About Us Advertise with us Be a Reporter E-Paper

ರಾಜ್ಯ

ಮೈಸೂರ್ ಚಿತ್ರಕಲೆ ಪ್ರದರ್ಶನ ಮತ್ತು ಮಾರಾಟ 

ಮೈಸೂರು:   ಮೈಸೂರಿನ ಪ್ರಖ್ಯಾತ ಮೈಸೂರ್‌ ಚಿತ್ರಕಲೆ ಪ್ರದರ್ಶನ ಹಾಗೂ ಮಾರಾಟ ವೇದಿಕೆ ಉದ್ಘಾಟನೆಗೊಂಡಿದೆ.
ಇಲ್ಲಿ ಚಾಮುಂಡಿಬೆಟ್ಟದ ಮುಖ್ಯ ರಸ್ತೆಯಲ್ಲಿರುವ ಹಿಲ್ ಸೈಡ್ ಹೋಟೇಲ್ ನಲ್ಲಿ ಮೈಸೂರ್ ಪೈಂಟಿಂಗ್ ಹಾಗೂ ರವಿವರ್ಮ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನಾ ಸಮಾರಂಭ ನಡೆದಿದ್ದು, ಚಾಮರಾಜನಗರ ಎಂ.ಪಿ. ಆರ್. ದೃವನಾರಾಯಣ್ ಅವರು ಉದ್ಘಾಟಿಸಿದರು.
ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಆರಂಭವಾಗಿರುವ ಪ್ರದರ್ಶನದಲ್ಲಿಶ್ರೀಹರಿ,ರಾಮಕೃಷ್ಣ, ದೀನೇಶ್ ಮೂವರು ಕಲಾವಿದರ ಕೈಚಳಕದಲ್ಲಿ ಮೂಡಿ ಬಂದಿರುವ 35 ಬಗೆಯ ಚಿತ್ರಕಲೆಗಳನ್ನು ಪ್ರದರ್ಶನ ಹಾಗೂ ಮಾರಟಕ್ಕೆ ಇಡಲಾಗಿದೆ.  ೨೪ ಶುದ್ಧ ಚಿನ್ನವನ್ನು ಬಳಸಿ ತಯಾರಿಸಲಾದ ಚಿತ್ರಕಲೆಯೂ ಎಲ್ಲರ ಗಮನ ಸೆಳೆದಿದ್ದು, ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ರಾಮಾ ದರ್ಬಾರ್, ಪಾರ್ಥಸಾರಥಿ, ಮಹಾಭಾರತ, ರುಕ್ಷ್ಮೀಣಿ ಕಲ್ಯಾಣ, ಕೋಟೇಶ್ವರ, ವೀರಭದ್ರ, ಗಜಾಶೂರ, ದರ್ಬಾರ್ ಕೃಷ್ಣ, ರಾಜರಾಜೇಶ್ವರಿ, ಯಡಿಯೂರು ಸಿದ್ದಲಿಂಗೇಶ್ವರ, ಅಷ್ಟ ಲಕ್ಷ್ಮೀ, ಮೈಹಿಷಾಶುರ ಮರ್ದೀನಿ ಮುಂತಾದ ಚಿತ್ರಕಲೆಗಳನ್ನು ಇಂದಿನಿಂದ ಒಂದು ವರ್ಷಗಳವರೆಗೆ ಪ್ರದರ್ಶನ ಹಾಗೂ ಮಾರಟಕ್ಕೆ ಇಡಲಾಗಿದೆ.
Tags

Related Articles

Leave a Reply

Your email address will not be published. Required fields are marked *

Language
Close