೆ ಅತ್ಯಾಚಾರ. ಇಂತಹ ಭಯಾನಕ ಘಟನೆಯ ಹಿಂದಿರುವ ಮನಶ್ಯಾಸ್ತ್ರವನ್ನು ಗಮನಿಸಿಕೊಂಡು ಮುಂದೆ ಹೋಗಬೇಕು. ಯಾವುದೇ ಹೆಣ್ಣು ಸುಲಭವಾಗಿ ಅತ್ಯಾಚಾರಕ್ಕೆ ಎಡೆಮಾಡಿಕೊಡುವುದೂ ಇಲ್ಲ, ಬಗ್ಗುವುದೂ ಇಲ್ಲ. ತನ್ನಿಂದ ಸಾಧ್ಯವಿರುವಷ್ಟು, ತನ್ನ ಕೈಮೀರಿ ಪ್ರತಿಭಟನೆ ಒಡ್ಡಿಯೇ ಒಡ್ಡುತ್ತಾಳೆ. ಕಾಮದ ದಳ್ಳುರಿಯಲ್ಲಿ ಬೇಯುತ್ತಿರುವ, ತನ್ನ ತೃಷೆ ಹಿಂಗಿಸಿಕೊಳ್ಳಲು ತೀವ್ರ ಅವಸರದಲ್ಲಿರುವ, ಬಹುಶಃ ಹತಾಶನಾಗಿರುವ ಗಂಡು ಮೊದಲು ಆಕೆಯನ್ನು ತೀವ್ರ ಹಿಂಸಿಸಬೇಕಾಗುತ್ತದೆ. ಯಾವ ಮಟ್ಟಕ್ಕೆ ಎಂದರೆ ಆಕೆ ದೈಹಿಕವಾಗಿ, ಮಾನಸಿಕವಾಗಿ ಸೋತು  ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಚೀರಾಡಿ, ಹೋರಾಡಿ, ಚಿರತೆಯಂತೆ ಕಾದಾಡಿ, ಅತ್ತು ಮುಗಿಸಿ, ಸೋತು ಲೈವ್ ಆದ ಹೆಣವಾಗುತ್ತಾಳೆ. ಹೀಗೆ ಶವವಾಗಿ ಮಲಗಿದ ಮೇಲೆ ಈ ಕೃತ್ಯ ಎಸಗಲಾಗುತ್ತದೆ ಎಂದೇ ಭಾವನೆ. ಗಮನಿಸಬೇಕಾದ ವಿಷಯವೆಂದರೆ ಅತ್ಯಾಚಾರಿ ಮಾನಸಿಕವಾಗಿ ಅತ್ಯಂತ ಕ್ರೂರ ಪ್ರಾಣಿಯಾಗಿರಬೇಕಾಗುತ್ತದೆ. ಕಾಡು ಮೃಗಕ್ಕಿಂತಲೂ ಹೆಚ್ಚು. ಬಹುಶಃ ಪ್ರಾಣಿ ಪ್ರಕಾರಳಲ್ಲಿಯೂ ಈ ರೀತಿ ಹಿಂಸೆ ಇರುವುದಿಲ್ಲ. ಇಂತಹ ಮೃಗೀಯ ದಾಳಿಗೆ ಸಿಲುಕುವ ಹೆಣ್ಣು ಮಾನಸಿಕವಾಗಿ, ದೈಹಿಕವಾಗಿ ತನ್ನದೆಲ್ಲವನ್ನು ಕಳೆದುಕೊಂಡ ಭಾವನೆ ಅನುಭವಿಸಿ  ಖಿನ್ನತೆಯತ್ತ ಮಾನಸಿಕವಾಗಿ ಪಯಣಿಸುತ್ತಾಳೆ. ಕೆಲವೂಮ್ಮೆ ಆತ್ಮಹತ್ಯೆಗೆ ಶರಣಾಗುತ್ತಾಳೆ.

