ದಿನ ಭವಿಷ್ಯ-16-April-2018

ಸೂರ್ಯೋದಯ : 6.13

ಸೂರ್ಯಾಸ್ತ : 6.31

ರಾಹು ಕಾಲ : 7.30-9.00
ಗುಳಿಕ ಕಾಲ : 1.30-3.00
ಯಮಗಂಡ ಕಾಲ : 1.30-3.00

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಕೃಷ್ಣಪಕ್ಷ, ಅಮಾವಾಸ್ಯೆ, ಸೋಮವಾರ, ನಿತ್ಯನಕ್ಷತ್ರ -ಅಶ್ವಿನಿ, ಯೋಗ-ವಿಷ್ಕಂಭ, ಕರಣ-ನಾಗವಾನ್.

ಆಕ್ರಮಣಕಾರಿ ಮಾತುಗಳಿಂದ ಹತ್ತಿರದವರು ದೂರವಾಗುವ ಸಾಧ್ಯತೆ ಹೆಚ್ಚು. ವಿಶೇಷ ಹಣಕಾಸಿನ ವ್ಯವಹಾರ ಇಂದು ಬೇಡ. ಲಾಭಕ್ಕಿಂದು ಸ್ವಲ್ಪ ಅಡೆತಡೆಗಳು ಬರುವ ಸಂಭವವಿದೆ ಜಾಗ್ರತೆ.
ಹತ್ತಿರದವರಿಗೆ ನೀವು ಕೊಟ್ಟ ಸಲಹೆ ಇಂದು ಪ್ರಯೋಜನವಾಗಿ, ನಿಮ್ಮ ಅವರ ಸಂಬಂಧ ಇನ್ನೂ ಗಾಢವಾಗಲಿದೆ. ಕುಟುಂಬದ ವ್ಯವಹಾರಕ್ಕಿಂತ ಸಾಮಾಜಿಕ ವ್ಯವಹಾರದಲ್ಲಿ ಲಾಭ, ಶ್ರೇಯಸ್ಸು ದೊರಕಲಿದೆ.
ಕಚೇರಿ ಕೆಲಸದಲ್ಲಿ ವಿಘ್ನಗಳು ಬರುವ ಸಾಧ್ಯತೆ. ಇದನ್ನು ಜಾಣತನದಿಂದ ನಿವಾರಿಸಿಕೊಳ್ಳುವ ಯೋಗವು ಇಂದಿಗಿದೆ. ನಿಧಾನವಾಗಿ ಹೆಜ್ಜೆ ಇಡಿ. ವಿರೋಧಿಗಳ ಕಣ್ಣು ನಿಮ್ಮ ಮೇಲೆ ಬಲವಾಗಿ ಇರಲಿದೆ.
ಕಾವ್ಯದ ಶೈಲಿಯ ಮಾತುಗಳಿಂದ ನಿಮ್ಮ ಅಭಿಮಾನಿಗಳಿಂದ ಪ್ರಶಂಸೆಯನ್ನು ಈ ದಿನ ಹೊಂದಲಿದ್ದೀರಿ. ಅನುಕರಣೆಯ ವ್ಯಕ್ತಿತ್ವವು ಇಂದು ಮೂಡಿ ಬರಲಿದೆ. ವಸ್ತ್ರ-ವಿನ್ಯಾಸದ ಬಗ್ಗೆಯೂ ಹೆಚ್ಚಿನ ಆಸಕ್ತಿ ಮೂಡಿ ಬರಲಿದೆ.
ದೂರ ಪ್ರಯಾಣದ ವಿಚಾರ. ಜತೆಗೆ ಅದು ಸಿದ್ಧಿಯಾಗುವ ಗುಣಲಕ್ಷಣಗಳು ಹೆಚ್ಚಾಗಲಿದೆ. ಆಗಮನ ದಿಂದಾಗಿ ಹೊಸ ಯೋಜನೆಗಳು ಹುಟ್ಟಿ ಕೊಳ್ಳುವ ಸಂಭವವಿದೆ. ಪಿತ್ತ ವ್ಯಾಧಿ ಬರಲಿದೆ, ಎಚ್ಚರ.
