About Us Advertise with us Be a Reporter E-Paper

ವಿ +

ಸೊಗದ ಮೂಲವಿಹುದೆಲ್ಲಿ ನೀಲದೊಳೊ, ಕೆಂಪಿನೊಳೊ?

ಮಂಜುಳಾ ಕಲ್ಯಾಣ್

ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ದಿಂಬಿನಲ್ಲಿ ತಲೆಯಿಡುವ ವರೆಗೂ ಏನೋ ಅವಸರ ಏನೋ ಧಾವಂತ. ಅವಸರವೇ ಚಕ್ರಗಳಾಗಿ  ಬಾಳ ಬಂಡಿಯನ್ನು ಎಳೆದೊ ಯ್ಯುತ್ತಿದೆಯೇನೋ ಎಂದು ಬಹಳಷ್ಟು ಸಲ ಅನ್ನಿಸುತ್ತಿದೆ. ಮೂಡೋ ಸೂರ‌್ಯನ ಕೆಂಪು ಚಪ್ಪರದ ಕೆಳಗೇ ಇದ್ದರೂ ಒಮ್ಮೆ  ತಲೆಯೆತ್ತಿ ಆ ಸುಮಧುರ ದೃಶ್ಯ ಕಣ್ತುಂಬಿಸಿಕೊಳ್ಳದೆ ಮುಂಬಾಗಿಲಿಗೆ ನೀರು-ರಂಗೋಲಿ ಕಾಣಿಸ್ತೀವಿ. ಯಂತ್ರ ಸರಿ ಯಾಗಿ ಚಾಲೂ ಆಗಲು ಎಣ್ಣೆ ಬಿಡುವಂತೆ ಒಂದಿಷ್ಟು ಕಾಫಿ ಸುರ್ಕೋ ತೀವಿ ಬಿಟ್ರೆ, ಅದರ ಒಂದು ಗುಟುಕು ಕೂಡ ಆಸ್ವಾದಿಸೋ ದಿಲ್ಲ. ಇತ್ತ ಸಿಂಕಿನಲ್ಲಿನ ಪಾತ್ರೆಗಳನ್ನು ತಿಕ್ಕಿ ಕುಕ್ಕಿ ತೊಳೆದಂತಾಗಿಸಿ ಅಡುಗೆಗೆ ಇಡುವುದರ ಜತೆಜತೆಯಲ್ಲೇ ಮನೆಮಂದಿಗೆಲ್ಲಾ ಕೇಳಿಸುವಂತೆ ಪ್ರಭಾತ ಸೇವೆ ಮಾಡಿಕೊಳ್ಳುತ್ತಾ ಇರುತ್ತೇವೆ. ಕುಕ್ಕರ್ ಕೂಗು, ಮಿಕ್ಸಿ ಗಳ ಗಿರ್ರೆನ್ನುವ ಶಬ್ದ, ಮಕ್ಕಳ ಶೂ,  ಪೆನ್ನಿಗಾಗಿನ ಪರದಾಟಗಳ ಮಧ್ಯೆ ಬೆಳಗಿನ ತಂಪಾಗಲೀ, ಕಿಟಕಿಯಾಚೆ ಕೂಗುವ ಹಕ್ಕಿಯ ದನಿಯಾಗಲೀ ಯಾವುದೂ ನಮ್ಮ ಅವರಿಗೇ ಬರುವುದಿಲ್ಲ ಅಥವಾ ಅವ್ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿ ನಾವಿರುವುದಿಲ್ಲ. ಮನೆ ಮಂದಿಯೆಲ್ಲ ಸಮಯ ಪಾಲನೆಯ ಜವಾಬ್ದಾರಿಯನ್ನು ನಗು ವಿರದ ಮೊಗಗಳಿಗೆ ಅಂಟಿಸಿಕೊಂಡು ಮನೆಯಿಂದ ಹೊರ ಬಿದ್ದರೆ ದುಡಿದು ಹಣ್ಣಾಗಿ ಮತ್ತೆ  ಸಂಜೆ ಮರಳಿ ಗೂಡಿಗೆ ಸೇರುವುದು. ಮನೆಗೆ ಬಂದು ಸೋತ ಕಾಲುಗಳೆಳೆದು ಉಸ್ಸಪ್ಪಾ ಎಂದು ಕೂತರೆ ಅಂದಿನ  ದಿನದ ಮುಕ್ಕಾಲು ಪಾಲು ಮುಗಿದಂತೆಯೇ  ರಾತ್ರಿಗೆ ಒಂದಿಷ್ಟು ಸಾರಿದ್ದರೆ ಅನ್ನವೋ ಅಥವಾ ಅನ್ನವಿದ್ದರೆ ಅರಿಶಿಣದ ಓಕುಳಿಯಾಡಿಸಿ ಚಿತ್ರಾನ್ನವೊ ಮಾಡಿ ಹೊಟ್ಟೆಯೆಂಬ ಡಬ್ಬಿಗೆ ತುಂಬಿಬಿಟ್ಟರೆ ಮುಗಿಯಿತು. ಅಷ್ಟು ಹೊತ್ತಿಗೆ ಮಕ್ಕಳೂ ಇಷ್ಟವಿದ್ದೋ ಇಲ್ಲದೆಯೋ ಓದು, ಹೋಮ್‌ವರ್ಕ್ ಮುಗಿಸಿ ಮೊಬೈಲ್ ಅಥವಾ ಟಿವಿಯೆಂಬ ಮಾಯಾಂಗನೆಯರ ಜಾಲದಲ್ಲಿ ತಿಂದರೇ ತಿಂದರು ಇಲ್ಲವಾದರೆ ಇಲ್ಲ. ಹಾಗೇ ಸುಸ್ತಾಗಿ  ತೂಕಡಿ ಸುವ ಮಕ್ಕಳ ಬಾಯಿಗೆರಡು ತುತ್ತು ತಿನ್ನಿಸುವ ಕಾಯಕ ಸೋತ ಕೈಗಳಿಗೆ ಸವಾಲಲ್ಲದೆ ಮತ್ತೇನು? ಅಲ್ಲಿಗೆ ಆ ದಿನವೆಂಬುದು ನಮ್ಮ ಸ್ವಾಮ್ಯದ  ಸಂಪೂರ್ಣ ಬಾಹರ್.