ಅತ್ಯಾಚಾರದ ಹಿನ್ನೆಲೆಯಲ್ಲಿ ಎರಡು ಪ್ರಮುಖ ವಿಷಯಗಳು ಇವೆ. ಒಂದನೆಯದು ಮೂಲತಃ ವಿಕೃತ ಗಂಡಿನ ಮನಸ್ಸಿನ ಆಳದಲ್ಲೆಲ್ಲೋ ಇರುವ ಬೇಟೆಯಾಡುವ ಆಸೆ. ಎರಡನೆಯದು ಹೆಣ್ಣಿನ ಶರೀರ ರಚನೆ. ಇವೆರಡೂ ಎಂದೂ ಬದಲಾಗದ ವಾಸ್ತವಗಳು ಬಹುಶಃ ರೇಪ್‌ಗೆ ಅನುವು ಮಾಡಿಕೊಡುತ್ತವೆ. ಹೀಗಾಗಿ ಇತಿಹಾಸದುದ್ದಕ್ಕೂ ರೇಪ್‌ಗಳ ದುರಂತದ ಕಥೆಗಳು ಕಣ್ಣೀರಾಗಿ ಭೂಮಿಯಲ್ಲಿ ಇಂಗಿ ಹೋಗಿವೆ. ಚರಿತ್ರೆಯುದ್ದಕ್ಕೂ ನೋಡುವುದಾದರೆ, ಯುದ್ಧ ಗೆದ್ದ, ಮದವೆತ್ತ, ಉನ್ಮತ್ತ ಕ್ರೂರ  ಸೋತ ದೇಶಗಳ ಮಹಿಳೆಯರೊಂದಿಗೆ ಹೇಗೆ ವರ್ತಿಸಿರಬೇಕು? ಎಂಬುದನ್ನುಯೋಚಿಸಿದರೆ ದುಃಖದಿಂದ ಎದೆಬಿರಿಯುತ್ತದೆ. ಹಾಗೆಯೇ ಭಾರತ ಪಾಕಿಸ್ತಾನ ವಿಭಜನೆಯಂತಹ ಸಂದರ್ಭಗಳಲ್ಲಿ ನಡೆದ ಮಾಸ್ ರೇಪ್‌ಗಳ ಕಥೆಗಳೂ ಮನಸ್ಸನ್ನು ಆಳವಾಗಿ ಕಲಕುವಂಥವುಗಳು. ಮನುಕುಲದ ಬಗ್ಗೆಯೇ ವಾಕರಿಕೆ, ಹೇಸಿಗೆ, ಹೇವರಿಕೆ ಹುಟ್ಟಿಸುವಂತಹವುಗಳು.ದೇಶದ ಎದೆಯನ್ನೇ ನಡುಗಿಸಿದ್ದ ನಿರ್ಭಯ ರೇಪ್ ಕಥೆ ನಮಗೆ ಗೊತ್ತಿದೆ.ಅಲ್ಲಿ ಕ್ರೌರ‌್ಯ ಯಾವ ಮಟ್ಟಕ್ಕೆ ಹೋಗುತ್ತೆಂದರೆ ವಿಷಯ ಕೇವಲ ರೇಪ್‌ನಲ್ಲಿ ಮುಗಿದಿರಲಿಲ್ಲ.ಅಲ್ಲಿ ಹಿಂಸೆಯ ಪ್ರತಿಫಲವಾಗಿ ಅವಳ ಕರುಳು ಕಿತ್ತು ಹೋಗಿತ್ತು. ಈ ಘಟನೆ  ಇಂತಹ ಘಟನೆಗಳು ರೇಪ್‌ನ ಇನ್ನೊಂದು ಒಳ ಆಯಾಮವನ್ನು ಸೂಚಿಸುವುದನ್ನೂ ನಾವು ಗ್ರಹಿಸಬೇಕು. ಅದೇನೆಂದರೆ ಗಂಡು ಹೆಣ್ಣನ್ನು ಎಷ್ಟೇ ಹಿಂಸಿಸಿದರೂ ರೇಪ್‌ನಲ್ಲಿ ಗಂಡೊಂದು ಹೆಣ್ಣಿನಿಂದ ನಿರೀಕ್ಷಿಸುವಂತಹುದು ಆತನಿಗೆ ಬಹುಶಃ ಸಿಗುವುದೇ ಇಲ್ಲ. ಏಕೆಂದರೆ ಹೆಣ್ಣಿಗೆ ಇರುವ ಹಾಗೆ ದೇಹ ರಚನೆಯಲ್ಲಿ ಗಂಡಿಗೂ ಕೆಲವು ಮಿತಿಗಳಿವೆ. ಅದೇನೆಂದರೆ ಬಲಾತ್ಕಾರದ ಹಿಂಸೆಯಲ್ಲಿ ಗೆದ್ದರೂ ಒಳಗಿನಿಂದ ಆತ ಸೋತು ಹೋಗಿರುವ ಸಂಭವಗಳಿರುತ್ತವೆ. ಹೀಗಾಗಿ ಗಂಡು ಜಾತಿಗೆ ಸಂಬಂಧಪಟ್ಟ ದೈಹಿಕ ಕಾರಣಗಳಿಂದ ತನ್ನ ತೃಷೆಯನ್ನು ನಿಜವಾಗಿ  ಗಂಡಸು ಹತಾಶೆಗೊಂಡು, ರೋಷಗೊಂಡು ಸ್ಯಾಡಿಸ್‌ಟ್ ಆಗಿ ಹೋಗುವ ಸಾಧ್ಯತೆ ಇರುತ್ತದೆ. ತೃಷೆ ತೀರಿಸಿಕೊಳ್ಳುವುದು ಅಸಾಧ್ಯವಾದಾಗ ಗಂಡಿನಲ್ಲಿ ಹುಟ್ಟಿಕೊಳ್ಳುವ ಹತಾಶೆಯ ಭಾವನೆ ರೇಪ್‌ನಲ್ಲಿ ಕಾಮವನ್ನು ಬಹುಶಃ ಕ್ರೋಧವಾಗಿ ಪರಿವರ್ತಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ರೇಪ್ ತೀವ್ರ ಹಿಂಸಾತ್ಮಕವಾಗಲು ಕಾರಣ ಆ ಸಂದರ್ಭದಲ್ಲಿ ಗಂಡಸಿನ ವಿಫಲತೆ ಹತಾಶೆಯೇ ಇರಬಹುದು.

