About Us Advertise with us Be a Reporter E-Paper

ಗೆಜೆಟಿಯರ್

ಆ್ಯಪಲ್ ಕದ್ದು ಬಳಸಲಾಗದ್ದು!

ಸಂತೋಷ್ ಕುಮಾರ್ ಮೆಹಂದಳೆ

ಹುಶ: ಆ್ಯಪಲ್ ಮೊಬೈಲ್ ಬಗ್ಗೆ ಕನಸಿಸದವರು ಕಡಿಮೆ. ಆದರೆ ಜೇಬಿಗೂ, ಕೊನೆಗೆ ನಿರ್ವ ಹಣೆಗೂ ಭಾರ ಎಂದೇ ಇತ್ತಿಚೀನ ದಿನದ ವರೆಗೂ ಆ್ಯಪಲ್ ಸ್ಮಾರ್ಟ್‌ಫೋನ್ ಜನಸಾಮಾನ್ಯರ ಕೈಗೆ ದಕ್ಕಿಲ್ಲ. ಅದರ ಲಾಭವನ್ನು ಮಾಡಿಕೊಂಡಿದ್ದು ಚೈನಾ ಮಾಡೆಲ್‌ಗಳಾದ ರೆಡ್ಮೀ, ವಿವೋ, ಒಪ್ಪೋ, ಸ್ಯಾಮ್‌ಸಂಗ್ ಮೊದಲಾ ದವು. ಕಾರಣ ಈ ಸ್ಮಾರ್ಟ್ ಫೋನ್‌ಗಳು ಆ್ಯಪಲ್‌ನಂತೆ ವ್ಯವರಿಸುವುದಿಲ್ಲವಾದರೂ ಭಾರತೀಯರ ಬರೀ ಜಾಲತಾಣ ಗಳ ಗೀಳಿಗೆ, ಇವುಗಳಲ್ಲಿರುವ ಸೌಲಭ್ಯ ಅಗತ್ಯಕ್ಕಿಂತ ಹೆಚ್ಚಿನದೇ ಆಗಿತ್ತು. (ಹೆಚ್ಚಿನ ಸ್ಮಾರ್ಟ್ ಫೋನ್ ಬಳಕೆದಾರರ ಉಪಯೋಗ ವೆಂದರೆ ಜಾಲತಾಣ ಹೊರತಾಗಿ, ಟಿಕೆಟ್ ಬುಕಿಂಗ್, ಬ್ಯಾಂಕಿಂಗ್ ವ್ಯವಹಾರ, ಕ್ಯಾಬ್ ಬುಕಿಂಗು ಹೀಗೆ. ಇದೆಲ್ಲಾ ಬೆಂಗಳೂರು ಕೇಂದ್ರೀಕೃತ. ಉಳಿದ ಕರ್ನಾಟಕದ ಭಾಗದವರಿಗೆ ಇದೆಲ್ಲಾ ಇಲ್ವೇ ಇಲ್ಲ. ಏನಿದ್ದರೂ ಮನರಂಜನೆಗಾಗೇ. ಆಗ ಬರುವುದೇ ಪೊರ್ನ್ 300ನಂತಹ ಸೈಟುಗಳು. ಹೀಗಾಗಿ ಇವರೆಲ್ಲಾ ಮನರಂಜನೆಗೆ ಆ್ಯಪಲ್‌ನ್ನು ತುಂಬಾ ಕಮ್ಮಿ) ಆದರೆ ಇತ್ತ ಇಂತಹ ಮಾಸ್ ಮಾರ್ಕೆಟ್‌ನ ಮೇಲೆ ಕೇಂದ್ರೀಕೃತಗೊಳ್ಳದೆ ಆ್ಯಪಲ್ ಬೇರೆಯದೇ ಲೆಕ್ಕಾ ಹಾಕಿತ್ತು.

