About Us Advertise with us Be a Reporter E-Paper

ಅಂಕಣಗಳು

ಹತ್ಯೆಕೋರರ ಗುಂಡಿಗೆ ಬಲಿಯಾಗಿದ್ದು ಅವನಿ ಎಂಬುದು ಖಚಿತವೇ?!

- ಪವನ್ ವಸಿಷ್ಟ

1 ಅವನಿಯನ್ನು ಗುಂಡಿಕ್ಕಿ ಕೊಂದಾಯಿತು ಎಂದು ಮಹಾರಾಷ್ಟ್ರ ಸರಕಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಅಂತೂ ಅಂತಿಮವಾಗಿ ಹಂತಕರ ಕೈಯೇ ಮೇಲಾಯಿತು. ಕಾನೂನಿಗೆ ವಿರುದ್ಧವಾಗಿ ರಾತ್ರಿ ಸಮಯದಲ್ಲಿ ಹುಲಿ ಬಲಿಯಾಯಿತು. ಅದು ಅವನಿಯೇ ಸತ್ತಿರುವುದು ಎಂದು ಖಚಿತ ಮಾಹಿತಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರವಷ್ಟೇ ತಿಳಿಯುತ್ತದೆ. ಮುಗ್ಧ ಅವನಿಗೆ ಹಂತಕ ಪಟ್ಟ ನೀಡಿ, ನಿಜವಾದ ಹಂತಕರನ್ನು ರಕ್ಷಕ ಎಂದು ಬಿಂಬಿಸಲು ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ದಿವ್ಯಾಂಗವಾಗಿವೆಯೇನೋ ಎಂಬ ಅನುಮಾನ ಈಗ ದಟ್ಟವಾಗಿ ಕಾಡತೊಡಗಿದೆ.

ವನ್ಯಜೀವಿಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ ಎಂದು ಭಾರತೀಯ ಸಂವಿಧಾನದಲ್ಲಿ ಹೇಳಲಾಗಿದೆ. ಸಂವಿಧಾನದ ಆಶಯಗಳ ವಿರುದ್ಧ ಇಂದು ವ್ಯವಸ್ಥಿತವಾಗಿ ಒಂದು ಹುಲಿಯನ್ನು ಕೊಲ್ಲಲಾಗಿದೆ. ಗನ್ ಕೈಯಲ್ಲಿ ಇದ್ದ ಮಾತ್ರಕ್ಕೆ ಗುಂಡು ಹಾರಿಸುವುದೇ ಚಟ ಮಾಡಿಕೊಂಡ ಹಂತಕರಿಂದ ಜೀವ ಉಳಿಸುವ ಯೋಚನೆ ಎಲ್ಲಾದರು ಬಂದೀತೆ? ಮನುಷ್ಯ ರೂಪದ ರಾಕ್ಷಸರ ಆಸೆಗೆ ಕೊನೆಯೇ ಇಲ್ಲವೇ? ಎಲ್ಲರಂತೆ ತಾನು ಆಸೆ ಇಟ್ಟುಕೊಂಡು ಬಂದ ಅವನಿಗೆ ನಾವು ಕೊಟ್ಟ ಗೌರವ, ಮನುಷ್ಯ ಸಂಕುಲವನ್ನೇ ಅಸಹ್ಯ ಪಡುವಂತೆ ಮಾಡಿದೆ.

ಸದ್ಯ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ 2 ಮರಿಗಳನ್ನು ಹುಡುಕಿ ಅದಕ್ಕೆ ಅರವಳಿಕೆ ಮದ್ದು ನೀಡಿ  Rescue Centre ಗೆ ಕಳುಹಿಸಬೇಕೆಂದು ಆದೇಶಿಸಿದೆ. ಆದರೆ ಮಹಾರಾಷ್ಟ್ರ ಸರಕಾರ ಇನ್ನೂ ಅವನಿಯನ್ನ ಕೊಂದ ಸಂತೋಷದ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಕಾರಣ, ಈವರೆಗೂ ಮರಿಯ ಸುಳಿವೇ ಅಧಿಕಾರಿಗಳಿಗೆ ದೊರೆಯದಿರುವುದು. ಒಂದು ವೇಳೆ ಮರಿ ಜೀವಂತವಾಗಿ, ಸಿಗದೇ ಹೋದಲ್ಲಿ ಅದು ಹಸಿವು ತಾಳಲಾರದೆ ಪ್ರಾಣ ಕಳೆದುಕೊಳ್ಳುವ ಲಕ್ಷಣಗಳು ಹೆಚ್ಚಾಗಿವೆ. ಅಲ್ಲಿಗೆ ಹುಲಿ ಸಾವಿನ ಸಂಖ್ಯೆ ಎರಡು ಅಥವಾ ಮೂರಕ್ಕೆ ಏರಲಿದೆ.