ದೆಹಲಿಯ ನಿರ್ಭಯ ಘಟನೆಯಲ್ಲಿ ಹೆಣ್ಣೊಬ್ಬಳನ್ನು ಕಲ್ಪನೆಗೆ ಮೀರಿದ ರೀತಿಯಲ್ಲಿ ಹಿಂಸಿಸಿದ ರಾಕ್ಷಸತ್ವ ಹುಟ್ಟಿಕೊಂಡಿದ್ದು ಬಹುಶಃ ಹೀಗೆ. ಹೇಗೆಂದರೆ ಅವಳು ತೀವ್ರ ಪ್ರತಿಭಟನೆ ಒಡ್ಡಿರಬೇಕು.  ಪ್ರತಿಭಟನೆಯ ನಡುವೆ ಅವರ ಗಂಡಸುತನ ಇಂಗಿ ಹೋಗಿರಬೇಕು. ಹೀಗೆ ಕೈಗೆ ಸಿಕ್ಕಿದ್ದು ಸಿಗದಂತೆ ಆಗಿ ಹೋದಾಗ ಕಾಮ ಕ್ರೌರ್ಯವಾಗಿ ಪರಿವರ್ತನೆಗೊಂಡಿಬೇಕು. ಈ ಘಟನೆ ಬಹುಶಃ ಹೇಳುವುದೆಂದರೆ ಗಂಡಸಿನ ಹತಾಶೆಯ ಪ್ರಮಾಣ ಹೆಚ್ಚಿದಂತೆ ಕ್ರೌರ್ಯದ ಪ್ರಮಾಣ ಹೆಚ್ಚಿರುತ್ತದೆ.

