About Us Advertise with us Be a Reporter E-Paper

Breaking Newsವಿದೇಶ

ಬಾಂಗ್ಲಾದೇಶದಲ್ಲಿ ಪತ್ರಕರ್ತೆಯ ಭೀಕರ ಹತ್ಯೆ

ಢಾಕಾ: ಪತ್ರಕರ್ತೆ ಸುಬರ್ನಾ ಅಕ್ತರ್ ನೋಡಿ ಎಂಬುವವರನ್ನು ಶಸ್ತ್ರಾಸ್ತ್ರಗಳಿಂದ ಇರಿದು ಹತ್ಯೆ ಮಾಡಿರುವ ಘಟನೆ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ನಡೆದಿದೆ.

32 ವರ್ಷದ ಸುಬರ್ನಾ ನೋಡಿ ಅವರು ಸ್ಥಳೀಯ ಟಿವಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪಬ್ನಾ ಜಿಲ್ಲೆಯ ರಾಧಾನಗರ ಎಂಬಲ್ಲಿ ತಮ್ಮ ಒಂಭತ್ತು ವರ್ಷದ ಪುತ್ರಿಯ ಜತೆ ವಾಸಿಸುತ್ತಿದ್ದರು.  ಇವರು ಪತಿಯಿಂದ ವಿಚ್ಛೇದನ ಪಡೆಯಲು ಕಾಯುತ್ತಿದ್ದರು ಎನ್ನಲಾಗಿದೆ.

ರಾತ್ರಿ ಸುಮಾರು 10ರ ವೇಳೆ ದ್ವಿಚಕ್ರವಾಹನದಲ್ಲಿ ಬಂದ ದುಷ್ಕರ್ಮಿಗಳು ಮನೆಯ ಕದ ತಟ್ಟಿದ್ದಾರೆ. ಬಾಗಿಲು ತೆರೆದ ಕೂಡಲೇ ಹರಿತವಾದ ಆಯುಧಗಳಿಂದ ಚುಚ್ಚಿ ಕೊಂದು ಪರಾರಿಯಾಗಿದ್ದಾರೆ. ಕಿರುಚಾಟ ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲಿಯೇ ಸುಬರ್ನಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಸುಬರ್ನಾ ನೋಡಿ ಸಾಯುವುದಕ್ಕಿಂತ ಮುಂಚೆ ತನ್ನ ಮಾಜಿ ಪತಿ ಹಾಗೂ ಮಾವ ದಾಳಿ ಮಾಡಿರೋದಾಗಿ ಹೇಳಿದ್ದಳು ಎಂದು ಸುಬರ್ನಾ ತಾಯಿ ಆರೋಪಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close