About Us Advertise with us Be a Reporter E-Paper

ವಿ +

ಐಟಿ ಉದ್ಯೋಗಿಗಳ ಕೃಷಿ ಪ್ರಯೋಗ ಆಕ್ವಾ ಫೋನಿಕ್‌ಸ್

• ಬಿದಿರೆ ಪ್ರಕಾಶ್

ಬೆಂಗಳೂರಿನಂಥ ಮೆಟ್ರೋಪಾಲಿಟನ್ ಸಿಟಿಯಲ್ಲಿ ಓದಿ, ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುವ ಯುವಕರು ಕೃಷಿಗೆ ಹೋಗುತ್ತಾರೆ ಎನ್ನುವುದನ್ನು ಊಹಿಸಿಕೊಳ್ಳಲೂ ಆಗದು. ಅಂಥದ್ದರಲ್ಲಿ ಐಟಿ ಉದ್ಯೋಗ ತೊರೆದು, ಚಿತ್ರದುರ್ಗದಂತಹ ಬರಪೀಡಿತ ಪ್ರದೇಶದಲ್ಲಿ, ಕೃಷಿ ಮೂಲಕ ತಮ್ಮ ನೆಲೆ ಕಂಡುಕೊಳ್ಳಲು ಹೊರಟಿದ್ದಾರೆ ತುಮಕೂರಿನ ಬಿದರೆಯ ಶ್ರೀಜಿತ್ ಗುರಿಕಾರ್ ಹಾಗೂ  ತಿಪ್ಪೇಶ್ ಚಂದನ್. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಇವರಿಬ್ಬರೂ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಮಳೆಯನ್ನೇ ನಂಬಿ, ಬೀಜ, ಗೊಬ್ಬರಕ್ಕಾಗಿ ಸಾಲ ಮಾಡಿ ತೀರಿಸಲಾಗದೆ, ಆತ್ಮಹತ್ಯೆಗೆ ತಲೆಯೊಡ್ಡುವ ರೈತರ ಹಿತ ಚಿಂತನೆ ಇವರನ್ನು ಹೊಸತನಕ್ಕೆ ತುಡಿಯುವಂತೆ ಮಾಡಿತ್ತು. ಆಗ ಕಾಣಿಸಿದ್ದು ಜಲಕೃಷಿ ಹಾಗೂ ಜಲಚರ ಸಾಕಣೆಯಂತಹ ಪ್ರಯೋಗ. ಇದರ ಹುಡುಕಾಟ ನಡೆಸಿದಾಗ ಹುಟ್ಟಿದ್ದು ‘ವಿಸಾರ’ ಆಕ್ವಾ ಫೋನಿಕ್‌ಸ್ ಸಂಸ್ಥೆ.

ಸದ್ಯ ಚಿತ್ರದುರ್ಗದ ಸಾಯಿಬಾಬಾ ರೆಡ್ಡಿಯವರ ಜಮೀನಿನಲ್ಲಿ ತಾವೇ  ಈ ಪದ್ಧತಿ ಪ್ರಾರಂಭಿಸಿದ್ದಾರೆ. ಸುತ್ತಲಿನ ರೈತರಿಗೆ ಇದರ ಕುರಿತು ಪ್ರಾತ್ಯಕ್ಷಿಕೆ, ಅಗತ್ಯ ಸಹಕಾರ, ಮಾರ್ಗದರ್ಶನ ನೀಡುತ್ತಿದ್ದಾರೆ.  ಮೀನುಗಾರಿಕೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ ಸಹಕಾರದೊಂದಿಗೆ ಅಪರೂಪದ ಜಲಕೃಷಿ ಮತ್ತು ಜಲಚರ ಸಾಕಣೆ ಪದ್ಧತಿ ಪ್ರಾರಂಭಿಸಿದ್ದಾರೆ. ಕೇರಳದ ಶಿನೀಲ್‌ಕುಮಾರ್‌ರವರು ಮಾರ್ಗದರ್ಶನ ನೀಡುತ್ತಿದ್ದಾರೆ.

