ದಿನ ಭವಿಷ್ಯ-13-june-2018

ಸೂರ್ಯೋದಯ : 5.52

ಸೂರ್ಯಾಸ್ತ : 6.41

ರಾಹು ಕಾಲ : 12.00-1.30
ಗುಳಿಕ ಕಾಲ : 10.30-12.00
ಯಮಗಂಡ ಕಾಲ : 7.30-9.00

ಉತ್ತರಾಯಣ, ಗ್ರೀಷ್ಮಋತು, ಅಧಿಕ ಜೇಷ್ಠಮಾಸ, ಕೃಷ್ಣಪಕ್ಷ, ಅಮಾವಾಸ್ಯೆ, ಬುಧವಾರ, ನಿತ್ಯ ನಕ್ಷತ್ರ-ರೋಹಿಣಿ, ಯೋಗ-ಧೃತಿ, ಕರಣ-ಚತುಷ್ಪಾತ್.

ದೂರದ ಪ್ರಯಾಣದ ಬಗ್ಗೆ ಆಸಕ್ತಿ ಮೂಡಲಿದೆ. ಕುಟುಂಬದ ವರ್ಗದವರ ಜತೆಗೂಡಿ ಸಂತೋಷ ಕೂಟದಲ್ಲಿ ಭಾಗವಹಿಸುವ ಯೋಗ ಈ ದಿನ ದೊರಕಲಿದೆ.
ಕಷ್ಟವನ್ನು ಮೆಟ್ಟಿ ನಿಲ್ಲುವ ಅಷ್ಟೇ ಧೈರ್ಯವನ್ನು ಹೊಂದುವ ಪ್ರವೃತ್ತಿ ಇಂದು ನಿಮಗೆ ಬರಲಿದೆ. ಕಾರ್ಯದಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಕೌಟುಂಬಿಕ ಕ್ಷೇತ್ರದಲ್ಲಿ ಪ್ರಗತಿಯೂ ದೊರಕಲಿದೆ.
ಬಂಧು-ಬಾಂಧವರಲ್ಲಿ ಕುಶಲೋಪರಿ ಸಮಾಚಾರವೊಂದೆ ಸಾಕು. ವ್ಯವಹಾರಿಕ ಸಂಬಂಧ ಬೇಡ. ನಷ್ಟ-ಮನಸ್ತಾಪಕ್ಕೂ ಕಾರಣವಾಗಿ ಬಿಡುವ ಸಂಭವ ಹೆಚ್ಚಿದೆ ಎಚ್ಚರ.
ನೆರೆಯವರಲ್ಲಿ ಸಂಬಂಧ ವೃದ್ಧಿ ಯಾಗಿ ವಿನೋದ ಪ್ರಸಂಗದಲ್ಲಿ ಭಾಗವಹಿಸಿಸುವ ಸಂದರ್ಭ ದೊರ ಕಲಿದೆ. ಸಂಘಟನೆಯ ಬಲವು ವೃದ್ಧಿಯಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಲಿದ್ದೀರಿ.
ಹಿರಿಯರ ಜತೆ ವಿನಮ್ರವಾಗಿ ಇರಲೇ ಬೇಕು. ನಿಮ್ಮ ನಡವಳಿಕೆಯು ಸ್ವಲ್ಪ ಉದ್ಘಟತನವನ್ನು ಹೊಂದಬಹುದು. ಎಚ್ಚರದಿಂದ ಇದನ್ನು ಪರಿವರ್ತಿಸಿಕೊಳ್ಳಿ.
