ದಿನ ಭವಿಷ್ಯ-13 March 2018

ಸೂರ್ಯೋದಯ : 6.27

ಸೂರ್ಯಾಸ್ತ : 6.30

ರಾಹು ಕಾಲ : 3.00-4.30
ಗುಳಿಕ ಕಾಲ : 12.00-1.30
ಯಮಗಂಡ ಕಾಲ : 9.00-10.30

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಕೃಷ್ಣಪಕ್ಷ, ಏಕಾದಶಿ,ಮಂಗಳವಾರ, ನಿತ್ಯ ನಕ್ಷತ್ರ  ಉತ್ತರಾಷಾಢ, ಯೋಗ-ಪರಿಘ, ಕರಣ-ಬಾಲವ.

ಕಾರ್ಯದಲ್ಲಿ ವಿಳಂಬ ಮಾಡುವುದು ಬೇಡ. ಶುಭಫಲವು ಕಾದುಕೊಂಡಿದೆ. ಶ್ರಮಕ್ಕೆ ತಕ್ಕದಾದ ಪ್ರತಿಫಲದ ಜತೆಗೆ ಈ ದಿನ ದೊರಕಲಿದೆ. ಕೆಲಸದಲ್ಲಿ ಚುರುಕುತನವಿರಲಿ.
ಕುಟುಂಬದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಎಲ್ಲರ ಸಲಹೆ ತೆಗೆದು ಕೊಳ್ಳುವುದು ಒಳ್ಳೆಯದು. ಏಕಪಕ್ಷೀಯ ನಿರ್ಧಾರವು ವಿಫಲವಾಗುವ ಸಾಧ್ಯತೆ ಇಂದು ಹೆಚ್ಚಿದೆ. ನಿರ್ಧಾರಕ್ಕೆ ವಿವೇಕ ಹೆಚ್ಚಿರಲಿ
ಆರೋಗ್ಯ ವಿಚಾರದಲ್ಲಿ ಹೆಚ್ಚು ಲಕ್ಷವಿರಲಿ. ಆಹಾರದ ವಿಚಾರದಲ್ಲಿ ಅಪಥ್ಯ ಸೇವನೆ ಹೆಚ್ಚಾಗುವ ಸಾಧ್ಯತೆ ಇದೆ. ವ್ಯವಹಾರಿಕ ಲಾಭವು ಇಂದು ಉಂಟಾಗಲಿದೆ. ಸಂತೋಷದ ಘಟನೆಗಳು ಕುಟುಂಬದಲ್ಲಿ ಘಟಿಸಲಿದೆ
ನಿಮ್ಮ ವೇಧಾವಿತನಕ್ಕೆ ಇಂದು ಮಾನ್ಯತೆಯು ದೊರಕಿ ಆತ್ಮ ಸಂತೋಷ ಸಂಗಾತಿಯ ಜತೆಯಲ್ಲಿ ಸುಮಧುರ ಕ್ಷಣದಲ್ಲಿ ದಿನವನ್ನು ಕಳೆಯುವ ಭಾಗ್ಯ ಇಂದು ದೊರಕಲಿದೆ.
ನಿಮ್ಮ ಘರ್ಜನೆಗೆ ಇಂದು ಎಲ್ಲಿಯೂ ಬೆಲೆ ದೊರೆಯದು. ಅನಾವಶ್ಯಕವಾಗಿ ಸಿಟ್ಟುಗೊಂಡು ಕಾರ್ಯವನ್ನು ವಿಫಲಗೊಳಿಸಿಕೊಳ್ಳುವುದು ಬೇಡ. ಶಾಂತಿ ಚಿತ್ತಕ್ಕಾಗಿ ನಿಮ್ಮ ಪ್ರಯತ್ನ ಈ ದಿನ ಇರಲಿ