ಬಹುಶಃ ರೇಪ್ ಆಸೆ ವಿಕೃತ ಪುರುಷನೊಬ್ಬನ ಮನಸ್ಸಿನ ಮೂಲದಲ್ಲಿ ಹುಟ್ಟಿಕೊಳ್ಳುವುದು ತೀವ್ರ ಕಾಮದ ಬೆಂಕಿಯ ರೂಪದಲ್ಲಿ. ಆ ಬೆಂಕಿ ತನ್ನನ್ನು ತಾನು ಶಮನ ಮಾಡಿಕೊಳ್ಳುವ ಪ್ರಯತ್ನದಲ್ಲಿ ಸುಲಭವಾದ ದಾರಿಗಳಿಗೆ ಹುಡುಕಾಡುತ್ತದೆ, ಬೇಟೆಯಾಡುತ್ತದೆ.  ಸಿಗುವವರು ಯಾರು ಅಪ್ರಾಪ್ತರು. ತೀರ ಚಿಕ್ಕ ಮಕ್ಕಳು ಅಥವಾ ಕೈಲಾಗದ ವೃದ್ಧೆಯರು. ಹೆಚ್ಚು ಹೆಚ್ಚಾಗಿ ಚಿಕ್ಕ ಮಕ್ಕಳೇ ರೇಪ್‌ಗೆ ಬಲಿಯಾಗುತ್ತಿರಲು ಕಾರಣವೆಂದರೆ, ಮಕ್ಕಳನ್ನು, ಅವರ ಮುಗ್ಧತೆಯನ್ನು ಸುಲಭವಾಗಿ ದುರಪಯೋಗ ಪಡಿಸಿಕೊಳ್ಳಬಹುದು ಹಾಗೂ ಮಕ್ಕಳು ಇಂತಹ ಕೃತ್ಯಗಳಿಗೆ ತೀವ್ರವಾಗಿ ಪ್ರತಿರೋಧ ಒಡ್ಡುವುದಕ್ಕೆ ಅಸಾಧ್ಯವಾಗುವುದು. ಇವೇ ವಿಕೃತಕಾಮಿಗಳು ಮಕ್ಕಳನ್ನು ಗುರಿಯಾಗಿಸಿಕೊಂಡಿರುವುದಕ್ಕೆ ಪ್ರಮುಖ  ಕಾರಣಗಳು.

ಪ್ರಾಯದ ಹೆಣ್ಣು ಮಕ್ಕಳನ್ನು ಹುಡುಕಿ ಹೋಗಿ ರಿಸ್‌ಕ್ ತೆಗೆದುಕೊಳ್ಳುವಷ್ಟು ಸಹನೆ ಬಹುಶಃ ರೇಪಿಸ್‌ಟ್ಗಳಿಗೆ ಬಹುಶಃ ಇರುವುದಿಲ್ಲ. ಇನ್ನೂ  ವಿಷಯವೆಂದರೆ ತೀವ್ರ ಕಾಮುಕತೆಯಲ್ಲಿ ಕ್ರೌರ್ಯದ ಅಂಶಗಳು ಇರುತ್ತವೆಂದೇ ಭಾವನೆ. ಹೆಣ್ಣನ್ನು ಸಂಪೂರ್ಣವಾಗಿ ಸೋಲಿಸುವ, ತಾನು ಗೆಲ್ಲುವ, ಆ ಮೂಲಕ ತನ್ನ ಉಜಟ  ತೃಪ್ತಿ ಪಡಿಸಿಕೊಳ್ಳುವ ಮಾನಸಿಕ ಸ್ಥಿತಿ ಗಂಡಸಿನ ಕಾಮದ ಮಶ್ಯಾಸ್ತ್ರದ ಭಾಗವಾಗಿರುತ್ತದೆ ಎನ್ನುವುದು ವಿಧಿತವಾದ ವಿಷಯ. ರೇಪ್ ನಡೆಯುವುದು ಜ್ವಾಲೆಯನ್ನು ತಣಿಸುವ ಭಾಗವಾಗಿ. ಅಷ್ಟು ಹೊತ್ತಿಗೆ ಬೆಂಕಿ ಶಮನವಾಗಲೇ ಬೇಕು. ಯಾವ ದಾರಿಯಿಂದಾದರೂ, ಸುಲಭವಾಗಿ, ತೃಪ್ತಿಕರವಾಗಿ ಸಿಕ್ಕಿಬಿಟ್ಟರೆ ಎಲ್ಲವೂ ಸುಲಭದಲ್ಲಿ ಮುಗಿದು ಹೋಗಬಹುದು. ಅಂದರೆ ವಿಕೃತ ಪುರುಷನಿಗೆ  ಪೂರೈಕೆಗೆ ವ್ಯವಸ್ಥೆಯೊಂದಿದ್ದರೆ ರೇಪ್ ಆಗಲಿಕ್ಕಿಲ್ಲ.

