About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮಾಸಿಕ ಪೂಜೆಗೆ ತೆರೆದುಕೊಳ್ಳಲಿರುವ ಶಬರಿಮಲೆ ದೇಗುಲ

ಶಬರಿಮಲೆ ದೇಗುಲವು ಮಂಗಳವಾರದಂದು ಭಕ್ತಗಣಕ್ಕೆ ತೆರೆದುಕೊಳ್ಳಲಿದ್ದು, ಮಾಸಿಕ ಪೂಜಾ ಕಾರ್ಯಕ್ರಮಗಳು ನಡೆಯಬೇಕಿದೆ.

10-50ರ ವಯೋಮಾನದ ಮಹಿಳೆಯರನ್ನು ದೇಗುಲದೊಳಗೆ ಪ್ರವೇಶ ನೀಡುವ ವಿಚಾರವಾಗಿ ಇತ್ತೀಚೆಗೆ ನಡೆದ ದೊಡ್ಡ ಮಟ್ಟದ ಪ್ರತಿಭಟನೆ ಕಾರಣ ಇತ್ತೀಚೆಗೆ ದೇಗುಲವು ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ವಿರೋಧಿಸಿ, ಕೇರಳಾದ್ಯಂತ ದೊಡ್ಡ ಮಟ್ಟದಲ್ಲಿ ಧರಣಿ, ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಗುಡ್ಡದ ಮೇಲಿನ ದೇಗುಲವು ಫೆಬ್ರವರಿ 17ರ ವರೆಗೆ ತೆರೆಯಲಿದ್ದು, ಐದು ದಿನಗಳ ಪೂಜಾ ವಿಧಿವಿಧಾನಗಳನ್ನು ಕಾಣಲಿದೆ. ಇದೇ ಸಂದರ್ಭ, “ಕಲಾಭಿಷೇಕ”, “ಸಹಸ್ರಕಳಶ”, “ಲಕ್ಷಾರ್ಚನ”ಗಳನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ, ದೇಗುಲದ ಮುಖ್ಯ ತಂತ್ರಿ ವಾಸುದೇವನ್‌ ನಂಬೂದರಿ ದೇವಾಲಯವನ್ನು ಮಂಗಳವಾರ ತೆರೆಯಲಿದ್ದಾರೆ.

ಸಂಭವನೀಯ(?) ಗಲಭೆಯಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಕೇರಳ ಸರಕಾರ ಬಿಗಿ ಬಂದೋಬಸ್ತ್ ಏರ್ಪಡಿಸಿಕೊಂಡಿದೆ.

Tags

Related Articles

Leave a Reply

Your email address will not be published. Required fields are marked *

Language
Close