ಕಾಡಿನ ಹುಲಿ ಅಬ್ಬಬ್ಬಾ ಅಂದರೆ 10-12 ವರ್ಷ ಬದುಕಬಹುದಷ್ಟೆ. ಒಂದು ರಾಷ್ಟ್ರೀಯ ಪ್ರಾಣಿಯನ್ನು 12 ವರ್ಷಗಳ ಕಾಲ ರಕ್ಷಿಸಲಾಗದ ಅಸಹಾಯಕತೆ ನಮ್ಮ ದೇಶಕ್ಕೆ ಎದುರಾಗಿದೆ ಎಂದರೆ ನಿಜಕ್ಕೂ ಶೋಚನೀಯ. ಇದನ್ನು ಗಮನಿಸಿದರೆ ಹುಲಿ ನೋಡಿ ಮನುಷ್ಯರು ಭಯ ಪಡುವ ಬದಲಿಗೆ ರಾಷ್ಟ್ರೀಯ ಪ್ರಾಣಿಯೇ ಇಲ್ಲದ ಆಗಿಬಿಡಬಹುದೇನೊ ಎಂಬ ಭಯವೇ ಇಂದು ಹೆಚ್ಚಾಗಿದೆ.

ಅವನಿ ಸಾವಿನ ಸುತ್ತ ಕಾಡುತ್ತಿದೆ ಅನುಮಾನದ ಹುತ್ತಸುಪ್ರೀಂ ತನ್ನ ಆದೇಶದಲ್ಲಿ The effort to tranquilize and capture T&1 tigress will be continued and if unsuccessful, it shall be eliminated by shooting to avoid any further loss of human life ಎಂದು ಆದೇಶಿಸಿತ್ತು. ಅಂದರೆ ಮೊದಲು 1ನ್ನು ಅರೆವಳಿಕೆ ಮದ್ದು ಹಿಡಿಯುವ ಪ್ರಯತ್ನ ಮುಂದುವರಿಸಿ. ಅದಾಗದಿದ್ದಲ್ಲಿ ಮುಂದಾಗಬಹುದಾದ ನರಬಲಿಯಂತಹ ಅನಾಹುತ ತಪ್ಪಿಸಲು ಅಂತಿಮ ಆಯ್ಕೆಯಾಗಿ ಗುಂಡು ಹಾರಿಸಿ ಎಂದು ಆದೇಶಿಸಿತ್ತು. ಆದರೆ ಇಲ್ಲಿ ಆಗಿದ್ದೇ ಬೇರೆ ಎಂದು ಕರ್ನಾಟಕ ಮೂಲದ ಪಶುವೈದ್ಯ ಮತ್ತು ವನ್ಯಜೀವಿ ತಜ್ಞರಾಗಿರುವ ಡಾ. ಪ್ರಯಾಗ್ ಆರೋಪಿಸಿದ್ದಾರೆ.