ಅಯೋಗ್ಯರ ಜತೆಯಲ್ಲಿ ಸ್ನೇಹ- ಸಂಬಂಧಗಳನ್ನು ಇಂದು ಬಿಡಲೇಬೇಕು. ಮನಸ್ಸಿನ ವಿಚಾರಗಳು ನೀಚ ಗುಣ ಸ್ವಭಾವವನ್ನು ಹೊಂದಲಿದೆ, ಎಚ್ಚರವಹಿಸಿ. ಸಂಗಾತಿಯ ಸಲಹೆ, ಸೂಚನೆಯಂತೆ ವರ್ತಿಸಿ.
ವ್ಯವಹಾರದಲ್ಲಿ ಲಾಭಕ್ಕಿಂತ ನಷ್ಟ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಎಚ್ಚರದಿಂದ ಹಣಕಾಸಿನ ವ್ಯವಹಾರವನ್ನು ಮಾಡಿ. ಬಂಧು-ಮಿತ್ರರಿಂದ ಹಣವನ್ನು ತೆಗೆದುಕೊಂಡು ಕೆಟ್ಟವರಾಗುವುದು ಬೇಡ.
ಹೃದಯ ವೈಶಾಲತೆಯನ್ನು ಇಟ್ಟು ಕೊಂಡು ಈ ಕಳೆಯುವ ಯೋಗವಿದೆ. ಪರೋಪಕಾರವನ್ನು ಮಾಡಿ ಮಾನ್ಯತೆಯನ್ನು ಪಡೆಯಲಿದ್ದೀರಿ. ಸಾಮಾಜಿಕ ಸ್ಥಾನಮಾನಗಳು ಭದ್ರವಾಗಲಿದೆ.
ಭಾಗ್ಯದ ಬಾಗಿಲಲ್ಲಿ ಇಂದು ನೀವು ಇದ್ದರೂ, ಉದ್ವೇಗ ನಿಮ್ಮನ್ನು ಬಿಟ್ಟು ಹೋಗಲಾರದು. ಜಾಗರೂಕರಾಗಿ ಈ ಗೊಂದಲವನ್ನು ನಿವಾರಿಸಿಕೊಳ್ಳಿ. ಸ್ನೇಹಿತರ ಸಲಹೆ ಸ್ವೀಕರಿಸಿ ಮುನ್ನಡೆಯಿರಿ. ಶುಭವಾಗಲಿದೆ.
ಸಂಬಂಧಿಗಳಲ್ಲಿ ವ್ಯವಹಾರವು ಕ್ಷೇಮವನ್ನು ತರಲಿದೆ. ಸಂಘಟನೆಯ ಬಲವು ಈ ದಿನ ಹೆಚ್ಚಾಗಿ ಎಲ್ಲರ ಪ್ರಶಂಸೆಗೂ ಪಾತ್ರರಾಗುತ್ತೀರಿ. ಆರೋಗ್ಯದ ವಿಚಾರದಲ್ಲಿ ವಾಯು ಪ್ರಕೋಪ ಕಾಣಿಸಲಿದೆ.
ಗುರು ದರ್ಶನದ ಭಾಗ್ಯದಿಂದ ಅಂತರ‌್ಯದ ಬಲ ಅತೀಂದ್ರಿಯ ಶಕ್ತಿಯಲ್ಲೂ ನಂಬಿಕೆ ಹೆಚ್ಚಾಗಲಿದೆ. ಕುಟುಂಬದಲ್ಲಿ ಕಿರಿಯರಿಗೆ ಆರೋಗ್ಯದ ಏರುಪೇರು ಕಾಣಿಸಬಹುದು. ಇದಕ್ಕೆ ಗಾಬರಿ ಬೇಡ.
ಮೌನಕ್ಕೂ ಮಾನ್ಯತೆ ದೊರಕಲಿದೆ. ಲಾಭದ ವಿಚಾರದಲ್ಲಿ ತುಸು ಅದೃಷ್ಟ ನಿಮ್ಮ ಜತೆಗೆ ಇರಲಿದೆ. ರಾಜಕೀಯ ತಂತ್ರಗಾರಿಕೆಯಲ್ಲಿ ನಿಮ್ಮ ನೀತಿ ಹೆಚ್ಚು ಕೆಲಸ ಮಾಡಲಿದೆ. ಈ ದಿನ ಶುಭ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top