About Us Advertise with us Be a Reporter E-Paper

ಅಂಕಣಗಳು

ದಕ್ಷಿಣದಲ್ಲಿ ದಿಗ್ವಿಜಯಕ್ಕೆ ಸಿಕ್ಕ ಮತ್ತೊಬ್ಬ ಯೋಗಿ!

ಪಿ. ಅತ್ರಿವಂಶಿ

ಕಸಭಾ ಚುನಾವಣೆಗೆ ಬಿಜೆಪಿ ಭಾರೀ ಗೇಮ್ ಪ್ಲಾನ್ ರೂಪಿಸುತ್ತಿದೆ. ದಕ್ಷಿಣದಿಂದ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು, ಉತ್ತರದಲ್ಲಿ ಆಗಬಹುದಾದ ನಷ್ಟ ಸರಿದೂಗಿಸಿಕೊಳ್ಳಲು ಸ್ಕೆಚ್ ಹಾಕಿದೆ. ಅದಕ್ಕಾಗಿ ಮತಗಳನ್ನು ಸೆಳೆಯಬಲ್ಲ ನಾಯರನ್ನೇ ಸೇನಾನಿಯನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಹುಕುಂ ಹೊರಡಿಸಿದ್ದಾರೆ. ಫರ್ಮಾನು ಪಡೆದುಕೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ದೇಶಾದ್ಯಂತ ಬ್ರಾಂಡ್ ಲೀಡರ್‌ಗಳನ್ನು ಹುಡುಕುತ್ತಿದ್ದಾರೆ. ದಕ್ಷಿಣದಲ್ಲೂ ಒಬ್ಬ ಆದಿತ್ಯನಾಥ್!

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಮಗೇನೂ ಅಪರಿಚಿತರಲ್ಲ. ಮೋದಿಶಾ ಜೋಡಿಯ ಪ್ಲಾನಿಂಗ್ ಕರಾರುವಕ್ಕಾಗಿ ರಣರಂಗದಲ್ಲಿ ಜಾರಿಗೆ ತಂದ ಯೋಗಿ ಉತ್ತರಾಪಥೇಶ್ವರನಾಗಿದ್ದು ಈಗ ಇತಿಹಾಸ. ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್, ಐತಿಹಾಸಿಕ ಗೆಲುವಿನ ಬಳಿಕವೂ ಉತ್ತರಪ್ರದೇಶದಲ್ಲಿ ಸ್ಪಷ್ಟ ಮತವಿಭಜನೆ ಮಾಡುತ್ತಿದ್ದಾರೆ. ಹಿಂದುತ್ವವನ್ನೇ ಪರಮ ಅಜೆಂಡಾ ಮಾಡಿಕೊಂಡಿರುವ ಯೋಗಿ, ಸಧ್ಯಕ್ಕಂತೂ ಪವರ್ ಫುಲ್ ಲೀಡರ್ ಆಗಿ ಹೊರಹೊಮ್ಮಿದ್ದಾರೆ. ಮೋದಿ ಬಳಿಕ ಯೋಗಿ ಎನ್ನುವಷ್ಟರ ಮಟ್ಟಿಗೆ ರೆಡಿಯಾಗುತ್ತಿದ್ದಾರೆ. ರಾಜಕೀಯವಾಗಿ ಪರಿಪಕ್ವವಾಗುತ್ತಿದ್ದಾರೆ.