ಆರೋಪ-1
ಹುಲಿ ಸತ್ತ ಫೋಟೊ ಗಮನಿಸಿದರೆ, ಮೊದಲು ಗುಂಡು ಹಾರಿಸಿ ನಂತರ ಸುಪ್ರೀಂ ಆದೇಶ ಜ್ಞಾಪಕಕ್ಕೆ ಬಂದಂತಾಗಿ ಅರೆವಳಿಕೆ ಮದ್ದನ್ನು ಗುಂಡಿಟ್ಟ ನಂತರ ಚುಚ್ಚಿದ್ದಾರೆಂದು ಮೇಲ್ನೋಟಕ್ಕೆ ಕಾಣುತ್ತಿದೆ. ಇದು ವರದಿಯಲ್ಲೂ ಸಹ ಗುಂಡಿಟ್ಟ ನಂತರ ಡಾರ್ಟ್ ಮಾಡಿರುವುದಾಗಿ ಉಲ್ಲೇಖವಾಗಿರುವುದಾಗಿ ಮೂಲಗಳು ತಿಳಿಸಿವೆ. ಯಾವುದೇ ಜೀವಿಗಳಿಗೆ ಈ್ಟಠಿ ಮಾಡಿದಾಗ, ಗುರಿ ಇಟ್ಟ ಜಾಗಕ್ಕೆ ಗನ್ ನಿಂದ ಹೊರಹೋಗುವ ವಸ್ತು Perpendicular BX land BWÜáñܤ¨æ ÖæãÃÜñÜá Parallel BX ಆಗಿ ಅಲ್ಲ. ಅವನಿ ವಿಚಾರದಲ್ಲಿ ಡಾರ್ಟ್ಆಗಿ parallel ಇರುವುದು ಕಾಣಬಹುದು.

ಆರೋಪ-2
ಒಂದು ವೇಳೆ ಅರೆವಳಿಕೆ ಮದ್ದು (ಡಾರ್ಟ್) ಗನ್ ಮೂಲಕ ನೀಡಿದ್ದರೆ, ಯಾವುದೇ ಪ್ರಾಣಿ ಹಿಂತಿರುಗಿ ತಕ್ಷಣ ದಾಳಿ ಅಷ್ಟು ಸುಲಭವಲ್ಲ. ಅಲ್ಲದೆ ರಾತ್ರಿ ಸಮಯದಲ್ಲಿ ಈ operation ನಡೆದಿದ್ದು, ಪ್ರಾಣಿಗೂ ಸಹ ದಾಳಿಕೋರರನ್ನ ಹುಡುಕಲು ಸಮಯ ಬೇಕಾಗುತ್ತದೆ. ವಾಸ್ತವವಾಗಿ ಸೂರ್ಯಾಸ್ತ ಮತ್ತು ಸೂರ್ಯೋದಯದ ಸಮಯದಲ್ಲಿ ಡಾರ್ಟ್ ಮಾಡುವುದು ನಿಷೇಧಿಸಲಾಗಿದೆ. ಆದರೆ ಅವನಿ ವಿಚಾರದಲ್ಲಿ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಡಾರ್ಟ್ ಮಾಡಬೇಕಾದರೆ ಯಾರು 10-20 ಅಡಿ ಅಂತರದಿಂದ ಡಾರ್ಟ್ ಮಾಡುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಕೆಲವು ಮೀಟರ್ ಅಂತರದಲ್ಲಿ ನಿಂತು ಡಾರ್ಟ್ ಮಾಡಿರುತ್ತಾರೆ. ಡಾರ್ಟ್ ಮಾಡಲು  safe distance ಆಗಿರುತ್ತದೆ. ಇಲ್ಲಿ 20 ಮೀ ಅಂತರದಿಂದ ಡಾರ್ಟ್ ಮಾಡಿರುವುದಾಗಿ ಹಂತಕರ ಗುಂಪಿನವರು ಮಾಹಿತಿ ನೀಡಿದ್ದಾರೆ. ಪ್ರಾಣಿಗಳು ತನಗೆ ಯಾವ ದಿಕ್ಕಿನಿಂದ ಅರವಳಿಕೆ ಹಾರಿಸಲಾಗಿದೆ ಎಂದು ಯೋಚಿಸಿ ್ಟಛ್ಚಿಠಿ ಮಾಡುವಷ್ಟರಲ್ಲಿ ಮದ್ದು ಕೆಲಸ ಮಾಡಲು ಶುರು ಮಾಡಿರುತ್ತದೆ.ಅಂದರೆ ಪ್ರಾಣಿ ದಾಳಿ ಮಾಡುವ ಹೊತ್ತಿಗೆ ಮೂರ್ಛೆ ಹೋಗಿರುತ್ತದೆ. ಅವನಿ ಪ್ರಕರಣದಲ್ಲಿ ಆಕೆಯನ್ನು ದಾಳಿ ಮಾಡಿದ ಸಮಯ, ಪ್ರದೇಶ, ವಾತಾವರಣ ಗಮನಿಸಿದರೆ, ಅವನಿ ಹಿಂತಿರುಗಿ ದಾಳಿ ಮಾಡಿರುವ ಅವಕಾಶ

