About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮಹಿಳೆ ಮೇಲೆ ಖೇಣಿ ದರ್ಪ..!

ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಮಾಜಿ ಶಾಸಕ ಅಶೋಕ್ ಖೇಣಿ ದರ್ಪ ಮೆರೆದಿದ್ದಾರೆ.

ನಗರದ ಕ್ರೆಸೆಂಟ್ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದ ಟ್ರಾಫಿಕ್ ಜಾಂ ಉಂಟಾಗಿತ್ತು. ಈ ವೇಳೆ ಕಾರು ಚಲಾಯಿಸಿಕೊಂಡು ಬಂದ ಮಹಿಳೆಯೊಬ್ಬರು ಕಾರು ಹಿಂತೆಗೆಯಲು ಪರದಾಡುತ್ತಿದ್ದರು. ಪರಿಣಾಮ ಕೆಲಕಾಲ ಟ್ರಾಫಿಕ್ ಜಾಮ್ ಅಲ್ಲಿದ್ದ ಮಾಜಿ ಶಾಸಕ ಅಶೋಕ್ ಖೇಣಿ ಟ್ರಾಪಿಕ್ನಲ್ಲಿ ಸಿಲುಕಿಕೊಳ್ಳುವಂತಾಯಿತು.

ಇಷ್ಟಕ್ಕೇ ಕೋಪಗೊಂಡ ಖೇಣಿ ಕಾರಿನಿಂದ ಇಳಿದು ಮಹಿಳೆಯನ್ನ ನಿಂದಿಸಿದ್ದಾರೆ. ಕಾರು ಚಲಾಯಿಸಲು ಪರದಾಡುತ್ತಿದ್ದ ಮಹಿಳೆಗೆ ಸ್ಟುಪಿಡ್ ಅಂತಾ ನಿಂದಿಸಿದ್ದಾರೆ. ಅಲ್ಲದೇ ಅಶೋಕ್ ಖೇಣಿಯ ಗನ್ ಮ್ಯಾನ್‌ ಸಹ ಮಹಿಳೆಗೆ ಅವಾಜ್ ಹಾಕಿದ್ದಾರೆ. ಮಹಿಳೆಯ ಕಾರ್‌ ಗ್ಲಾಸ್‌ಗೆ ಕೈಯಿಂದ ಬಡಿದು ಗಲಾಟೆ ಕೂಡಾ ಮಾಡಿದ್ದಾರೆ. ನಂತರ ಅಶೋಕ್ ಖೇಣಿ ನಡೆದುಕೊಂಡೇ ಡಿಕೆಶಿ ಸರಕಾರಿ ನಿವಾಸಕ್ಕೆ ತೆರಳಿದ್ದಾರೆ. ಮಹಿಳೆ ಮೇಲೆ ಖೇಣಿ ನಡೆಸಿರೋ ವಿಡಿಯೋ ಸದ್ಯಕ್ಕೆ ಲಭ್ಯವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close