About Us Advertise with us Be a Reporter E-Paper

ಸಿನಿಮಾಸ್

‘ಅನುಕ್ತ’ ತುಳು-ಕನ್ನಡ ಸಂಸ್ಕೃತಿಯ ಅವ್ಯಕ್ತ ಚಿತ್ರ!

ಸಿನಿಮಾದ ಕಡೆಗೆ ಆಸಕ್ತಿ ಮತ್ತು ಅಭಿರುಚಿ ಬೆಳೆಸಿಕೊಂಡಿರುವ ದಕ್ಷಿಣಕನ್ನಡದ ಸಮಾನ ಮನಸ್ಕರ ತಂಡವೊಂದು, ತಮ್ಮಲ್ಲಿದ್ದ ಕಡಲತಡಿಯ ಅಪರೂಪದ ಕತೆಯೊಂದನ್ನು ತುಳು ಚಿತ್ರದ ಮೂಲಕ ತೆರೆಯ ಮೇಲೆ ತರುವ ಯೋಜನೆಯನ್ನು ಮಾಡಿತ್ತು. ಆದರೆ ಕತೆ ತುಂಬ ಚೆನ್ನಾಗಿದ್ದ ಕಾರಣ ಇದನ್ನು ಕನ್ನಡದಲ್ಲಿ ಸಿನಿಮಾ ಮಾಡಿದರೆ, ಇನ್ನೂ ಹೆಚ್ಚಿನ ತಲುಪಿಸಬಹುದು ಎಂಬ ಕಾರಣಕ್ಕೆ ಕೊನೆಗೆ ಅದೇ ಕತೆಯನ್ನು ಕನ್ನಡದಲ್ಲಿ ‘ಅನುಕ್ತ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿ ತೆರೆಗೆ ತರಲು ಮುಂದಾಯಿತು. ಇತ್ತೀಚೆಗೆ ‘ಅನುಕ್ತ’ ಎಂಬ ಚಿತ್ರದ ಫಸ್ಟ್ ಟೀಸರ್ ಬಿಡುಗಡೆಯಾಗಿ ಹೊರಬಂದಿದೆ.

ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ‘ಅನುಕ್ತ’ ಚಿತ್ರದ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ ‘ಅನುಕ್ತ’ ಚಿತ್ರದ ಫಸ್ಟ್ ಟೀಸರ್ ಅನ್ನು ಹೊರತರಲಾಯಿತು. ಚಿತ್ರದ ಬಹುಭಾಗದ ಕತೆ ದಕ್ಷಿಣಕನ್ನಡ ಹಿನ್ನೆಲೆಯಲ್ಲಿ ನಡೆಯುವುದರಿಂದ, ಟೀಸರ್‌ನಲ್ಲಿ ತುಳುನಾಡಿನ ಚಿತ್ರಣ, ಅಲ್ಲಿನ ಸಂಗೀತ ಎಲ್ಲವೂ ಎದ್ದು ಕಾಣುತ್ತಿದೆ.

ಚಿತ್ರದ ಕತಾಹಂದರದ ಬಗ್ಗೆ ಮಾತನಾಡಿದ ಚಿತ್ರತಂಡ, ‘ಕತೆಯು ದಕ್ಷಿಣ ಕನ್ನಡದ ಪರಿಸರದಲ್ಲಿ ನಡೆಯಲಿರುವುದರಿಂದ, ಅಲ್ಲಿನ ನೇಟಿವಿಟಿ ಎದ್ದು ಕಾಣುತ್ತದೆ. ಚಿತ್ರದ ದೃಶ್ಯಗಳಿಗೆ ಪೂರಕವಾಗಿ ಅಲ್ಲಿನ ವಾದ್ಯಗಳನ್ನೆ ಹೆಚ್ಚಾಗಿ ಬಳಸಲಾಗಿದೆ. ದೈವ, ಕನಸು, ಯೋಚನೆ ಹೀಗೆ ಹಲವು ಆಯಾಮಗಳಲ್ಲಿ ಸಿನಿಮಾ ಸಾಗುತ್ತದೆ’ ಎಂಬ ಮಾಹಿತಿ ನೀಡಿತು. ಚಿತ್ರದಲ್ಲಿ ತುಳುನಾಡಿನ ಕತೆಯಿದ್ದರೂ ಎಲ್ಲಾ ಭಾಗದ ಕನ್ನಡಿಗರಿಗೂ ಅರ್ಥವಾಗುವಂತ ಭಾಷೆಯನ್ನು ಒಟ್ಟುಗೊಡಿಸಲಾಗಿದೆ ಸಂಭಾಷಣೆಗಾರ ನವೀನ್ ಶರ್ಮ. ಮೊದಲಬಾರಿ ಥ್ರಿಲ್ಲರ್ ಚಿತ್ರಕ್ಕೆ ಸಂಕಲನ ಮಾಡಿರುವುದು ಹೊಸ ಅನುಭವ ಎನ್ನುವುದು ಸಂಕಲನಕಾರ ಎನ್.ಎಂ.ವಿಶ್ವ ಅವರ ಮಾತು. ‘ಅನುಕ್ತ’ ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಕಾರ್ತಿಕ್ ಅತ್ತಾವರ್, ಬಹುಭಾಷಾ ನಟ ಸಂಪತ್ ರಾಜ್, ಅನು ಪ್ರಭಾಕರ್, ಸಿದ್ಲುಂಗು ಶ್ರೀಧರ್, ಸಂಗೀತಾ ಭಟ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 32 ದಿನಗಳ ಕಾಲ ಉಡುಪಿ, ಬ್ರಹ್ಮಾವರ, ಕರಾವಳಿಯ ಸುಂದರತಾಣಗಳು ಮತ್ತು ಬೆಂಗಳೂರು ಚಿತ್ರೀಕರಣ ನಡೆಸಲಾಗಿದೆ. 300 ವರ್ಷಕ್ಕೂ ಹಳೆಯ ಮನೆಯೊಂದನ್ನು ಈ ಚಿತ್ರದ ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ, ಪ್ರಮೋಷನ್ ಕೆಲಸಗಳಿಗೆ ಚಾಲನೆ ನಿಡಿರುವ ‘ಅನುಕ್ತ’ ಚಿತ್ರವು, ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.