ಆರೋಪ-3
ಡಾರ್ಟ್ ಮಾಡಬೇಕಾದರೆ ನುರಿತ ಪಶು ವೈದ್ಯ ಜತೆಗಿರಬೇಕು. ಕಾರಣ ಡಾರ್ಟ್‌ಗೆ ಬಳಸುವ ಡ್ರಗ್ ಶೆಡ್ಯೂಲ್ ಎಚ್ ವಲಯಕ್ಕೆ ಸೇರಿದ್ದು. ಡಾರ್ಟ್ ಮಾಡುವ ಡ್ರಗ್‌ನ ‘ರೇಪ್ ಡ್ರಗ್’ ಎಂದೂ ಸಹ ಕರೆಯುತ್ತಾರೆ. ಶೆಡ್ಯೂಲ್ ಎಚ್ ಡ್ರಗ್ ಪರವಾನಗಿ ಪಡೆದ ಪಶುವೈದ್ಯರು ಮತ್ತು ಅವರ ಉಪಸ್ಥಿತಿಯಲ್ಲಿ ಮಾತ್ರ ಬಳಸಬೇಕು. ಡಾರ್ಟ್ ಮಾಡಿದ ನಂತರ ಪ್ರಾಣಿಯ ಆರೋಗ್ಯದಲ್ಲಿ ಏರುಪೇರಾಗಲಿದ್ದು ತಕ್ಷಣವೇ ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ ಅವನಿ ವಿಚಾರದಲ್ಲಿ ಪರವಾನಗಿ ಮತ್ತು ಪಶುವೈದ್ಯರ ಅನುಪಸ್ಥಿತಿಯಲ್ಲಿ ಡಾರ್ಟ್ ಮಾಡಲಾಗಿದೆ ಎಂದು ಹೇಳಲಾಗಿದ್ದು, ಅದು ವೆಟರ್ನರಿ ಕೌನ್ಸಿಲ್ ಆಫ್ ಇಂಡಿಯಾದ ನಿಯಮ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಘೆಇಅ) ಪ್ರಕಾರ, ಹುಲಿಗೆ ಅರವಳಿಕೆ ಮದ್ದು ನೀಡಬೇಕಾದರೆ, ಈ ಇಊ ಮಟ್ಟದ ಅಧಿಕಾರಿ ಬಯೋಲಾಜಿಸ್‌ಟ್ ಮತ್ತು ಪಶುವೈದ್ಯರು ಇರಲೇಬೇಕು. ಅವನಿ ವಿಚಾರದಲ್ಲಿ ಈ ತ್ರಿಮೂರ್ತಿಗಳು ಇರಲಿಲ್ಲ. ಈ ಮೂವರು ಇಲ್ಲದೆ ಹುಲಿ ಹಿಡಿಯಲು ಹೋದರೆ, ಅದು ಅಕ್ರಮ ಹುಲಿ ಎಂದೇ ಪರಿಗಣಿಸಬೇಕಾಗುತ್ತದೆ ಎಂಬುದು ಗಮನಿಸಬೇಕು.