ದೂರದೃಷ್ಟಿಯ ಯೋಜನೆಯಂತೆ ಆ್ಯಪಲ್ ಕೇವಲ ಮೊಬೈಲ್ ಮಾತ್ರ ತುಟ್ಟಿ ಮಾಡಿರಲಿಲ್ಲ. ಅದರಲ್ಲಿ ಬಳಕೆ ಯಾಗುವ ತಂತ್ರಾಂಶದಿಂದ ಹಿಡಿದು ಯಂತ್ರಾಂಶದವರೆಗೂ ಎಲ್ಲವೂ ತುಟ್ಟಿಯೆ. ಕಾರಣ ನಾವಿನ್ನೂ ಆಂಡ್ರಾಯ್ಡ್ ಫೋನ್‌ಗಳಲ್ಲಿ ಅದು ಬರಲಿದೆ ಇದು ಬರಲಿದೆ ಎಂದೆಲ್ಲಾ ಲೆಕ್ಕಾ ಹಾಕುತ್ತಾ ನಮ್ಮದೇ ಮನಸಿನ ಫ್ಯಾಂಟಸ್ಸಿಗೂ ಒಂದು ರೂಪ ಕೊಡುತ್ತಾ ಕಾಯುತ್ತಿದ್ದೇವಲ್ಲಾ ಅದನ್ನೆಲ್ಲಾ ಆ್ಯಪಲ್ ಮಹಾಶಯ ಸ್ಟೀವ್‌ಜಾಬ್‌ಸ್ ಆಗಲೇ ಅದರಲ್ಲಿ ತುಂಬಿಸಿ ಬಳಕೆಗೆ ಬಿಟ್ಟಾಗಿತ್ತು. ಕನಿಷ್ಠ ಬೆಲೆಯ ಆ್ಯಪಲ್‌ಫೋನ್ ಕೂಡಾ ಎಂಥವ ನನ್ನೂ ಇಂತಹದ್ದೊಂದು ಮೊಬೈಲ್ ಇಟ್ಕೊಳ್ಳಬೇಕು ಎನ್ನಿಸು ವಂತೆ ಮಾಡಿದ್ದು ಅದರ ಬಾಡಿ ಮತ್ತು ಮೈಂಡ್ ಎರಡನ್ನೂ ಸ್ಮಾರ್ಟ್ ಮಾಡಿದ ಪರಿಗೆ.

ನಿಮಗೆ ಬೇಕಾದುದು ಬೇಡಾದುದು ಎಲ್ಲವನ್ನೂ ನಿರೀಕ್ಷೇಗೂ ಮೀರಿ ಆ್ಯಪಲ್ ಡಿಸೈನ್ ಮಾಡಲಾಗಿತ್ತು. ಬಳಕೆದಾರನಿಗೆ ಇಷ್ಟು ಮಾತ್ರ ಗೊತ್ತಾಗುತ್ತಿತ್ತು. ಅದರೆ ಹಕೀಕತು ಏನೆಂದರೆ ಆಪಲ್ ತನ್ನೆಲ್ಲ ಸರ್ವೀಸುಗಳನ್ನು ಖರೀದಿಸಿಯೇ ಬಳಸಿ ಎನ್ನುವ ಒಳಗೊಳಗೆ (ಪ್ರಾಪ್ರೈಟರ್ಶಿಪ್) ಪಾಲಿಸು ತ್ತಿತ್ತು. ಇದಕ್ಕೆ ಒಂದು ಉದಾ. ಎಂದರೆ ಆ್ಯಪಲ್‌ಗೆ ನಿಮಗೆ ಬೇಕಾದ ರೀತಿಯಲ್ಲಿ ಆ್ಯಪ್‌ಗಳನ್ನು ತುಂಬಿಸಿ ಬಳಸಲಾಗು ವುದಿಲ್ಲ. ನಿಮಗೆ ಅಗತ್ಯವಿರುವ ಮತ್ತು ಅವಶ್ಯದ ತಂತ್ರಾಂಶ ಗಳನ್ನು ಆ್ಯಪಲ್ ತಾನೇ ಎಲ್ಲಾ ಅಪ್ಲೋಡ್ ಮಾಡಿಯೇ ಕೊಡು ತ್ತಿತ್ತು (ಇನ್ಬಿಲ್ಟ್) ಅದರ ಹೊರತಾಗಿ ಬೇರೇನಾದರೂ ಬೇಕಿದ್ದರೆ ನೀವು ಆ್ಯಪಲ್ ಸ್ಟೋರ್‌ನಿಂದಲೇ ಡೌನ್ ಲೋಡ್ ಮಾಡ ಬೇಕು. ಅದಕ್ಕೆಲ್ಲಾ ಆ್ಯಪಲ್ ಇಂತಿಷ್ಟೆಂದು ದರ ವಿಧಿಸುತ್ತಿತ್ತು.