ವಿನೂತನ ದೃಷ್ಟಿಕೋನದ ಕಾರ್ಯಕ್ಕೆ ಇಂದು ಪ್ರಶಂಸೆ ದೊರಕಲಿದೆ. ಹೆಚ್ಚು ಮಿತ್ರರನ್ನು ದೊರಕಿಸಿಕೊಳ್ಳುವ ಯೋಗವು ಇಂದು ನಿಮಗಿದೆ. ದೇವರ ಬಲವಿದೆ ಎಂಬುದನ್ನು ಮರೆಯದೇ, ಆರಾಧನೆಯನ್ನು ಬಿಡಬೇಡಿ.
ಬೇರೆಯವರ ವಿಚಾರಗಳಿಗೆ ನಿಮ್ಮ ಆಸಕ್ತಿಯು ಇದು ಶುಭ ಪರಿಣಾಮವನ್ನು ನೀಡಲಾರದು. ಬೇರೆಯವರಿಂದ ನಿಷ್ಠುರ ಮಾತುಗಳನ್ನು ಎದುರಿಸಬೇಕಾದಿತು, ಎಚ್ಚರದಿಂದ ಇರಿ.
ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಧನ್ಯತೆಯನ್ನು ಹೊಂದುವ ಜತೆಗೆ ಬಹುದಿನದ ಆತಂಕವನ್ನು ನಿವಾರಿಸಿಕೊಳ್ಳುವ ಯೋಗ ಇಂದು ನಿಮಗಿದೆ. ಬಾಹ್ಯ ವಿಚಾರಕ್ಕಿಂತ ಆಂತರ‌್ಯದ ಬಗ್ಗೆ ಲಕ್ಷ ಹೆಚ್ಚು ನೀಡಿ.
ಹಣಕಾಸಿನ ಕ್ಷೇತ್ರದಲ್ಲಿ ಗೊಂದಲ ಉಂಟಾಗಬಹುದು. ಇದನ್ನು ಕೌಶಲದಿಂದ ನಿವಾರಿಸಿಕೊಳ್ಳುವ ಬಗ್ಗೆ ತಜ್ಞರ ಸಲಹೆ ಯನ್ನು ಪಡೆಯಿರಿ. ಈ ವಿಚಾರವಾಗಿ ಕುಟುಂಬದ ಹಿರಿಯರ ಸಹಕಾರವು ದೊರಕಲಿದೆ.
ಮೌನಿಗಳಾದರೆ ಯಾವ ನಿಮ್ಮಂತೆ ಆಗಲಾರವು. ಹೇಳಬೇಕಾದ ಮಾತುಗಳನ್ನು ಹೇಳಿ ಕಾರ್ಯವನ್ನು ಸುಗಮಗೊಳಿಸಿಕೊಳ್ಳಿ. ಆಗ ಬರಬೇಕಾದ ಹಣವು ಬಂದು ಸೇರಲಿದೆ. ಶುಭ ದಿನವಾಗಲಿದೆ.
ದೂರದವರ ಮಾತಿಗೆ ನೀವು ಬೆಲೆ ಕೊಡದೆ ನಿಮ್ಮ ಕಾರ್ಯದಲ್ಲಿ ನೀವು ಮಗ್ನರಾಗಿ. ಯಶಸ್ಸು ಸುಲಭವಾಗಿ ದೊರಕಲಿದೆ. ಸಮಾನತೆಯ ಬುದ್ಧಿಯು ನಿಮಗೆ ವಿಶೇಷ ಗೌರವವನ್ನು ತಂದು ಕೊಡಲಿದೆ.

ಸಾಮಾಜಿಕ ರಂಗದಲ್ಲಿ ಹಿರಿಯರಿಂದ ಕಿರಿಕಿರಿ ಆಗಬಹುದು. ಸಮಾಧಾನದಿಂದ ಎದುರಿಸಿ. ಅವರನ್ನೂ ಪರಿವರ್ತನೆ ಮಾಡುವ ಯೋಗ ಇಂದು ನಿಮಗಿದೆ. ಸಂಘಟನೆಯ ಬಲವು ಇಂದು ಹೆಚ್ಚಲಿದೆ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top