ಆರೋಪ-4
ಅವನಿಗೆ ಗುಂಡೇಟು ಬೀಳುವ ಮುನ್ನ ಅರೆವಳಿಕೆ ಮದ್ದು ನೀಡಿಲ್ಲ ಎಂದು ಪ್ರತ್ಯಕ್ಷದರ್ಶಿ ಫೋನ್ ಮೂಲಕ ಹೇಳಿಕೆ ನೀಡಿರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ಯ ಈ ಸಾಕ್ಷಿಯನ್ನು ಖರೀದಿಸುವ ಎಲ್ಲ ರೀತಿ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಲಾಗಿದೆ. ಸಾಕ್ಷಿ ಪ್ರತಿಕೂಲ ಹೇಳಿಕೆ ನೀಡದೆ ಹೋದಲ್ಲಿ ಅವನಿ ಕೊಂದ ಪಾಪಿಗಳು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಆರೋಪ- 5
ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ ನರಭಕ್ಷಕ ಎಂದು ಹೇಳಬೇಕಾದರೆ (ಘೆಇಅ) ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಪೂರೈಸಿರಬೇಕು. ಆದರೆ 1 ವಿಚಾರದಲ್ಲಿ ಮಾರ್ಗಸೂಚಿಯಲ್ಲಿನ ಅಂಶಗಳು ಪೂರೈಸಿಲ್ಲ. ಹಾಗಿದ್ದರೂ ಸಹ ಆಕೆಗೆ ನರಭಕ್ಷಕಿ ಪಟ್ಟ ಕಟ್ಟಲಾಯಿತು.

ಇಂದು ಅವನಿಯನ್ನು ರಕ್ಷಿಸಲು ಇದ್ದ ಅಂತಿಮ ಹಾಗೂ ಏಕೈಕ ಅವಕಾಶವಾಗಿದ್ದ ಈ ಮಾರ್ಗಸೂಚಿಯು ಆಕೆಯನ್ನು ರಕ್ಷಿಸದೆ ಇರುವುದು ಎಂಥ ಕಟುಕರ ಕಣ್ಣಲ್ಲೂ ನೀರು ತರಿಸುತ್ತದೆ.
ವಿಧಿವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಅವನಿಯೇ ಸತ್ತಿರುವುದಾಗಿ ಒಂದು ವೇಳೆ ದೃಡಪಟ್ಟು, ನಂತರವೂ ನರಬಲಿ ಮತ್ತೊಂದು ಹುಲಿಯನ್ನ ಬಲಿ ಹಾಕುವಂತೆ ಸರಕಾರಕ್ಕೆ ಒತ್ತಡ ಬರಲು ಆರಂಭವಾಗುವುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ಹೀಗಾದರೆ ಆ ್ಛಟ್ಟ ಐ್ಞಜ್ಞಿ ಒ್ಠಠಿಜ್ಚಿಛಿ ಪಟ್ಟಿಯಲ್ಲಿ ಅವನಿಯನ್ನ ಕೊಲ್ಲಲು ಸುಪ್ರೀಂ ಆದೇಶ ನೀಡಿದ 2018ರ ಸೆ.6 ಸಹ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ. ಆ ಪ್ರಾಂತ್ಯದಲ್ಲಿ ಒಟ್ಟು 7 ಹುಲಿಗಳು ಇರುವುದಾಗಿ ಅಂದಾಜಿಸಲಾಗಿದೆ. ಉಳಿದ 6 ಹುಲಿ ರಕ್ಷಿಸಲು ತನ್ನ ಪ್ರಾಣ ಪಣಕ್ಕೆ ಇಟ್ಟ ವೀರ ಯೋಧೆ ಎಂಬ ಕೀರ್ತಿಗೆ ಅವನಿ ಒಂದು ವೇಳೆ ಯಾವುದೇ ನರಬಲಿ ಆಗದಿದ್ದರೂ ಸಹ ಆಕೆ ನಿರಪರಾಧಿ ಆಗಿಯೇ ಉಳಿಯುತ್ತಾಳೆ. ಕಾರಣ ಘೆಇಅ ಪ್ರಕಾರ ಅವನಿ ನರಭಕ್ಷಕಿ ಎಂದು ಇನ್ನು ದೃಢಪಟ್ಟಿಲ್ಲದೆ ಇರುವುದು.

ದೇಶದ ಮೂಲೆ ಮೂಲೆಯಿಂದ ಹಲವಾರು ಸಂಘಟನೆ ಮತ್ತು ಸಂಘ ಸಂಸ್ಥೆಗಳು ಅವನಿ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪ್ರಕರಣ ಸಿಬಿಐಗೆ ವಹಿಸುವಂತೆ ರಾಜ್ಯ ಹಾಗು ಕೇಂದ್ರ ಸರಕಾರಕ್ಕೆ ಒತ್ತಡ ಹೇರುತ್ತಿದೆ. ಅವನಿ ಪ್ರಕರಣದಲ್ಲಿ ಕಾನೂನು ಪಾಲನೆ ಆಗದೆ ಇದ್ದು, ಆಕೆಯ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಅವನಿ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ, ಸುಪ್ರೀಂ ಕದ ತಟ್ಟುವುದಾಗಿ ಡಾ.ಎಚ್.ಎಸ್. ಪ್ರಯಾಗ್ ಹೇಳಿದ್ದಾರೆ.