ಸ್ಪಷ್ಟವಾಗಿ ಅರಿತುಕೊಳ್ಳಬೇಕಾಗಿದ್ದೇನೆಂದರೆ, ಮೂಲದಲ್ಲಿ ರೇಪ್ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ವಿಕೃತಿ. ಹಾಗಾಗಿ ಇಂದು ಹೆಣ್ಣಿಗೆ ಒದಗಿ ಬಂದಿರುವ ಹೆಚ್ಚಿನ ಸ್ವಾತಂತ್ರ್ಯವೇ ರೇಪ್‌ಗೆ ಇಂಬು ನೀಡುತ್ತಿದೆ ಎಂಬ ವಾದ ತಪ್ಪೆಂದೇ ಗ್ರಹಿಕೆ. ಕೇವಲ ಮಹಿಳೆಯರನ್ನು ಸುಸಂಸ್ಕೃತರಾಗಿಸುವುದರಿಂದ ಅತ್ಯಾಚಾರಗಳನ್ನು ಪೂರ್ತಿಯಾಗಿ ತಡೆಗಟ್ಟಲು ಸಾಧ್ಯವಿಲ್ಲ.

ಹಾಗೆಯೇ ಕಾನೂನಾತ್ಮಕ ಕ್ರಮಗಳಿಂದಲೂ ರೇಪ್‌ನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಏಕೆಂದರೆ ಹಲವು ಕುಟುಂಬಗಳು ಇಂತಹ ವಿಷಯಗಳನ್ನು ಸಾರ್ವಜನಿಕರಲ್ಲಿ ಹೇಳಿಕೊಳ್ಳಲು ಬಯಸುವುದಿಲ್ಲ. ಇಂತಹ ವಿಷಯಗಳು  ಎನ್ನುವ ಭಯ ಅವರನ್ನು ಕಾಡುತ್ತಿರುತ್ತದೆ. ಮರಣದಂಡನೆಯಂತಹ ಶಾಸನದಿಂದ ಕೂಡ ಅತ್ಯಾಚಾರಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು ಸಾಧ್ಯವಿಲ್ಲ. ಏಕೆಂದರೆ ಅತ್ಯಾಚಾರವಾದ ನಂತರ ಕಾನೂನು ಪ್ರಕ್ರಿಯೆಯಲ್ಲಿ ಭಾಗವಹಿಸಲು ಮಾನಸಿಕವಾಗಿ ಜರ್ಜರಿತಳಾದ ಸಂತ್ರಸ್ತೆಗೆ ಇಚ್ಛೆ ಇರುವುದು ಕಡಿಮೆ. ಸರಕಾರವೇ(ಖಖಿ )ಸ್ವಯಂ ಪ್ರೇರಣೆಯಿಂದ ಕೇಸ್ ಫೈಲ್ ಮಾಡಬಹುದು. ಆದರೂ ಎಲ್ಲವೂ ನಾಶವಾದ ಮೇಲೆ ಈ ರೀತಿಯ ಕಾನೂನಾತ್ಮಕ ಪ್ರೋಸಿಜರ್‌ಗಳಲ್ಲಿ ಏಕೆ ಸಿಲುಕಿಹಾಕಿಕೊಳ್ಳಬೇಕು ಎಂದು ಸಂತ್ರಸ್ತೆ ಯೋಚಿಸಿ ವಿಷಯವನ್ನೇ ಬಿಟ್ಟು ಬಿಡುವ ಸಾಧ್ಯತೆ ಇರುತ್ತದೆ. ಅಲ್ಲದೇ ಅತ್ಯಾಚಾರದಂತಹ  ತೊಡಗಿರುವ ವ್ಯಕ್ತಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರ ತಂಟೆಯೇ ಬೇಡ ಎಂದು ಯೋಚಿಸಿ ಸಂತ್ರಸ್ತೆ ಸಮಾಜದಿಂದ ದೂರ ಉಳಿಯುವ ಸಾಧ್ಯತೆಯೂ ಇರುತ್ತದೆ. ಆದರೂ ಕಠಿಣವಾದ ಕಾನೂನು ಅತ್ಯಾಚಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಸಹಕಾರಿಯಾಗಬಹುದು.

