About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಅನ್ಷು ಪ್ರಕಾಶ್ ಮೇಲೆ ಹಲ್ಲೆ ಕೇಸ್: ‘ಕೇಜ್ರಿವಾಲ್, ಸಿಸೋಡಿಯಾ ಕಿಂಗ್‍ಪಿನ್ಸ್’

ದೆಹಲಿ: ಉನ್ನತ ಅಧಿಕಾರಿ ಅನ್ಷು ಪ್ರಕಾಶ್ ಮೇಲೆ ಹಲ್ಲೆ ಸಂಬಂಧ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಡಿಸಿಎಂ ಸಿಸೋಡಿಯಾ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಸಿಎಂ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಈ ಪ್ರಕರಣ ಕಿಂಗ್‍ಪಿನ್ ಗಳು ಎಂದು ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಉನ್ನತ ಅಧಿಕಾರಿ ಅನ್ಷು ಪ್ರಕಾಶ್ ಅವರನ್ನು ಒತ್ತಡ ಹೇರುವ, ವಂಚನೆ ಮತ್ತು ಅಪರಾಧ ಎಸಗುವ ಉದ್ದೇಶದಿಂದಲೇ ಫೆಬ್ರವರಿ 19ರಂದು ಸಭೆಗೆ ಕರೆಸಿಕೊಳ್ಳಲಾಗಿತ್ತು ಎಂದು ದೆಹಲಿ ಹೈಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಇನ್ನು ಕೇಜ್ರಿವಾಲ್, ಸಿಸೋಡಿಯಾ ಸೇರಿ 11 ಮಂದಿ ಆಪ್ ಶಾಸಕರು ಅಕ್ಟೋಬರ್ 25ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಆದೇಶಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close