About Us Advertise with us Be a Reporter E-Paper

ಸಿನಿಮಾಸ್

ದೀಪಾವಳಿಗೆ ಅಪ್ಪು ಪವರ್‌ಪುಲ್ ಗಿಫ್ಟ್

ಅಪ್ಪು ಬರ್ತ್ ಡೇ ದಿನವೇ ಹೊಸ ಚಿತ್ರ ಘೋಷಿಸಿ, ಚಿತ್ರದ ಫಸ್‌ಟ್ ಲುಕ್ ಟೀಸರ್ ಬಿಡುಗಡೆಗೊಳಿಸಿದ್ದ ಪವನ್ ಒಡೆಯರ್ ಚಿತ್ರಕ್ಕೆ ನಟ ‘ಸಾರ್ವಭೌಮ’ ಎಂಬ ಟೈಟಲ್ ನೀಡಿ ಅಭಿಮಾನಿಗಳ ಕ್ಯೂರಿಯಾಸಿಟಿಗೆ ಸ್ವಲ್ಪ ಮಸಾಲೆ ಹಾಕಿದ್ದರು. ಮುಂದುವರೆದಂತೆ ಪಾತ್ರಕ್ಕೆ ಅಗತ್ಯವೆಂದು ಪುನೀತ್ ರಾಜ್ ಕುಮಾರ್ ವಿಭಿನ್ನ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದೂ ಇದೆ. ಹೀಗೆ ಪ್ರಾರಂಭದಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ‘ನಟಸಾರ್ವಭೌಮ’ ಸಿನಿಮಾ ದೀಪಾವಳಿಗೆ ಅಪ್ಪು ಅಭಿಮಾನಿಗಳಿಗಾಗಿ ಪವರ್ ಪುಲ್ ಗಿಫ್‌ಟ್ ನೀಡಿದೆ.

ಈಗಾಗಲೇ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡು ಭರವಸೆ ಮೂಡಿಸಿರೋ ನಟಸಾರ್ವಭೌಮ ಸಿನಿಮಾ ದೀಪಾವಳಿಯಂದು ಹೊಸ ಪೋಸ್ಟರ್ ರಿವೀಲ್ ಮಾಡಿದೆ. ಪೋಸ್ಟರ್‌ನಲ್ಲಿ ಅಪ್ಪು ಮಾಸ್ ಆ್ಯಂಡ್ ಕ್ಲಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾರ್ವಭೌಮ’ ಚಿತ್ರತಂಡ ನಾಡಿನ ಜನತೆಗೆ ಹಾಗೂ ಅಪ್ಪು ಅಭಿಮಾನಿಗಳಿಗೆ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದೆ.

ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವೈದಿ ಎಸ್. ಛಾಯಾಗ್ರಹಣ ಮಾಡುತ್ತಿದ್ದಾರೆ. ‘ಪುಲಿಮುರುಗನ್’, ‘ಅನ್ನಿಯನ್’, ‘ಬಾಹುಬಲಿ’ ಮುಂತಾದ ಯಶಸ್ವಿ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿರುವ ಪೀಟರ್ ಹೇನ್ ‘ನಟಸಾರ್ವಭೌಮ’ನಿಗೆ ಸಾಹಸ ಸಂಯೋಜನೆ ವಿಶೇಷ. ಎಲ್ಲ ಅಂದುಕೊಂಡಂತೆ ಆದರೆ ‘ನಟಸಾರ್ವಭೌಮ’ ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆಗಳು ಇವೆ.

Tags

Related Articles

Leave a Reply

Your email address will not be published. Required fields are marked *

Language
Close