ಅಲ್ಲಿಂದ ಅವರ ಬದುಕಿನ ಮಹತ್ವದ ಬಾಗಿಲು ತೆರಯುತ್ತದೆ. ಮಹಾಂತ ಅವಿದ್ಯಾನಾಥ್ ತಮ್ಮ ಉತ್ತರಾಧಿಕಾರಿ ಪಟ್ಟವನ್ನು ಆದಿತ್ಯನಾಥ್ ಗೆ ನೀಡಿದರು. ಅಲ್ಲಿಂದ ಮುಂದಿನದು ಯೋಗಿಯ ಶಕೆ ಪ್ರಾರಂಭ. ತಮ್ಮ ಉದ್ರೇಕ ಭಾಷಣದ ಮೂಲಕ ವಿವಾದಿತ ಹಿಂದೂ ನಾಯಕರಾಗಿ ಆದಿತ್ಯನಾಥ್ ಕಾಣಿಸಿಕೊಂಡರು. 1998ರಲ್ಲಿ ಗೋರಖ್ ಪುರ್‌ನಲ್ಲಿ ಚುನಾವಣೆಗೆ ನಿಂತ ಆದಿತ್ಯನಾಥ್ ನೇರ ಸಂಸತ್ತಿಗೆ ಪ್ರವೇಶ ಗಿಟ್ಟಿಸಿದ್ದರು. ಅಲ್ಲಿಂದ ಮುಂದೆ ಅವರು ಹಿಂತುರುಗಿ ನೋಡಲೇ ಇಲ್ಲ. ಐದು ಬಾರಿ ಭಾರೀ ಮತಗಳ ಅಂತರದಿಂದ ಗೋರಖ್ ಪುರ್ ಎಂ.ಪಿ ಸ್ಥಾನವನ್ನು ಕೈವಶ ಮಾಡಿಕೊಳ್ಳುವಲ್ಲಿ ಆದಿತ್ಯನಾಥ್ ಯಶಸ್ವಿಯಾಗಿದ್ದರು. 2014ರ ಲೋಕಸಭಾ ಚುನಾವಣೆ, ಬಳಿಕದ ವಿಧಾಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಆದಿತ್ಯನಾಥ್ ಪ್ರಮುಖ ಭೂಮಿಕೆ ನಿಭಾಯಿಸಿದ್ದರು. ದಕ್ಷಿಣದಲ್ಲೂ ಅಂತಹದ್ದೇ, ಯೋಗಿಯೊಬ್ಬರ ಹುಡುಕಾಟದಲ್ಲಿ ಮೋದಿ ಟೀಂ ಈಗ ಯಶಸ್ವಿಯಾಗಿದೆ.

ಮೋದಿ ಕಣ್ಣಿಗೆ ಬಿದ್ದಿರುವ ಸಂತ ಯಾರು ?

ಲೋಕಸಭೆ ಚುನಾವಣೆಗೆ ದಕ್ಷಿಣ ರಾಜ್ಯಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ, ಪ್ರಧಾನಿ ಮೋದಿ. ಪ್ರಾದೇಶಿಕ ಪಕ್ಷಗಳ ಅಸ್ತಿತ್ವ ಇರುವ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕೇಸರಿ ಪತಾಕೆ ಹಾರಿಸುವುದು ಸುಲಭದ ಮಾತೇನಲ್ಲ. ಆದರೆ, ಅದಕ್ಕಾಗಿ, ಕೇಸರಿಧಾರಿಯೊಬ್ಬರನ್ನೇ ಆರಿಸಿಕೊಂಡಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಸ್ವಾಮಿ ಪರಿಪೂರ್ಣಾನಂದ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಮಠ ಸ್ಥಾಪಿಸಿಕೊಂಡಿರುವ ಪರಿಪೂರ್ಣಾನಂದರಿಗೆ ದಕ್ಷಿಣ ಭಾರತದಲ್ಲಿ ಅಪಾರ ಭಕ್ತಗಣವಿದೆ. ದಕ್ಷಿಣದ ಫೈರ್ ಬ್ರ್ಯಾಂಡ್ ಸ್ವಾಮೀಜಿ ಎಂದೇ ಪರಿಪೂರ್ಣಾನಂದ ಗುರುತಿಸಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ್ ರೀತಿಯಲ್ಲೇ, ಹಿಂದುತ್ವ ಪ್ರಯೋಗಶಾಲೆಯ ಮುಖ್ಯೋಪಾಧ್ಯಾಯರನ್ನಾಗಿಸಲು ಬಿಜೆಪಿ ಹೊರಟಿದೆ.

ಸ್ವಾಮಿ ಪರಿಪೂರ್ನಾನಂದ ಸರಸ್ವತಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ 1972ರ ನವೆಂಬರ್ 01ರಂದು ಶ್ರೀಮಂತ ಮೀನಾಕ್ಷಿ ಮತ್ತು ಶ್ರೀ ಬಾಲಚಂದ್ರನ್ ಅವರ ಏಕೈಕ ಪುತ್ರನಾಗಿ ಜನಿಸಿದರು. ಔಪಚಾರಿಕ ಶಿಕ್ಷಣದ ನಂತರ ವೇದಾಧ್ಯಯನಕ್ಕೆ ವೈದಿಕ ಶಾಲೆ ಸೇರಿಕೊಂಡರು. ಅಲ್ಲಿ ಜೀವನದ ಅನ್ವೇಷಣೆಗಳನ್ನು ಮಾಡತೊಡಗಿದರು. ಹೃಷಿಕೇಶದಲ್ಲಿ ಸ್ವಾಮಿ ದಯಾನಂದ ಸರಸ್ವತಿ ಅವರ ಭೇಟಿ ಪರಿಪೂರ್ಣಾನಂದರ ಬದುಕಿಗೆ ಹೊಸ ತಿರುವು ನೀಡಿತು.

