About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮಾನವಕಳ್ಳಸಾಗಾಟ ದಂಧೆಗಾರ್ತಿ ಜೊತೆ ಕೇಜ್ರಿವಾಲ್‌ ಚಿತ್ರ, ಭಾರೀ ವಿವಾದ

ಮಾನವಕಳ್ಳಸಾಗಾಟದ ಕಿಂಗ್‌ಪಿನ್‌ ಜತೆಯಲ್ಲಿ ಫೋಟೋ ತೆಗೆಸಿಕೊಂಡ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಾಕಷ್ಟು ವಿವಾದಕ್ಕೆ ಸಿಲುಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿರುವ ಚಿತ್ರದಲ್ಲಿ ಕೇಜ್ರಿವಾಲ್‌, ಮಾನವ ಕಳ್ಳಸಾಗಾಟದ ಆಪಾದಿತೆ ಪ್ರಭಾ ಮುನ್ನಿಯೊಂದಿಗೆ ಕುಳಿತು ಚಿತ್ರ ತೆಗೆಸಿಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿಯ ಪಂಜಾನಿ ಭಾಗ್‌ ಪ್ರದೇಶದಲ್ಲಿ ಪ್ರಭಾ ಮುನ್ನಿಯನ್ನು ಪೊಲೀಸರು ಬಂಧಿಸಿದ ಮಾರನೇ ದಿನವೇ ಈ ಚಿತ್ರ ಸಾಕಷ್ಟು ಬಿತ್ತರಗೊಳ್ಳುತ್ತಿದೆ. ಐದು ವರ್ಷಗಳ ಮಟ್ಟಿಗೆ ನಾಪತ್ತೆಯಾಗಿದ್ದ ಮುನ್ನಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಎನ್‌ಜಿಓ ಒಂದನ್ನು ನಡೆಸುವ ಸೋಗಿನಲ್ಲಿ, ಜಾರ್ಖಂಡ್‌ನಂಥ ರಾಜ್ಯಗಳ ಯುವ ಮಹಿಳೆಯರಿಗೆ ಉದ್ಯೋಗದ ಆಮಿಷ ತೋರಿ, ಅವರನ್ನು ದೆಹಲಿಗೆ ಕರೆಸಿಕೊಂಡು ಬಳಿಕ ಮಾನವಕಳ್ಳಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಮುನ್ನಿಯನ್ನು ಬಂಧಿಸಲಾಗಿದೆ.

ಮುನ್ನಿ ವಿರುದ್ಧ ಜಾರ್ಖಂಡ್‌ನಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಆಕೆಯ ತಲೆಗೆ 25,000 ರುಗಳ ಇನಾಮು ಘೋಷಣೆ ಮಾಡಲಾಗಿದೆ. ಈಕೆ ಇದುವರೆಗೂ ಅದೆಷ್ಟು  ಹೆಣ್ಣುಮಕ್ಕಳನ್ನು ಈ ರೀತಿ ಸಾಗಾಟ ಮಾಡಿದ್ದಾಳೆ ಎಂದು ಪೊಲೀಸರು ಇನ್ನೂ ಪತ್ತತೆ ಮಾಡುತ್ತಿದ್ದಾರೆ. 2013ರಲ್ಲಿ ಈಕೆ ತಪ್ಪಿಸಿಕೊಂಡಿದ್ದಳು.

ಸದ್ಯ ಮುನ್ನಿ ಜಾರ್ಖಂಡ್‌ ಪೊಲೀಸರ ವಶದಲ್ಲಿದ್ದಾಳೆ.

Tags

Related Articles

Leave a Reply

Your email address will not be published. Required fields are marked *

Language
Close