ಏನಿದು ಆಕ್ವಾಪೋನಿಕ್‌ಸ್?

ನೀರಿನ ಮರುಬಳಕೆ ಮೂಲಕ ಮೀನು ಹಾಗೂ ಕೃಷಿಯನ್ನು ಏಕಕಾಲದಲ್ಲಿ ಮಾಡುವ ಪದ್ಧತಿಯಿದು. ಸಾಕಿದ ಮೀನುಗಳ ತ್ಯಾಜ್ಯದಿಂದ ಸಿಗುವ ಪೋಷ ಕಾಂಶಗಳನ್ನು ಜಲಕೃಷಿ (ಆಕ್ವಾಕಲ್ಚರ್)ಗೆ ಬಳಸಿಕೊಳ್ಳುವುದಾಗಿದೆ.  ಮೂಲಕ ಹರಿಯುವ ನೀರು ಸಸ್ಯಗಳಿಗೆ ಅಗತ್ಯ ಪೋಷಕಾಂಶ ಒದಗಿ ಸುತ್ತದೆ. ಇದರಿಂದ ನೀರಿನ ಮರುಬಳಕೆ ಮತ್ತು ಮಿತಬಳಕೆ ಸಾಧ್ಯವಾಗುತ್ತದೆ.

ನೀರಿನ ಮಿತವ್ಯಯ

ಆಕ್ವಾಫೋನಿಕ್‌ಸ್ ಪದ್ಧತಿಯಲ್ಲಿ ಜೇಡಿಯ ಮಣ್ಣಿನ ಉಂಡೆಗಳು ತುಂಬಿದ ಈ ಟ್ರೇಗಳಲ್ಲಿ ತರಕಾರಿ ಬೀಜಗಳನ್ನು ಬಿತ್ತಲಾಗುತ್ತದೆ. ಈ ಟ್ರೇಗಳ ಮೂಲಕ ನೀರನ್ನು ಮೀನು ಸಾಕುವ ಟ್ಯಾಂಕ್‌ಗೆ ಹರಿಸಲಾಗುತ್ತದೆ. ಇದೇ ಟ್ಯಾಂಕ್‌ನ ನೀರು ಮತ್ತೆ ತರಕಾರಿ ಟ್ರೇಗಳಿಗೆ ಹರಿಯುತ್ತದೆ. ಹೀಗೆ ನೀರು ಮೀನಿನ ಟ್ಯಾಂಕ್ ಮತ್ತು ತರಕಾರಿ ಬೆಳೆಯುವ  ಹೋಗುತ್ತದೆ. ನೀರಿನೊಂದಿಗೆ ತರಕಾರಿ ಟ್ರೇನಲ್ಲಿ ಹರಿಯುವ ನೀರನ್ನು ಬೇರಿಗೆ ಉಣಿಸುವುದರ ಜತೆಗೆ ಮೀನಿನ ತ್ಯಾಜ್ಯ ವಸ್ತುಗಳು ತರಕಾರಿ ಬೆಳೆಗೆ ಪೋಷಕಾಂಶವನ್ನೂ ಒದಗಿಸು ತ್ತದೆ. ಅದೇ ರೀತಿ ತರಕಾರಿ ಟ್ರೇಯ ನೀರು ಪುನಃ ಮೀನಿನ ಟ್ಯಾಂಕ್‌ಗೆ ಹರಿಯುವುದರಿಂದ ನೀರು ವ್ಯಯವೂ ಕಡಿಮೆ.

ಸಂಪರ್ಕ:  9886660441,  ವೆಬ್‌ಸೈಟ್ www.visaraponicxs.com

Tags

Related Articles

Leave a Reply

Your email address will not be published. Required fields are marked *

Language
Close