ಕೇಂದ್ರ ಸಚಿವ ಸಂತೋಷ್ ಗಂಗವಾರ್ ಹೇಳಿದ ವರದಿಯಂತೆ ಭಾರತದಂತಹ ದೊಡ್ಡ ದೇಶದಲ್ಲಿ ಅತ್ಯಾಚಾರಗಳನ್ನು ಸಂಪೂರ್ಣ ತಡೆಯುವುದು ಹೆಚ್ಚು ಕಡಿಮೆ ಅಸಾಧ್ಯವಿರಬಹುದು. ಮಾತು ಅಪ್ರಿಯವಾದರೂ ಸತ್ಯವೇ. ಆದರೆ ನಾಗರಿಕ ಸಮಾಜಗಳು  ಕುರಿತಾಗಿ ಪ್ರಯತ್ನಿಸಲೇ ಬೇಕು.

ಈ ಹಿನ್ನೆಲೆಯಲ್ಲಿ ಅತ್ಯಾಚಾರದ ನಿಯಂತ್ರಣಕ್ಕೆ ಬಹುಶಃ ಇನ್ನೊಂದು ಕ್ರಮವನ್ನು ಗಂಭೀರವಾಗಿ ಚಿಂತಿಸಬೇಕಿದೆ. ಸ್ಪಷ್ಟವಾಗಿರುವ ವಿಷಯವೆಂದರೆ ಅತ್ಯಾಚಾರದ ಮೂಲವಿರುವುದು ಕಾಮದ ತೃಷೆಯಲ್ಲಿ. ಹಾಗಾಗಿ ಅದನ್ನು ನಿಯಂತ್ರಿಸಬಹುದಾದ ರೀತಿಯನ್ನು ಕೂಡ ನಾವು ಅಲ್ಲಿಯೇ ಕಂಡುಕೊಳ್ಳಬೇಕು

ಲೈಂಗಿಕ ಕಾರ್ಯಕರ್ತೆಯರನ್ನು ಲೀಗಲೈಸ್ ಮಾಡುವ ಕ್ರಮ ತೆಗೆದುಕೊಳ್ಳುವುದೂ ನಮ್ಮ ಸಮಾಜದ ಸಂದರ್ಭದಲ್ಲಿ ಅಷ್ಟು ಸುಲಭದ ವಿಷಯವಲ್ಲ ಎನ್ನುವುದು ಕೂಡ ಸರಿಯೇ. ಏಕೆಂದರೆ ಇಲ್ಲಿ ರಾಷ್ಟ್ರದ ಸಂಸ್ಕೃತಿಗೆ, ಸಭ್ಯತೆಗೆ ಮತ್ತು ಯುವ ಜನತೆಯ  ಆರೋಗ್ಯಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಪ್ರಸ್ತುತವಾಗುತ್ತವೆ. ಕಠಿಣ ನಿರ್ಧಾರವೇ ಸರಿ. ಆದರೂ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಬಹುಶಃ ನಾವು ಈ ಕುರಿತಾಗಿ ರಾಷ್ಟ್ರೀಯ ಚರ್ಚೆ ಆರಂಭಿಸಿ ಇಂತಹ ಕ್ರಮವೊಂದರ ಸಾಧ್ಯಾಸಾಧ್ಯತೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ ಎಂಬುದೇ ನನ್ನ  ಅನಿಸಿಕೆ.

Tags

Related Articles

Leave a Reply

Your email address will not be published. Required fields are marked *

Language
Close