‘ಮೊದಲಿನಿಂದಲೂ ಒಳ್ಳೆಯ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಅದು ‘ಅನುಕ್ತ’ ಸಿನಿಮಾದ ಮೂಲಕ ಈಡೇರುತ್ತಿದೆ. ಆರಂಭದಲ್ಲಿ ಈ ಕತೆಯನ್ನು ತುಳು ಸಿನಿಮಾ ಮಾಡುವ ಯೋಜನೆಯಲ್ಲಿ ಪ್ರಾರಂಭಿಸಿದ್ದೆವು. ಆದ್ರೆ ಚೆನ್ನಾಗಿದ್ದರಿಂದ, ಕೊನೆಗೆ ಅದನ್ನ ಕನ್ನಡದಲ್ಲಿ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದಲ್ಲಿ ಒಳ್ಳೆಯ ಎಂಟರ್‌ಟೈನ್ಮೆಂಟ್ ಇದೆ. ದಕ್ಷಿಣಕನ್ನಡದ ಸಂಸ್ಕೃತಿಯ ಚಿತ್ರಣವಿದೆ’
— ಹರೀಶ್ ಬಂಗೇರ, ನಿರ್ಮಾಪಕ

‘ನಾವು ಕಣ್ಣಾರೆ ಕಂಡ ಅದೆಷ್ಟೋ ಸಂಗತಿಗಳನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ. ಅಂತಹ ಸಂಗತಿಗಳನ್ನ ಇಟ್ಟುಕೊಂಡು ‘ಅನುಕ್ತ’ ಸಿನಿಮಾ ಮಾಡಿದ್ದೇವೆ. ‘ಅನುಕ್ತ’ ಎಂದರೆ ಮಾತಿನಲ್ಲಿ ಹೇಳಲಾಗದಂತಹದ್ದು ಎಂಬ ಅರ್ಥವಿದೆ. ಮಾತಿನಲ್ಲಿ ಹೇಳಲಾಗದ ಅನೇಕ ಸಂಗತಿಗಳನ್ನು ಈ ಸಿನಿಮಾ ತನ್ನ ದೃಶ್ಯದಲ್ಲಿ ಹೇಳಲಿದೆ. ಸಂಪೂರ್ಣ ಸಿನಿಮಾ ಸಸ್ಪೆನ್ಸ್, ಜಾನರ್‌ನಲ್ಲಿ ನಡೆಯುತ್ತದೆ. ಆಡಿಯನ್‌ಸ್ಗೆ ಹೊಸ ಅನುಭವ ಕೊಡುತ್ತದೆ’
— ಅಶ್ವಥ್ ಸ್ಯಾಮುಯಲ್, ನಿರ್ದೇಶಕ

‘ಡೈರೆಕ್ಟರ್ ಹೇಳಿದ ಕತೆಯ ಎಳೆ ಇಷ್ಟವಾಯ್ತು. ಹಾಗಾಗಿ ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ನೋಡುಗರು ಹೀಗೆ ಆಗುತ್ತದೆ ಎಂದು ಯೋಚಿಸಿದರೆ, ಸಿನಿಮಾದಲ್ಲಿ ಅದು ಬೇರೆಯೇ ಆಗಿರುತ್ತದೆ. ನೋಡುಗರ ಯೋಜನೆಗೂ ಮೀರಿ ಮುಂದೆ ಸನ್ನಿವೇಶವು ಬೇರೆ ಕಡೆಗೆ ನೋಡುಗರನ್ನು ತಗೆದುಕೊಂಡು ಹೋಗುತ್ತದೆ. ಚಿತ್ರತಂಡ ಮುಂಚಿತವಾಗಿ ಡೀಟೆಲ್ಡ್ ಪ್ಲಾನ್ ಮಾಡಿಕೊಂಡಿದ್ದರಿಂದ, ಪ್ರತಿ ದೃಶ್ಯವನ್ನೂ ಅಚ್ಚುಕಟ್ಟಾಗಿ ಮತ್ತು ಎಷ್ಟು ಅಷ್ಟನ್ನೆ ಚಿತ್ರೀಕರಿಸಿ, ಚಿತ್ರವನ್ನು ಸುಂದರವಾಗಿ ಕಟ್ಟಿಕೊಟ್ಟಿದೆ’
— ಸಂಪತ್ ರಾಜ್, ನಟ

Tags

Related Articles

Leave a Reply

Your email address will not be published. Required fields are marked *

Language
Close