ಅದೆಲ್ಲಾ ಆಚೆಗಿರಲಿ. ಅಕಸ್ಮಾತ್ ಆ್ಯಪಲ್‌ನಿಂದ ಕದ್ದು ಬಳಸಿದರೆ..? ಅವರ ಯಾವುದೇ ತಂತ್ರಾಂಶ ಇನ್ನೇಲ್ಲೋ ಕಾಪಿ ಮಾಡಿ ಎನೋ ಒಂದು ಅದರ ತಲೆಯಲ್ಲೂ ಹುಳ ಬಿಟ್ಟು ಅದನ್ನೆ ನಿಮ್‌ಮ್ ಸ್ಮಾರ್ಟ್ ಫೋನಿಗೋ ಅಥವಾ ಅವರಿಗ್ಯಾಕೆ ದುಡ್ಡು ಕೊಡುವುದೆಂದು ಸ್ಮಾರ್ಟ್ ಫೋನ್‌ನಲ್ಲಿರುವ ತಂತ್ರಜ್ಞಾನ ಸಾಕು ಎಂದು ಅದನ್ನೆ ಆ್ಯಪಲ್‌ಗೆ ಭಟ್ಟಿ ಇಳಿಸಿಕೊಂಡು ಉಪಯೋಗಿ ಸುವ ಯೋಚನೆ, ಯೋಜನೆ ಇದ್ದಲ್ಲಿ ಅದನ್ನೆಲ್ಲ ಮಾಡಲು ಭಾರತದಲ್ಲಿ ಬರವಿಲ್ಲ. ಟೆಕ್ನಾಲಜಿಯನ್ನು ಕಾಪಿ ಮಾಡುವು ದರಲ್ಲಿ ನಾವು ಸಿದ್ಧಹಸ್ತರು. ಹೀಗಾಗದಂತೆ ತಡೆಯಲೆಂದೇ ಕಳ್ಳತನ, ಕಾಪಿಪೆಸ್ಟುಗಳನ್ನು ಪತ್ತೆ ಮಾಡಲೇ ಆ್ಯಪಲ್ ಒಂದು ಕಂಪೆನಿಯನ್ನು ಪೇಟೆಂಟ್ ನಿರ್ವಹಣೆಗೆ ನಿಯಮಿಸಿತ್ತು. ಟ್ರೈಟರ್ ವಿಯರ್ ಎನ್ನುವ ಕಂಪೆನಿ ಪೇಟೆಂಟ್ ಮೂಲಕ ಪಡೆದ ಅಧಿಕಾರದಿಂದ ಆ್ಯಪಲ್‌ನ ಯಾವುದೇ ಫೋನಿನಲ್ಲಿ ಕಳ್ಳತನ, ಡುಪ್ಲಿಕೇಟ್ ತಂತ್ರಾಂಶ ಭಾಗಶ: ಬದಲಾಯಿಸಿದ ಆ್ಯಪ್‌ಗಳು ಯಾವುದೆಂದರೆ ಯಾವುದನ್ನು ಮಾಡಿದರೂ ಅದು ಕೂತಲ್ಲಿಂದಲೇ ತನ್ನ ಗ್ರಾಹಕನ ಫೋನಿನಲ್ಲಿ ಆಗಿರುವ ಭಾನಗಡಿ ಯನ್ನು ಪತ್ತೆಮಾಡುತ್ತಿತ್ತು. ಅನುಮಾನಕ್ಕೆ ಸಿಕುತ್ತಿದ್ದಂತೆ ಮೊದಲು ತನ್ನ ಆ್ಯಪಲ್ ಫೋನ್‌ನಲ್ಲಿರುವ ಕೋಡ್ ಬಳಸಿ, ಆ ಫೋನ್‌ನನ್ನು ಮಾಡಿ, ಅದರಲ್ಲಿರುವ ಚಿಪ್‌ಸ್ ಸಹಾಯದಿಂದ ಅದರ ಕಾನ್ಫಿಗರೇಶನ್ ಎಟುಕಿಸಿ ಕೊಂಡು, ಅದರ ಐ.ಪಿ. ಅಡ್ರೆಸ್ಸಿಗೆ ಲಗ್ಗೆ ಇಟ್ಟು, ಅಲ್ಲಿ ಜರುಗುವ ಅಥವಾ ಆ್ಯಪಲ್‌ನ ಮೂಲವನ್ನು ಕದಿಯಲು ಯತ್ನಿಸಲಾಗಿ ರುವ ಬಗ್ಗೆ ಮಾಹಿತಿ ಕ್ರೊಢೀಕರಿಸಿಕೊಳ್ಳುತ್ತಿತ್ತು.