ನಿಮ್ಮ ಅತೀ ಆಸ್ತಿಕ ಮನೋಭಾವವು ಬೇರೆಯವರಿಗೆ ಮೂಢನಂಬಿಕೆಯಂತೆ ಅನಿಸಬಹುದು. ಇದಕ್ಕೆ ನೀವು ತಲೆ ಕೆಡಿಸಿಕೊಳ್ಳುವುದು ಬೇಡ. ಸಹಜವಾದ ಇರಲಿ. ಶುಭವಾಗಲಿದೆ.
ಸಾಕು ಪ್ರಾಣಿಗಳ ಬಗ್ಗೆ ಎಲ್ಲಿಲ್ಲದ ಮಮಕಾರ ಹುಟ್ಟಿಕೊಳ್ಳಲಿದೆ. ಜತೆಗೆ ಈ ಮೂಲಕ ಸಂತೋಷವನ್ನು ಹೊಂದಲಿದ್ದೀರಿ. ಸಂಬಂಧಿಕರಲ್ಲಿ ಹಣಕಾಸಿನ ವ್ಯವಹಾರ ಬೇಡ, ನಷ್ಟಕ್ಕೆ ಕಾರಣವಾಗಲಿದೆ.
ನಿಮ್ಮ ಅಭಿಮಾನಿ ವರ್ಗದವರು ಇಂದು ಹೆಚ್ಚಾಗಲಿದ್ದಾರೆ. ನಿಮ್ಮ ಮಾತು ಹೆಚ್ಚು ಪ್ರಬಾವದ ಶಕ್ತಿಯನ್ನು ಇಂದು ಹೊಂದಲಿದೆ. ಶುಭ ಕಾರ್ಯಕ್ಕೆ ನಿಮ್ಮ ಶಕ್ತಿ ಇಂದು ವಿನಿಯೋಗವಾಗಲಿದೆ.
ಪರೋಪಕಾರದ ಮನಸ್ಸು ಇಂದು ಜಾಗ್ರತವಾಗಿ ಬಿಡುವ, ಈ ಮೂಲಕ ಒಂದಿಷ್ಟು ಜನೋಪಯೋಗಿ ಕಾರ್ಯ ಗಳು ನಿಮ್ಮಿಂದ ಆಗಲಿದೆ. ಮಕ್ಕಳ ವಿದ್ಯಾಭ್ಯಾಸ ಪ್ರಗತಿಯನ್ನು ಕಾಣಲಿದೆ.
ಮಂಗಳ ಕಾರ್ಯಕ್ಕೆ ಇಂದು ನಿಮ್ಮ ಉತ್ಸಾಹ ಇಮ್ಮಡಿಯಾಗಲಿದೆ. ಕುಟುಂಬದಲ್ಲಿ ನೆನಗುದಿಗೆ ಬಿದ್ದ ಕಾರ್ಯವನ್ನು ಕೈಗೆತ್ತಿಕೊಳ್ಳಿ. ಸುಗಮವಾಗಿ ಕಾರ್ಯ ನೆರವೇರಲಿದೆ.
ಮಿತ್ರರ ಸಹಾಯದಿಂದ ಮಹತ್ತರ ಕಾರ್ಯಕ್ಕೆ ಕೈ ಹಾಕಿಕೊಳ್ಳುವ ಸಂದರ್ಭ ಬರಲಿದೆ. ಇದು ಶುಭ ಪರಿಣಾಮವನ್ನು ಉಂಟು ಮಾಡಲಿದೆ. ಮಿತ್ರರ ಜತೆಗೂಡಿ ಪ್ರವಾಸ ಯೋಗದ ಭಾಗ್ಯವಿದೆ.
ಹಳೆಯ ನೆನಪಿನಲ್ಲಿ ದಿನ ಕಳೆಯು ವುದು ಬೇಡ. ಆಲಸ್ಯವನ್ನು ಬಿಟ್ಟು ಕಾರ್ಯದ ಬಗ್ಗೆ ಪ್ರವೃತ್ತರಾಗಿ ಯಶಸ್ಸು ದೊರಕಲಿದೆ. ಕೌಟುಂಬಿಕ ಕ್ಷೇತ್ರದಲ್ಲಿ ಸುಖ-ಶಾಂತಿಯೂ ದೊರಕಲಿದೆ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top