About Us Advertise with us Be a Reporter E-Paper

Breaking Newsವಿದೇಶ
Trending

ಪಾಕ್‌ ರಾಜಕೀಯ ಮೇಲಾಟ: ಶರೀಫ್‌ ಪಕ್ಷದ ವಿರುದ್ಧ ತನಿಖೆಗೆ ಮುಂದಾದ ಭ್ರಷ್ಟಾಚಾರ ನಿಗ್ರಹ ದಳ

ಇಸ್ಲಾಮಾಬಾದ್‌: ಪಾಕಿಸ್ತಾನದ ಮಹಾ ಚುನಾವಣೆ ನಡೆಯಲು ಹತ್ತು ದಿನ ಇರುವಂತೆ, ಮಾಜಿ ಪ್ರಧಾನಿ ನವಾಝ್‌ ಶರೀಫ್‌ರ ಪಾಕಿಸ್ತಾನ ಮುಸ್ಲಿಂ ಲೀಗ್‌(ನವಾಝ್‌) ಪಕ್ಷದ ವಿರುದ್ಧ ಭಯೋತ್ಪಾದನಾ ನಿಗ್ರಹ ದಳ ತನಿಖೆ ಆರಂಭಿಸಿದೆ.

ಜುಲೈ 13ರಂದು ಶರೀಫ್‌ ಪಾಕಿಸ್ತಾನಕ್ಕೆ ಮರಳಿದ್ದ ಸಂದರ್ಭ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದ ಪಿಎಂಎಲ್‌ ಪಕ್ಷದ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಶುಕ್ರವಾರದಂದು ಸಾರ್ವಜನಿಕ ರ‍್ಯಾಲಿಗಳನ್ನು ನಡೆಸುವಂತಿಲ್ಲ ಎಂಬ ನಿಯಮ ಉಲ್ಲಂಘನೆಯಾಗಿದೆ ಎಂದು ನೆಪ ಹೇಳಿರುವ ಪಾಕ್‌ ಅಧಿಕಾರಿಗಳು ಈ ಹೆಜ್ಜೆ ಇಟ್ಟಿದ್ದಾರೆ.

ಈ ಕುರಿತು ಸಲ್ಲಿಸಲಾಗಿರುವ ಎಫ್‌ಐಆರ್‌ನಲ್ಲಿ ಶರೀಫ್‌ ಸಹೋದರ ಶಹಬಾಝ್‌ ಶರೀಫ್‌ ಹಾಗು ಪಕ್ಷದ ಇತರ ನಾಯಕರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಮಾಜಿ ಪ್ರಧಾನಿ ಶಾಹಿದ್‌ ಕಾಕನ್‌ ಅಬ್ಬಾಸಿ ಹೆಸರೂ ಈ ಪಟ್ಟಿಯಲ್ಲಿ ಸೇರಿದೆ.

ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ನೀಡಿದ ಹತ್ತು ವರ್ಷಗಳ ಸೆರೆವಾಸದ ಸಂಬಂಧ, ಶರೀಫ್‌ ಪಾಕ್‌ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆಯೇ ಬಂಧಿಸಲಾಯಿತು. ಬ್ರಿಟನ್‌ನ ಅವೆನ್‌ಫೀಲ್ಡ್‌ನಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಹೊಂದಿದ್ದ ಸಂಬಂಧ ಶರೀಫ್‌ರೊಂದಿಗೆ ಅವರ ಪುತ್ರಿ ಮರೆಯಮ್‌ ಶರೀಫ್‌ಗೂ ಏಳು ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

Related Articles

Leave a Reply

Your email address will not be published. Required fields are marked *

Language
Close