ಸ್ವಾಮಿ ದಯಾನಂದ ಸರಸ್ವತಿ ಅವರ ಕಟ್ಟಕಡೆಯ ಶಿಷ್ಯರೇ ಪರಿಪೂರ್ಣಾನಂದರು. ಬ್ರಹ್ಮಚರ್ಯೆ ದೀಕ್ಷೆ ಪಡೆದು ವಿಶಾಖಪಟ್ಟಣಂಗೆ ಮರಳಿದ, ಪರಿಪೂರ್ಣಾನಂದರು, ತೆಬ್ರಹ್ಮಚರ್ಯ ದೀಕ್ಷೆಯನ್ನು ಪಡೆದು ವಿಶಾಖಪಟ್ಟಣಂಗೆ ಬಂದು ನೆಲೆಸಿ 1995ರಲ್ಲಿ ಗೀತಾ ಜ್ಞಾನ ಯಜ್ಞವನ್ನು ಮಾಡಿದ್ರು. 2000ರಲ್ಲಿ ಸ್ವಾಮಿ ದಯಾನಂದ ಅಕಾಡೆಮಿ ಪ್ರಾರಂಭಿಸಿ ಅಂದಿನಿಂದ ಅದ್ವೆ ûತ ತತ್ವಶಾಸ್ತ್ರದ ಪ್ರಚಾರ ಆರಂಭಿಸಿದರು. ಆಂಧ್ರಪ್ರದೇಶದಲ್ಲಿ ಪ್ರತಿಯೊಂದು ಮೂಲೆ ಮೂಲೆಗೂ ತತ್ವ ಪ್ರಸಾರ ಮಾಡುತ್ತಿದ್ದಾರೆ. ಸನಾತನ ಧರ್ಮದ ತತ್ವಗಳು ಪ್ರವಚನಗಳ ಮೂಲಕ ಅವರ ಆಧ್ಯಾತ್ಮಿಕ ಸೇವೆಯೊಂದಿಗೆ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ಶ್ರೀಪೀಠಂ ಅನ್ನು ಸ್ಥಾಪಿಸಿವುದರ ಮೂಲಕ ಪರಿಪೂರ್ಣಾನಂದ ಸ್ವಾಮೀಜಿ ಸಮಾಜ ಸೇವೆ ಮತ್ತು ಕಲ್ಯಾಣ ಚಟುವಟಿಕೆಗಳಿಗೆ ತೊಡಗಿಸಿಕೊಂಡಿದ್ದಾರೆ..

ಪರಿಪೂರ್ಣಾನಂದ ಸ್ವಾಮೀಜಿ 3-ಜಿ ಮಿಷನ್ ಮೂಲಕ ಕೆಲಸ ಮಾಡುತ್ತಿದ್ದಾರೆ. ಗುರುಕುಲಂಗೋಕುಲಂಗೋಪುರಾಂ. ಅನಾಥ ಮಕ್ಕಳ ಹಸುಗಳ ರಕ್ಷಣೆ ಮತ್ತು ಹಸುವಿನ ಆಧಾರಿತ ಕೃಷಿ ಕಲ್ಪನೆಯನ್ನ 3ಜಿ ಮಿಷನ್‌ನಲ್ಲಿ ಅಳವಡಿಸಿಕೊಂಡು ಅದರ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟಲ್ಲದೆ ಶಿಥಿಲ ದೇಗುಲಗಳ ಪುನರುತ್ಥಾನಕ್ಕೆ ಕಟಿಬದ್ಧರಾಗಿ ತೆಲಂಗಾಣದ ಮಣ್ಣನ್ನು ಆರಿಸಿಕೊಂಡಿದ್ದಾರೆ.

ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದ ದಾಳಿಯಿಂದ ದೇಶೀ ಸಂಸ್ಕೃತಿ ಮೇಲಾಗುತ್ತಿರುವ ಪರಿಣಾಮಗಳನ್ನು ಜನರ ಮುಂದೆ ಬಿಚ್ಚಿಡುತ್ತಿದ್ದಾರೆ. ಸದಾ ಹಿಂದೂ ಚಿಂತನೆಗಳಿಂದ ಬೇರೆ ಧರ್ಮಗಳ ಮೇಲೆ ಮಾತಿನ ಬೆಂಕಿ ಉಂಡೆಗಳನ್ನು ಎಸೆಯುವ ಪರಿಪೂರ್ಣಾನಂದರು, ಈಗ ಅವಿಭಜಿತ ಆಂಧ್ರದಲ್ಲಿ ಹಿಂದೂಗಳಿಗೆ

ಹಿಂದೂ ಸಮ್ಮೇಳನಗಳಲ್ಲಿ ಮುಸ್ಲಿಮರ ವಿರುದ್ದ ಪ್ರಚೋದನಾತ್ಮಕ ಹೇಳಿಕೆ ನೀಡಿ ಕೋಮುಘರ್ಷಣೆಗೆ ಕಾರಣರಾಗಿದ್ದಾರೆ ಎಂಬ ಆರೋಪಗಳೂ ಇವರ ಮೇಲಿವೆ. ಇದಕ್ಕಾಗಿಯೇ ಹೆದ್ರಾಬಾದ್ ನಿಂದ 6 ತಿಂಗಳ ಕಾಲ ಗಡಿಪಾರೂ ಮಾಡಲಾಗಿತ್ತು. ತೆಲಂಗಾಣ ವಿರೋಧಿ ಮತ್ತು ಅಪಾಯಕಾರಿ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 1930ರ ಅನ್ವಯ ಕ್ರಮ ಕೆಗೊಳ್ಳಲಾಗಿತ್ತು. ಈ ಆದೇಶ ಬರುವ 2 ದಿನದ ಮುಂದೆ ಇವರನ್ನ ಗೃಹ ಬಂಧನದಲ್ಲಿಯೂ ಇರಿಸಲಾಗಿತ್ತು.

ಶ್ರೀರಾಮ ಮತ್ತು ಸೀತಾ ಮಾತೆಯ ವಿರುದ್ದ ಹೇಳಿಕೆ ನೀಡಿದ್ದಾರೆ ಚಿತ್ರ ನಿರ್ದೇಶಕ ಮಹೇಶ್ ವಿರುದ್ದ ಹೆದ್ರಾಬಾದ್‌ನಲ್ಲಿ 60 ಕಿ.ಮೀ ಉದ್ದದ ಧಾರ್ಮಿಕ ಚೆತನ್ಯ ಯಾತ್ರೆಯನ್ನ ಮಾಡಲು ಯೋಜನೆ ರೂಪಿಸಿದರು. ಆದರೆ ಈ ಯಾತ್ರೆಗೆ ಪೋಲಿಸರು ಅಕಾಶ ನೀಡಲಿಲ್ಲ. ಇದರ ವಿರುದ್ದ ಬಿಜೆಪಿ ಸೇರಿದಂತೆ ಅನೇಕ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪರಿಪೂರ್ಣಾನಂದ ಸ್ವಾಮಿಜಿ ಬೆಂಬಲಕ್ಕೆ ನಿಂತಿದ್ದವು. ಹೀಗೆ ತಮ್ಮ ಪ್ರಖರ ಹಿಂದೂಪರ ನಿಲುವುಗಳಿಂದಲೇ ಖ್ಯಾತಿ ಪಡೆದಿರುವ ಪರಿಪೂರ್ಣಾನಂದರು, ಈಗ ಬಿಜೆಪಿಯ ಕನಸುಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳಲು

ದಕ್ಷಿಣದ ರಾಜ್ಯಗಳಾದ ಕೇರಳ ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಹಾಗೂ ತೆಲಂಗಾಣ ಗಳಲ್ಲಿ ಒಟ್ಟು 102 ಲೋಕಸಭಾ ಸ್ಥಾನಗಳಿವೆ. 2014 ರ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿತ್ತು. ಆಂಧ್ರದಲ್ಲಿ ಟಿಡಿಪಿ ಜೊತೆ ಕೆ ಜೋಡಿಸಿದ್ದ ಬಿಜೆಪಿ ಈಗ ತನ್ನ ಮೆತ್ರಿ ಮುರಿದುಕೊಂಡಿದ್ದು, ಮುಂದಿನ ಚುನಾವಣೆಗಳಲ್ಲಿ ಆಂದ್ರದಲ್ಲಿ ತನ್ನ ಪ್ರಾಬಲ್ಯ ಸಾಧಿಸಬೇಕಾಗಿರೋದು ಕೇಸರಿ ಪಡೆಗೆ ಅನಿವಾರ್ಯವೂ ಆಗಿದೆ. ಈ ಎಲ್ಲಾ ತೊಡಕುಗಳಿಂದ ಆಚೆ ಬರಲು ಬಿಜೆಪಿ ಇದಕ್ಕೆ ಸರಿಯಾದ ಅಸ್ತ್ರವಾಗಿ, ಪರಿಪೂರ್ಣಾನಂದ ಸ್ವಾಮಿಜಿ ಅವರನ್ನ ಬಳಸಿಕೊಳ್ಳಲು ಚಿಂತನೆ ನಡೆಸಿದೆ.