ಅದೇನೇ ಇರಲಿ. ಅರಣ್ಯ ಒತ್ತುವರಿಯಂತಹ ಗಂಭೀರ ಪ್ರಕರಣಗಳ ದಾವೆಗಳು ದಿನಂ ಪ್ರತಿ ಕೋರ್ಟ್ ನಲ್ಲಿ ದಾಖಲಾಗುತ್ತಿದ್ದು, ಕೋರ್ಟ್‌ಗಳಿಗೂ ಸಹ ಒತ್ತುವರಿಯಾಗಿ ಪರಿಣಮಿಸಿದೆ. ಇದನ್ನು ತಡೆಗಟ್ಟಲು ಅವನಿ ಪ್ರಜಾಪ್ರಭುತ್ವದ ಮೂರು ಅಂಗಗಳಿಗೆ ಒಂದು ಸುವರ್ಣಾವಕಾಶ ನೀಡಿದ್ದಳು. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಪ್ರಜೆಗಳು ಆಕೆಯ ಪ್ರಾಣವನ್ನೇ ಒಂದು ಹುಲಿ ನಿಮ್ಮ ಪ್ರದೇಶದಲ್ಲಿ ಇದೆ ಎಂದಾದರೆ ಹುಲಿ ಭಯದಿಂದ ಅರಣ್ಯ ಒತ್ತುವರಿ ತಡೆಗಟ್ಟುತ್ತದೆ ಎಂಬುದು ಕಟು ಸತ್ಯ.

ಅವನಿ ನರಭಕ್ಷಕ ಹುಲಿ ಎಂಬುದನ್ನು ಮುಂದಿಟ್ಟುಕೊಂಡು ಅವನಿಯನ್ನ ಸೆರೆ ಹಿಡಿಯುವುದರ ಜತೆಗೆ, ನರಬಲಿಯನ್ನು ತಡೆಯಲು ಅರಣ್ಯ ಭೂಮಿ ಒತ್ತುವರಿ ಸಹ ತೆರೆವುಗೊಳಿಸುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬಹುದಿತ್ತು. ಮಾತ್ರವಲ್ಲದೆ, ಸದ್ಯ ಅವನಿ ಸಾವಿನ ಸುತ್ತ ಎದ್ದಿರುವ ಅನುಮಾನ ತಡೆಗಟ್ಟುವ ನಿಟ್ಟಿನಲ್ಲಿ ಈ ಟಛ್ಟಿಠಿಜಿಟ್ಞ ನ್ನು ವಿಡಿಯೋ ಚಿತ್ರೀಕರಣ ಆದೇಶದಲ್ಲಿ ಸೂಚನೆ ನೀಡಿದ್ದರೆ ಮತ್ತಷ್ಟು ಕೋರ್ಟ್ ಸಮಯ ಹಾಳಾಗುವುದನ್ನು ತಡೆಯಬಹುದಿತ್ತು. ಅದೇನೇ ಇರಲಿ ತಪ್ಪು ಯಾರದ್ದೆಂದು ತಿಳಿಯುವ ಮುನ್ನ ಒಂದು ಹುಲಿ ಜೀವ ಕಳೆದುಕೊಂಡಿದೆ. ಮತ್ತಷ್ಟು ಹುಲಿಗಳ ಮಾರಣ ಹೋಮ ನಡೆಯದಂತೆ ಎಚ್ಚರವಹಿಸುವುದು ನಮ್ಮೆಲ್ಲರ ಕರ್ತವ್ಯ. ಎಷ್ಟಾದದರೂ ಅದು ನಮ್ಮ ರಾಷ್ಟ್ರೀಯ ಪ್ರಾಣಿ ಅಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close