ಇದೆಲ್ಲಾ ಒಂದು ಭಾಗ ಆದರೆ, ಫೋನ್ ಲೋಕೆಶನ್ ಹೇಗೆ ಗೊತ್ತಾಗುತ್ತದೆ..? ಇಂಥಹದ್ದೇನಾದರೂ ನಡೆದರೆ ಇರಲಿ ಎಂದೇ ಆ್ಯಪಲ್ ತನ್ನ ಫೋನ್‌ಗಳನ್ನು ಎಟುಕಿಸಿಕೊಂಡ ತಕ್ಷಣ ಅದರ ಸಿಕ್ರೇಟ್ ಬೋರ್ಡ್ ಕೋಡನ್ನು ಆಕ್ಟಿವೇಟ್ ಮಾಡಿ ಬಿಡುತ್ತದೆ. ಅಗ ಮೊಬೈಲ್‌ನ್ನು ಉಪಯೋಗಿಸು ವಾಗೆಲ್ಲ ಅದರ ಕ್ಯಾಮೆರಾ ತಾನೇ ತಾನಾಗಿ ಆನ್ ಆಗಿ ಫ್ಲಾಶ್, ಸದ್ದು ಎರಡೂ ಇಲ್ಲದೆ ತನ್ನೆದುರಿಗೆ ಸಿಗುವ ಎಲ್ಲಾ ದೃಶ್ಯವನ್ನು ಎಳೆ ಎಳೆಯಾಗಿ ಬಿತ್ತರ ಮಾಡತೊಡಗುತ್ತದೆ. ಎದುರಿನವರ ಚಿತ್ರ, ರಸ್ತೆ, ಪಾರ್ಕು, ಮನೆ ಬೆಡ್ರೂಮ್ ಏನೇ ಇರಲಿ ಯಥಾ ವತ್ತು ಆನ್ ಆದಾಗೆಲ್ಲಾ ಕ್ಯಾಮೆರಾ ಕೂಡಾ ಚಾಲು. ಅಲ್ಲಿಗೆ ಕೆಲವೇ ದಿನದಲ್ಲಿ ಪದೇ ಪದೇ ಆಕ್ಟಿವ್ ಆಗಿ ಕೆಲಸ ನಿರ್ವಹಿಸುವ ಕ್ಯಾಮೆರಾ ಕೊನೆಗೊಮ್ಮೆ ತಾನು ಯಾವ ಪರಿಧಿ ಯಲ್ಲಿದ್ದೇನೆಂದು ಸೂಚಿಸುತ್ತಿತ್ತು. ಸತತವಾದ ಹಿಂಬಾಲಿಸುವಿಕೆ ಯಿಂದ ಹೊರಗಿದ್ದಾಗ, ಚಿತ್ರಗಳು, ಉಪ ಯೋಗಿಸುವವನ ದನಿ, ಕೈ ಬೆರಳ ಮುದ್ರೆ, ಎದುರಿನ ಸಂವೇದ ನಾತ್ಮಕ ಚಲನೆ, (ಗೆಶ್ಚರ್ ಟೆಕ್ನಾಲಜಿಯಲ್ಲಿ ಇದರ ಪಾತ್ರ ದೊಡ್ಡದು) ವೇಗ ಹೀಗೆ ತಿಳಿಯಬಹುದಾದ ಎಲ್ಲಾ ಪ್ಯಾರಾ ಮೀಟರ್‌ನ್ನು ಅದು ತನ್ನ ಸರ್ವರಿಗೆ ನಿಶಬ್ದವಾಗಿ ಫೀಡ್ ಮಾಡುತ್ತಲೇ ಇರುತ್ತದೆ. ಇದರಿಂದ ಆ್ಯಪಲ್ ಕೂಡಲೇ ತನ್ನ ಗ್ರಾಹಕ ಹೌದೋ ಅಲ್ಲವೋ ಎಂಬುದನ್ನು ಪತ್ತೆ ಮಾಡಿಕೊಂಡು ಮಾಹಿತಿ ಅಪ್ಡೇಟ್ ಮಾಡು ಕೆಲವೊಂದು ಆ್ಯಪಲ್ ಮೊಬೈಲ್‌ಗಳು ಉಪ ಯೋಗಿಸುವವನ ಹೃದಯ ಬಡಿತ, ಪಾಪೆಯ ಚಲನೆಯ ವರೆಗೂ ದಾಖಲಿಸುವ ಸಾಮರ್ಥ್ಯ ಹೊಂದಿವೆ.