ಈ ಹಿಂದೂ ಫೈರ್ ಬ್ರಾಂಡ್‌ನ ರಾಜಕೀಯಕ್ಕೆ ತರುವುದರಲ್ಲಿ ಆರ್‌ಎಸ್‌ಎಸ್ ಕೂಡಾ ಭಾರೀ ಪ್ರಯತ್ನ ನಡೆಸುತ್ತಿದೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಜನಪ್ರಿಯತೆಯಿಂದ ಪ್ರಭಾವಿತವಾಗಿರುವ ದಕ್ಷಿಣ ರಾಜ್ಯಗಳ ನಾಯಕರು ಹಾಗೂ ಮುಖ್ಯವಾಗಿ ತೆಲಂಗಾಣ ಬಿಜೆಪಿ ಮತ್ತು ಇತರ ಹಿಂದೂ ಸಂಘ ಸಂಸ್ಥೆಗಳು, ತಮ್ಮ ರಾಜ್ಯದಲ್ಲೂ ಸಹ ಸಂತ ನಾಯಕನನ್ನು ಹುಟ್ಟುಹಾಕಲು ಸಿದ್ಧತೆ ಆರಂಭಿಸಿವೆ. ಮೊದಲ ಹೆಜ್ಜೆಯಾಗಿ, ಪೂರ್ಣಕುಂಭ ಕಲಶ ಸ್ವಾಗತ ನೀಡಲು ನಿರ್ಧರಿಸಿದೆ.

ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ಸಭೆಯಲ್ಲಿ ಪರಿಪೂರ್ಣಾನಂದರೂ ಭಾಗಿಯಾಗಿದ್ದರು. ಈ ವೇಳೆ, ತಮ್ಮ ಸಮ್ಮತಿಯನ್ನೂ ಸ್ವಾಮೀಜಿ ನೀಡಿದ್ದಾರಂತೆ. ಆಂಧ್ರ ಮತ್ತು ತೆಲಂಗಾಣದ ನಾಯಕತ್ವದ ಜೊತೆಗೆ ಸಿಕಂದರಾಬಾದ್ ಅಥವಾ ಮಾಲ್ಕಜ್‌ಗಿರಿ ಲೋಕಸಭೆ ಕ್ಷೇತ್ರ ಇಲ್ಲವೇ ಕಾರ್ವಾನ್ ಅಥವಾ ಚಂದ್ರಯಾನಗುಟ್ಟ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಚಿಂತನೆ ಮಾಡ್ತಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಂದ ರೀತಿಯಲ್ಲಿ ವ್ಯಕ್ತಿತ್ವ ಇರೋ ಹಾಗೂ ಸಾಮೂಹಿಕ ವಹಿಸುವ ಪ್ರಭಾವಿ ನಾಯಕನಿಗೆ ಆರ್‌ಎಸ್‌ಎಸ್ ಹುಡುಕಾಟ ಪ್ರಾರಂಬಿಸಿತ್ತು. ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾವತ್ ಅವರನ್ನ ಭೇಟಿ ಮಾಡಿದ್ದ ಪೂರ್ಣಾನಂದರು ರಾಜಕೀಯ ಪ್ರಸ್ತಾಪ ಮಾಡಿದರಂತೆ. ಆರ್‌ಎಸ್‌ಎಸ್‌ಗೆ ಈ ಮಾತಿನಿಂದ ಫುಲ್ ಪವರ್ ಬಂದಂತಾಗಿದೆ. ಪರಿಪೂರ್ಣಾನಂದ ಸ್ವಾಮೀಜಿ ಎಸ್ ಅಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರಂತೆಯೇ ದಕ್ಷಿಣ ಭಾರತದಲ್ಲಿಯೂ ಯೋಗಿಯೊಬ್ಬರು ರಾಜಕೀಯದ ಮುನ್ನಲೆಗೆ ಬರಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close