ನೂರು ಪುಟಗಳಿರಬಹುದೆಂದು ಹೇಳಲಾಗುವ ನಮ್ಮ ಆಯ ಸ್ಸೆಂಬ ಆಮೂಲ್ಯ ಪುಸ್ತಕದ ಒಂದು ಹಾಳೆಯು ನಮ್ಮ ಸ್ಮತಿಯಲ್ಲಿ ಯಾವ ಮಧುರ ಅನುಭೂತಿಯನ್ನೂ ಮೂಡಿಸದೆ ಕಳೆದು ಹೋಗಿ ರುತ್ತದೆ. ಹೀಗೆ ಕಣ್ಣೆದುರೆ ವ್ಯರ್ಥವಾಗಿ ಹರಿದು ಹೋದ ಅಮೂಲ್ಯ ಹಾಳೆಗಳು ಅವೆಷ್ಟೋ! ಸದಾ ಗಳಿಸುವುದು, ಗಳಿಸಲು ಅನುವಾಗು ವಂತೆ ಮಕ್ಕಳನ್ನು ಸಿದ್ಧ ಗೊಳಿಸುವುದು, ಗಳಿಸುವುದರ ಸುತ್ತ ಕನಸು ಗಳು ಸತ್ತ ನನಸಿನಲ್ಲಿ ಗಿರಕಿ ಹೊಡೆಯುತ್ತಲೇ ಇರುವುದು. ಇದಿಷ್ಟೇ ಜೀವನವೇ? ಆಯಸ್ಸಿನ  ದಿನವನ್ನು ಏಕೆ ಹೀಗೆ ಹಾಳಾಗಲು ಬಿಡುತ್ತಿದ್ದೇವೆ? ಹಾಗೆಂದು ಹುಟ್ಟಿನಿಂದಲೇ ಯಾರೂ ಶ್ರೇಷ್ಠ ಸಾಧಕ ರಾಗಿರಲೂ ಸಾಧ್ಯವಿಲ್ಲ. ನಮ್ಮ ಸಮಯ ಉಜ್ವಲವಾದುದೆಂಬ ಅರಿ ವಿದ್ದರೆ ಸಾಕು, ಹೇಗೂ ಬಣ್ಣಗಳನ್ನು ರೇಖಿಸಬಹುದು. ತಂತಾನೇ ಬದುಕು ಪ್ರಜ್ವಲವಾಗುತ್ತಾ ಸಾಗುತ್ತದೆ. ಒಂದು ದಿನಮಾನದಲ್ಲಿ ರವಿಯು ಮೂಡಿಸುವ ನೂರು ಬಣ್ಣ ಕಾಣಿಸುತ್ತದೆ. ಅಪರೂಪಕ್ಕಲ್ಲ, ನಿತ್ಯವೂ ನಮಗಾಗಿ ಹಕ್ಕಿಯ ಕಂಠದಲ್ಲಿ ಇಂಪಿನ ಬಣ್ಣ, ಪುಷ್ಪ ಸಂಕುಲದಲಿ ಸುಗಂಧದ ಬಣ್ಣ, ಇರುಳಿನಾಗಸದಲಿ ಮಿನುಗು ತಾರೆಯ ಬಣ್ಣ, ಒಂದೇ ಎರಡೇ?  ತೇಲಿಬಿಟ್ಟ ಹತ್ತಿಯ ಮೋಡದ ಹಗುರತ್ವದ ಬಣ್ಣ ನಮ್ಮ ಗಮನಕ್ಕೆಂದಾದರೂ ಬಂದಿದ್ದಿದೆಯೇ? ಇಲ್ಲ. ಇನ್ನೂ ಎಷ್ಟೋ ನಿಸರ್ಗದ ಸಂಭ್ರಮಾ ಚರಣೆಗಳನ್ನು ಅಲಕ್ಷಿಸಿ ಗಾಣದೆತ್ತಿನಂತೆ ಕೆಲವೇ ನಿಗದಿತ ಕೆಲಸಗಳ ಸುತ್ತ ಗಿರಕಿ ಹೊಡೆದದ್ದೇ ಹೊಡೆದದ್ದು. ಇವುಗಳ ಮಧ್ಯೆ ಸುಖಿಸಿ ದ್ದೇವೋ ಅಥವಾ ಹಾಗೆಂದು ಭ್ರಮಿಸಿದ್ದೇವೋ ಏನೋ ಓಡು ಓಡು. ಒಂದರೆ ಘಳಿಗೆ ನಿಂತರೂ ಇತರರಿಗಿಂತ ಇನ್ನೆಷ್ಟು ಹಿಂದೆ ಉಳಿದು ಬಿಡಬೇಕಾಗುವುದೋ ಎಂಬ ದಿಗಿಲಿಗೆ ಬಲಿಯಾಗಿ ಜೀವನದ ಪ್ರಶಾಂತ ಸೊಗಡನ್ನು ಬಲಿಕೊಡುವುದಾದರೂ ಏತಕ್ಕೆ?  ದಿನ ದುಡಿದು, ನೋವುಗಳನ್ನು ಮುಂದೆ ಕಾಯಿಲೆ ಯಾಗಿ ಮಾರ್ಪಡಿಸಿಕೊಂಡು ಇರಲಾಗದೆ ಹೊರಲಾಗದೆ ನರನರಳಿ ಕೊನೆಗೊಮ್ಮೆ ಕಣ್ಮುಚ್ಚಿ ಗೋಡೆಯ ಮೇಲೆ ಪಟವಾಗಿ ಹತ್ತು ಜನರೆಲೆಯ ಊಟವಾಗಲಿಕ್ಕೇ? ಹಾಗೆ ಬದುಕಿದ್ದೇ ಆದರೆ ಅಂತಹ ಬದುಕಿನ ಸಾರ್ಥಕತೆ ಯಾದರೂ ಏನು? ಹೊಟ್ಟೆ ಬಟ್ಟೆ ಸೂರಿಗಷ್ಟು ಮಾಡಿಕೊಂಡು ಬಿಟ್ಟರೆ ನಮ್ಮ ಜನ್ಮ ಸಾರ್ಥಕವಾಗಿ ಬಿಟ್ಟಂತಾಗು ತ್ತದೆಯೇ? ಈಗೀಗಂತೂ ಇವುಗಳನ್ನೇ ಸಾಧನೆಯ ಮಾನದಂಡ ಗಳಾಗಿ ಪರಿಗಣಿಸುವ ದುರಂತ ಎಲ್ಲೆಡೆಯೂ ಘಟಿಸುತ್ತಿದೆ. ಇದರ ಪರಿಣಾಮವೇ ಇಂದಿನ ಈ  ಮೂಲ ಕಾರಣವೆನಿಸುತ್ತದೆ.

ಸುಮಧುರ ಬದುಕಿನ ಕೊನೆಯ ಹಾಳೆ ಗೊತ್ತಿರದೆ, ಪುಟಗಳನ್ನು ಮನಸೋ ಇಚ್ಛೆ ಹಾಳು ಮಾಡುತ್ತಿದ್ದೇವೆ. ಬಹುಶಃ ಕೊನೆಯ ಪುಟ ಗುಪ್ತವಾಗಿ ಸಮೀಪದಲ್ಲೇ ಇರಬಹುದು. ಅರಿತವರಾರು? ಸಾಧ್ಯ ವಾದಷ್ಟು ಬದುಕಿನ ಬಣ್ಣಗಳನ್ನು ಸವಿಯೋಣ.

Tags

Related Articles

Leave a Reply

Your email address will not be published. Required fields are marked *

Language
Close