ಹಾಗೆ ನೋಡಿದರೆ ಆ್ಯಪಲ್ ಇಂತಹ ಯೋಜನೆಗೆ ಪೂರಕ ವಾಗಿರುವ ಮೈಕ್ರೋವೆವ್ ಸಂವಹನಗಳನ್ನು ಸಾಧಿಸಿದ್ದು 1903 ರಲ್ಲೇ ಆಗಿತ್ತು. ಆದರೆ ಅದು ಮೊಬೈಲ್‌ಲ್ಲಿ ಬಳಕೆಗೆ ಅಥವಾ ಸೂಕ್ತವಾಗಿ ಬಂದದ್ದು ಮಾತ್ರ ಆ್ಯಪಲ್ ಜನಿಸಿದಾಗ. ಆ್ಯಪಲ್ ಇವತ್ತಿಗೂ ಅತಿ ಹೆಚ್ಚು ಬೆಲೆಬಾಳುವ ಸಾಧನವಾಗಿದ್ದರೂ, ಸುಲಭಕ್ಕೆ ಕೈಗೆಟುಕುವುದಿಲ್ಲವಾದರೂ ಅದರ ಬಾಡಿ, ಮುದ್ದಾದ ಅಕ್ಷರಗಳ ಬಿತ್ತರ, ಸೂಕ್ಷ್ಮತೆ ಮತ್ತು ತನ್ನದೇ ಆದ ಆಪರೇಟಿಂಗ್ ಸಿಸ್ಟಮ್‌ನಿಂದಾಗಿ ಹೊಂದಿರುವ ವೇಗದ ವೃತ್ತನಿರೀಕ್ಷೆಗೂ ಮೀರಿದ್ದು. ಹಾಗಾಗೇ ಆ್ಯಪಲ್ ಒಮ್ಮೆ ನೋಡಿದವರೂ ಕೂಡಾ ಎಸ್. ಹೇಗಾದರೂ ಒಮ್ಮೆ ಆ್ಯಪಲ್ ಫೋನ್ ತೆಗೆದುಕೊಳ್ಳಬೇಕು ಎನ್ನುವುದು ನಿಶ್ಚಿತ. ಜಾಗತಿಕವಾಗಿ ಕೈಗೊಂದು ಕಾಲಿಗೊಂದು ಮೊಬೈಲ್ ತಂತ್ರಜ್ಞಾನ ಬರುತ್ತಿದ್ದರೂ ಸಾವಿರಾರು ಆ್ಯಪ್‌ಗಳನ್ನು ಪುಕ್ಕಟ್ಟೆಯಾಗಿ ಕೊಟ್ಟು ಸಂವಹನ ಸೇರಿದಂತೆ ಬಳಕೆ ಸುಲಭವಾಗಿಸಿದ್ದರೂ ಪ್ರತಿಯೊಂದನ್ನು ಕಾಸು ಕೊಟ್ಟೆ ಅನುಭವಿಸಿ ಎನ್ನುವ ಪಕ್ಕಾ ವೃತ್ತಿಪರತೆ ಮೆರೆದೂ ನಂ.ಒನ್ ಸ್ಥಾನದಲ್ಲಿ ಮೆರೆಯುವುದಕ್ಕೆ ಕಾರಣ ಸೇವೆಯ ಜತೆಗೆ ನಮ್ಮ ಮೇಲೆ ಕಣ್ಣಿಟ್ಟು ತಪ್ಪು ಮಾಡಲು ಕೊಡದಿರುವುದೇ ಆಗಿದೆ. ಆ್ಯಪಲ್ ಕದಿಯಲು ಕೈ ಹಾಕಬೇಡಿ. ಅದರ ಕುಲಗೆಡಿ ಸಲೂ ನೋಡಬೇಡಿ. ಅದು ಹಣ್ಣಲ್ಲ. ಸ್ಟೀವ್ ಜಾಬ್ ನ ಕನಸಿನ ಕೂಸು. ಕದ್ದು ದಕ್ಕಿಸಿಕೊಳ್ಳುವುದು ಸಾಧ್ಯವೇ ಇಲ್ಲ.

Tags

Related Articles

Leave a Reply

Your email address will not be published. Required fields are marked *

Language
Close