About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಏಷ್ಯನ್ ಗೇಮ್ಸ್: ಬಾಕ್ಸಿಂಗ್‍ನಲ್ಲಿ ಭಾರತಕ್ಕೆ ಚಿನ್ನ

ಒಲಿಂಪಿಕ್ ಚಾಂಪಿಯನ್ ಹಸನ್ಬಾಯ್ ಡಸ್ಮಾಟೊವ್ ಅವರನ್ನು ಮಣಿಸಿ ಚಿನ್ನ ಗೆದ್ದ ಭಾರತದ ಅಮಿತ್

ಜಕಾರ್ತಾ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 2018ರ ಏಷ್ಯನ್ ಗೇಮ್ಸ್ ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತ ಚಿನ್ನಕ್ಕೆ ಗುರಿಯಿಟ್ಟಿದೆ.

ಭಾರತದ ಅಮಿತ್ ಪಂಗಲ್ ಅವರು ಪುರುಷರ ವಿಭಾಗದ 49 ಕೆ.ಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಒಲಿಂಪಿಕ್ ನಲ್ಲಿ ಚಿನ್ನದ ಪದಕ ವಿಜೇತನಾಗಿರುವ ಉಜ್ಬೇಕಿಸ್ತಾನ್ ನ ಹಸನ್ಬಾಯ್ ಡಸ್ಮಾಟೊವ್ ಅವರನ್ನು ಫೈನಲ್ ಪಂದ್ಯದಲ್ಲಿ ಮಣಿಸುವ ಮೂಲಕ ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಏಷ್ಯನ್ ಗೇಮ್ಸ್ 2018ರಲ್ಲಿ ಭಾರತಕ್ಕೆ 15 ಚಿನ್ನ, 23 ಬೆಳ್ಳಿ ಹಾಗೂ 29 ಕಂಚಿನ ಪದಕ ಸೇರಿ ಒಟ್ಟು 67 ಪದಕಗಳು ದೊರೆತಿವೆ.

Tags

Related Articles

Leave a Reply

Your email address will not be published. Required fields are marked *

Language
Close