About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಸಶಸ್ತ್ರ ಪಡೆಗಳಿಗೂ ಅಚ್ಚುಮೆಚ್ಚಾಗುತ್ತಿದೆ ರಾಗಿ!

ಪೌಷ್ಠಿಕಾಂಶ ಭರಿತ ರಾಗಿ ಸೇರಿದಂತೆ ಅನೇಕ ಧಾನ್ಯಗಳಳ್ಳ ಆಹಾರ ಕ್ರಮವು ಸಶಸ್ತ್ರ ಪಡೆಗಳ ಪೈಕಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ.

ಸಶಸ್ತ್ರ ಪಡೆಗಳಿಗೆ ಪ್ಯಾಕೇಜ್‌ ಪಡಿತರಗಳನ್ನು ಮೈಸೂರಿನಲ್ಲಿರುವ ರಕ್ಷಣಾ ಆಹಾರ ಸಂಶೋಧನಾಲಯ ಸಿದ್ಧಪಡಿಸುತ್ತಿದೆ. ಇದೀಗ ಧಾನ್ಯ ಆಧರಿತ ಉತ್ಪನ್ನಗಳನ್ನು ಡಿಎಫ್‌ಆರ್‌ಎಲ್‌ ಉತ್ಪಾದಿಸುತ್ತಿದೆ. ಧಾನ್ಯಗಳ ಫ್ಲೇಕ್‌ಗಳು, ಚಾಕೋ ಚಿಪ್ಸ್‌ಗಳು, ಖೀರು ಮಿಕ್ಸ್‌, ಬಹುಧಾನ್ಯಗಳ ಚಪಾತಿ ಮಿಕ್ಸ್‌, ರೊಟ್ಟಿ ಮಿಕ್ಸ್‌, ದೋಸೆ ಮಿಕ್ಸ್‌, ಪಕೋಡ ಮಿಕ್ಸ್‌, ಹಲ್ವಾ ಮಿಕ್ಸ್‌, ಢೋಕ್ಲಾ, ಕುಕೀ ಮಿಕ್ಸ್‌ ಅಲ್ಲದೇ ಹಾಲಿನೊಂದಿಗೆ ಬೆರೆಸಿಕೊಳ್ಳಲು ವಿಶೇಷ ಮಿಕ್ಸ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.

“ಧಾನ್ಯಗಳ ಆಧರಿತ ಉತ್ಪನ್ನಗಳು ಸಾಕಷ್ಟು ಆರೋಗ್ಯಕರವಾದ ಕಾರಣ ಸಶಸ್ತ್ರ ಪಡೆಗಳು ಇವನ್ನು ಸಾಕಷ್ಟು ಇಷ್ಟ ಪಡುತ್ತಿವೆ. ಅಲ್ಲದೇ ಜೀವನಶೈಲಿ ಸಂಬಂಧಿ ರೋಗಗಳು ಹೆಚ್ಚುತ್ತಿರುವ ಕಾರಣ ಧಾನ್ಯಾಧರಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ” ಎಂದು ಡಿಎಫ್‌ಆರ್‌ಎಲ್‌ ಸಹ ನಿರ್ದೇಶಕ ಎ ಡಿ ಸೆಮ್ವಾಲ್‌ ತಿಳಿಸಿದ್ದಾರೆ.

ಗೋಧಿ ಹಾಗು ಅಕ್ಕಿಯನ್ನು ಬಳಸುವ ದೇಶದ ಇತರೆಡೆಗಳಲ್ಲೂ ರಾಗಿಯಂಥ ಧಾನ್ಯಗಳು ಸಾಕಷ್ಟು ಮುನ್ನಲೆಗೆ ಬರುತ್ತಿವೆ.

“ಕೆಲ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಗೋಧಿ ಹಾಗು ಅಕ್ಕಿ ಮೆಚ್ಚಿನ ಆಹಾರ ಉತ್ಪನ್ನಗಳಾಗಿವೆ. ಧಾನ್ಯಗಳನ್ನು ಇನ್ನಷ್ಟು ಚಾಲ್ತಿಗೆ ತರಲು ಯತ್ನಗಳನ್ನು ಮಾಡಲಾಗುತ್ತಿದೆ. ಎಲ್ಲರಿಗೂ ಮುದ್ದೆ ಇಷ್ಟವಾಗದಿರಬಹುದು. ಅದಕ್ಕಾಗಿ ನಾವು ಫ್ಲೇಕ್‌ಗಳು ಹಾಗು ಕುಕೀಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ” ಎಂದು ಸೆಮ್ವಾಲ್‌ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close