About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಎನ್‌ಆರ್‌ಸಿಯಲ್ಲಿ ಇಲ್ಲದವರಿಗೆ ಮತದಾನ ಅಸಾಧ್ಯ?

ದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ಹೆಸರುಗಳು ಇಲ್ಲದ ಮಂದಿ ವಿರುದ್ಧ ತೆಗೆದುಕೊಳ್ಳಲು ಉದ್ದೇಶಿಸಿರುವ ಅನೇಕ ಕ್ರಮಗಳ ಪೈಕಿ ಮೊದಲಿಗೆ ಮತದಾನದ ಹಕ್ಕುಗಳ ಸಿಗದಂತೆ ಮಾಡುವ ಸಾಧ್ಯತೆಗಳಿವೆ.

ಈ ಕುರಿತಂತೆ ಅಸ್ಸಾಂನ ಪೌರತ್ವ ನೊಂದಣಿಯ ಅಂತಿಮ ಪ್ರಕ್ರಿಯೆ ಮುಗಿಯುತ್ತಲೇ ಸುಪ್ರೀಂ ಕೋರ್ಟ್ ಅಂತಿಮ ನಿರ್ಧಾರಕ್ಕೆೆ ಬರಲಿದೆ. ಅಸ್ಸಾಂನಲ್ಲಿ ಮಾಡಲಾಗಿರುವ ಪೌರತ್ವ ನೋಂದಣಿಯ ಕರಡು ಪಟ್ಟಿಯ ಎರಡನೇ ಅವತರಣಿಕೆಯಲ್ಲಿ ಹೆಸರುಗಳು ಕಂಡು ಬರದವರಿಗೆ, ಆಕ್ಷೇಪ ಸಲ್ಲಿಸಲು ನೀಡಲಾಗಿದ್ದ ಗಡುವು ಮುಗಿಯುತ್ತಲೇ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.

ನೋಂದಣಿಯಿಂದ ಹೊರಗಿದ್ದ 40 ಲಕ್ಷ ಮಂದಿ ಪೈಕಿ 10 ಲಕ್ಷ ಮಂದಿ ಅದಾಗಲೇ ತಮ್ಮ ಹೆಸರುಗಳನ್ನು ಸೇರಿಸಿಕೊಳ್ಳಲು ಮರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ತಮ್ಮ ಪೌರತ್ವ ಸಾಬೀತುಪಡಿಲು ಎಲ್ಲರಿಗೂ ಸಾಕಷ್ಟು ಅವಕಾಶಗಳನ್ನು ನೀಡಲಾಗಿದ್ದು, ಸೂಕ್ತ ದಾಖಲೆಗಳಿಲ್ಲದ ಮಂದಿಯನ್ನು ಮತದಾರರ ಪಟ್ಟಿಯಿಂದ ಕಿತ್ತೊಗೆಯುವ ಸಾಧ್ಯತೆಯನ್ನು ಸರಕಾರೀ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

40 ಲಕ್ಷ ಮಂದಿ ಅಕ್ರಮ ವಲಸಿಗರು ಅಸ್ಸಾಂನಲ್ಲಿ ವಾಸಿಸುತ್ತಿರುವ ಕಟು ವಾಸ್ತವವನ್ನು ಬಯಲಿಗೆಳೆದ ಈ ಪ್ರಕ್ರಿಯೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದು, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜುಲೈ 30ರಂದು ಪ್ರಕಟವಾಗಿದ್ದ ಈ ನೋಂದಣಿಯಲ್ಲಿ, ಅರ್ಜಿ ಸಲ್ಲಿಸಿದ್ದ 3.29 ಕೋಟಿ ಮಂದಿ ಪೈಕಿ 2.9 ಕೋಟಿ ಮಂದಿಯನ್ನಷ್ಟೇ ಪರಿಗಣನಗೆ ತೆಗೆದುಕೊಳ್ಳಲಾಗಿತ್ತು. ನೋಂದಣಿಯಲ್ಲಿ ಹೆಸರಿಲ್ಲದವರು ಈ ಕುರಿತಂತೆ ಆಕ್ಷೇಪ ಸಲ್ಲಿಸಲು ಸೆಪ್ಟೆಂಬರ್‌ 25ರಿಂದ ಡಿಸೆಂಬರ್‌ 15ರವರೆಗೆ ಅವಕಾಶ ನೀಡಲಾಗಿದೆ.

ಕಂದಾಯ,  ವಸತಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಎಲ್‌ಐಸಿ ಸೇರಿದಂತೆ ಅಧಿಕೃತವಾದ ಹತ್ತು ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಸಲ್ಲಿಸುವ ಮೂಲಕ ಪೌರತ್ವ ನೋಂದಣಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಬಳಿಕ ಹೆಚ್ಚುವರಿಯಾಗಿ ಇನ್ನೂ ಐದು ದಾಖಲೆಗಳನ್ನು ಬಳಸಿಕೊಡು ನೋಂದಣಿಯಲ್ಲಿ ತಮ್ಮ ಹೆಸರುಗಳನ್ನು ತರಲು ಕೋರ್ಟ್ ಅನುಮತಿ ನೀಡಿತ್ತು.

ಅಲ್ಲದೇ ನೋಂದಣಿಯಲ್ಲಿ ತಮ್ಮ ಹೆಸರುಗಳು ಬರದೇ ಇರುವ ಸಂಬಂಧ ಮೇಲ್ಮನವಿ ಸಲ್ಲಿಸಲು ಅಸ್ಸಾಂ ರಾಜ್ಯಾದ್ಯಂತ 2500ಕ್ಕೂ ಹೆಚ್ಚು ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ.

20ನೇ ಶತಮಾನದ ಆರಂಭದಿಂದಲೂ ಇಂದಿನ ಬಾಂಗ್ಲಾದೇಶ ಪ್ರದೇಶದಿಂದ ದೊಡ್ಡ ಮಟ್ಟದಲ್ಲಿ ಅಕ್ರಮ ವಲಸಿಗರನ್ನು ಕಾಣುತ್ತಿರುವ ಅಸ್ಸಾಂ ರಾಜ್ಯದ ಮೂಲ ಸಂಸ್ಕೃತಿಯನ್ನೇ ಬುಡಮೇಲು ಮಾಡುವ ಮಟ್ಟಕ್ಕೆ ಈ ಅಕ್ರಮ ವಲಸಿಗರು ಹೆಚ್ಚುತ್ತಿರುವ ಕಾರಣ, ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ಪೌರತ್ವ ನೋಂದಣಿ ಕೆಲಸ ಮಾಡಲಾಗುತ್ತಿದೆ.

 

Tags

Related Articles

Leave a Reply

Your email address will not be published. Required fields are marked *

Language
Close