About Us Advertise with us Be a Reporter E-Paper

ಸಿನಿಮಾಸ್

ನಟ ಭಯಂಕರ ಸಿನಿಮಾದಲ್ಲಿ ಶಂಕರ್ ಅಶ್ವಥ್

ಎಮ್.ಎಲ್.ಏ ಚಿತ್ರದ ನಂತರ ಪ್ರಥಮ್ ನಟ ಭಯಂಕರ ಮಾಡ್ತಾ ಇರೋದು ಎಲ್ಲರಿಗೂ ಗೊತ್ತಿದೆ. ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ಬಹಳ ಶ್ರದ್ಧೆಯಿಂದ ಸಿನಿಮಾ ಮಾಡುತ್ತಿರುವಂತೆ ಕಾಣ್ತಾ ಇದೆ. ನಿಮಗೆ ನೆನಪಿರಬೇಕು. ಶಂಕರ್ ಅಶ್ವಥ್ ರವರು ಕೆಲವು ತಿಂಗಳ ಹಿಂದೆ ಸ್ವಾಭಿಮಾನಿ ಬದುಕಿನ ಮೊರೆ ಹೋಗಿ ಊಬರ್ ಓಡಿಸುತ್ತಿದ್ದು ಎಲ್ಲರಿಗೂ ಗೊತ್ತಿರುವಂತದ್ದೇ. ಆ ಸಮಯದಲ್ಲಿ ಪ್ರಥಮ್ ಅವರನ್ನ ಭೇಟಿಯಾಗಿ ಸಹಾಯಹಸ್ತ ಚಾಚಿದ್ರು. ಮುಂದೆ ತಮ್ಮ ಸಿನಿಮಾದಲ್ಲಿ ಒಳ್ಳೆಯ ಪಾತ್ರ ನೀಡುವ ವಚನ ನೀಡಿದ್ರು. ಹೇಳಿದ ಮಾತಿನಂತೆ ಈಗ ಪ್ರಥಮ್ ತನ್ನ ನಿರ್ದೇಶನದ ನಟಭಯಂಕರ ಚಿತ್ರದಲ್ಲಿ ಭರ್ಜರಿ ಪಾತ್ರವನ್ನೇ ನೀಡಿದ್ದಾರೆ.

ಅವತ್ತು ಮಾತಿಗೆ ಹೇಳಿದ್ದ ಪ್ರಥಮ್ ಎಂದೇ ಎಲ್ಲರೂ ಭಾವಿಸಿದ್ರು, ಇಂದು ತಾನು ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್‌ರಿಗೆ ತನ್ನ ನಿರ್ದೇಶನದಲ್ಲಿ ಹಲವು ವೈಶಿಷ್ಟ್ಯಗಳಿರುವ ಪಾತ್ರವನ್ನೇ ನೀಡಿದ್ದಾರೆ. ಇದರ ಬಗ್ಗೆ ವಿಚಾರಿಸಿದಾಗ ನಾನು ನಟಿಸಿದ ಸಿನಿಮಾಗಳಲ್ಲಿ ಕೇವಲ ನಟ ಅಷ್ಟೇ, ನಾನು ಅದನ್ನ ಮೀರೋಕಾಗಲ್ಲ, ಈಗ ನಾನು ನಿರ್ದೇಶನ ಮಾಡ್ತಾ ಇದೀನಿ. ಯಾವುದೋ ಸಣ್ಣ ಪಾತ್ರ, ತೂಕ ರಹಿತವಾದ ಪಾತ್ರ ಮಾಡ್ಸೋಕ್ಕಿಂತ ಕೊಟ್ಟರೆ ನೆನಪಿನಲ್ಲಿರುವ ವಿಭಿನ್ನ ಪಾತ್ರ ಇರಬೇಕು ಅಂತ ಮಾಡಿಸುತ್ತಿದ್ದೇನೆ.

ಅಶ್ವಥ್ ರವರು ಹೇಳಿದ್ರು,ನೀನು ನನ್ನ ಒಬ್ಬ ಮಗನಿದ್ದಂತೆ ಅಂತ. ಬಹಳ ಖುಷಿ ಮತ್ತೆ ಹೆಮ್ಮೆ ಆಯ್ತು. ಜನವರಿ 10 ರೊಳಗೆ ಅವರ ಪಾತ್ರದ ಶೂಟಿಂಗ್ ಮುಗಿಯಲಿದೆ ಎಂಬ ಮಾಹಿತಿಯನ್ನೂ ಕೊಟ್ರು. ಅಂತೂ ಕೊಟ್ಟ ಮಾತನ್ನ ನೆನಪಿನಲ್ಲಿ ಇಟ್ಕೊಂಡು ಪ್ರಥಮ್ ಶಂರ್ಕ ಅಶ್ವಥ್ ರಿಂದ ಪಾತ್ರ ಮಾಡಿಸಿದ್ದು ನಿಜಕ್ಕೂ ಮೆಚ್ಚುವಂತದ್ದು

Tags

Related Articles

Leave a Reply

Your email address will not be published. Required fields are marked *

Language
Close