About Us Advertise with us Be a Reporter E-Paper

ವಿ +

ಸ್ವಚ್ಛ ತಂತ್ರಕ್ಕೆ ಕಲಾವಿದರ ಸಾಥ್

ಇನ್ನೇನು ಎರಡೇ ದಿನಕ್ಕೆ ಸ್ವಾತಂತ್ರೊ್ಯೀ ತ್ಸವ ಬಂದು ಬಿಟ್ಟಿತು. ಸ್ವತಂತ್ರ ಸಿಕ್ಕು ಏಳು ದಶಕಗಳು ಕಳೆದಿದ್ದರೂ ಸ್ವಚ್ಛತೆ ಮಾತ್ರ ಕಾಣೆಯಾಗಿದೆ ಎಂಬ ಕೊರಗು ಎಲ್ಲರನ್ನೂ ಕಾಡುತ್ತಿದೆ. ಅದನ್ನು ಹೋಗಲಾಡಿಸಲು ಹಲವು ಖಾಸಗಿ ಸಂಸ್ಥೆಗಳು ಮುಂದೆಬಂದಿದ್ದು, ನಗರದ ಹಲವೆಡೆ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನ  ಬಿಗ್ ಎಫ್‌ಎಂ, ಈ ಬಾರಿಯ ಸ್ವಾತಂತ್ರ್ಯ ದಿನವನ್ನು ‘ಸ್ವಚ್ಛ ತಂತ್ರ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿದ್ದು, ನಗರದ ಒಂಬತ್ತು ಸ್ಥಳಗಳನ್ನು ಸ್ವಚ್ಛಗೊಳಿಸಲು ಮುಂದಾಗಿದೆ.

ಆರ್‌ಜೆ ಶ್ರುತಿ ನೇತೃತ್ವದಲ್ಲಿ ನಗರದಲ್ಲಿ 72 ಗಂಟೆಗಳ ಕಾಲ ನಡೆಯುವ ಸ್ವಚ್ಛತಾ ಕಾರ್ಯಕ್ಕೆ ಚಂದನವನದ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ನಟ ದಿಗಂತ್, ಸ್ಥಳೀಯ ಶಾಸಕರು, ಕಾರ್ಪೋರೇಟರ್‌ಗಳು ಸೇರಿದಂತೆ ಹಲವು ಖ್ಯಾತ ನಾಮರು ಕೈ ಜೋಡಿಸಿದ್ದಾರೆ. ಇವರೆಲ್ಲರೊಂದಿಗೆ ಜನತೆ ಬಹುಮುಖ್ಯ ಪಾತ್ರ ವನ್ನು ವಹಿಸಲಿದ್ದಾರೆ. ಶಿವಾಜಿನಗರ,  ದೇವಪುರ, ಬಿಟಿಎಂ ಲೇಔಟ್, ಚಾಮರಾಜ ಪೇಟೆ, ಸುಂಕದಕಟ್ಟೆ, ವಿ.ವಿ.ಪುರಂ, ಮಲ್ಲೇಶ್ವರಂ, ಹೆಬ್ಬಾಳ, ಯಶವಂತಪುರದಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ. ಶಾಸಕರಾದ ಸಿ.ಎನ್. ಅಶ್ವತ್ ನಾರಾಯಣ್, ಉದಯ್ ಗರುಡಾಚಾರ್, ರಾಮಲಿಂಗ ರೆಡ್ಡಿ, ಮುನಿರತ್ನ ಮೊದಲಾದವರು ಉಪಸ್ಥಿತರಿರಲಿದ್ದಾರೆ.

‘ಸ್ವಚ್ಛ ಭಾರತ’ ಇದು ಮಹಾತ್ಮ ಗಾಂಧಿಜಿ ಕಂಡ ಕನಸಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಜನತೆಯಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸಲು ಮುಂದಾದರು.

ಗಾಂಧಿ ಜಯಂತಿಯಂದು ರಾಜಘಾಟಿನ ರಸ್ತೆಯ ಕಸ ಗುಡಿಸಿ ಸ್ವಚ್ಛ ಭಾರತ  ಕರೆ ನೀಡಿದರು.

ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವಂತೆ ಮೋದಿಯವರು ನೀಡಿದ ಕರೆಗೆ ರಿಲಾಯನ್‌ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಸೇರಿದಂತೆ ನೂರಾರು ಪ್ರಭಾವಿ ವ್ಯಕ್ತಿಗಳೂ ಕೈಜೋಡಿಸಿ ಅಭಿಯಾನವನ್ನು ವ್ಯಾಪಕವಾಗಿ ಹರಡಿಸಿದರು.

ಇಂದು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಬೆಂಬಲ, ಸಾರ್ವಜನಿಕರ ಸಹಭಾಗಿತ್ವ ದೊಂದಿಗೆ ಸ್ವಚ್ಛತೆಯ ಪ್ರಚಾರ ಜೋರಾಗಿ ನಡೆಯುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close