ವಿಶ್ವವಾಣಿ

ಭೀಕರ ರಸ್ತೆ ಅಪಘಾತದಲ್ಲಿ ಉದಯೋನ್ಮುಖ ಕಲಾವಿದ ದುರ್ಮರಣ

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ನಿರ್ದೇಶಕ ಮತ್ತು ಯುವ ನಟ ಹೇಮಂತ್ ಕುಮಾರ್ ಮೃತಪಟ್ಟಿದ್ದಾರೆ.

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ವೀರನಂಜೀಪುರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹೇಮಂತ್ ಮೃತಪಟ್ಟಿದ್ದಾರೆ. ಎರಡು ಕೈಗಳಿಲ್ಲದ ಅಂಗವಿಕಲ ಹೇಮಂತ್ ಕುಮಾರ್(25) ಮೃತ ದುರ್ದೈವಿ. ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ವಿಭಜಗಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಮೃತ ಹೇಮಂತ್ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಅಲ್ಲದೆ ತನ್ನದೇ ಆದ ಕಿರುಚಿತ್ರಗಳಿಗೆ ನಿರ್ದೇಶನ ಮಾಡುತ್ತಿದ್ದರು. ಇವರಿಗೆ ಎರಡು ಕೈಗಳಿಲ್ಲದಿದ್ದೂ ಕಾಲುಗಳ ಸಹಾಯದಿಂದ ಬೈಕ್ ಚಲಾಯಿಸುತ್ತಿದ್ದರು. ‘ಹೈಕ’ ಎಂಬ ಕಿರುಚಿತ್ರಕ್ಕೆ ಧ್ವನಿ ನೀಡಿದ್ದ ಕೀರ್ತಿ ಸಹ ಇವರಿಗೆ ಸಲ್ಲುತ್ತದೆ. ಇನ್ನು ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.