ದಿನ ಭವಿಷ್ಯ-20 March 2018

ಸೂರ್ಯೋದಯ : 6.25

ಸೂರ್ಯಾಸ್ತ : 6.30

ರಾಹು ಕಾಲ : 3.00-4.30
ಗುಳಿಕ ಕಾಲ : 12.00-1.30
ಯಮಗಂಡ ಕಾಲ : 9.00-10.30

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ತೃತಿಯಾ,ಮಂಗಳವಾರ, ನಿತ್ಯ ನಕ್ಷತ್ರ -ಅಶ್ವಿನಿ , ಯೋಗ-ಐಂದ್ರ, ಕರಣ-ಗರಜೆ.

ಹಗಲು ಗನಸುಗಳನ್ನ ಕಾಣುವ ದಿನವಿದು. ಎಲ್ಲವನ್ನೂ ಅತಿರೇಕವಾಗಿ ಕಲ್ಪಿಸಿಕೊಂಡು ವರ್ತಿಸುವ ಸಂದರ್ಭ ಬರಲಿದೆ. ಚಿತ್ತ ಶುದ್ಧಿಗೆ ನಿಮ್ಮ ಪ್ರಯತ್ನ ಹೆಚ್ಚಿರಲಿ
ರಾಜಕೀಯ ಸಂಪರ್ಕದಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಸಂದರ್ಭ ಬರಲಿದೆ. ಕೌಟುಂಬಿಕ ಕಾರ್ಯದಲ್ಲೂ ಪ್ರಗತಿ ಕಾಣಲಿದ್ದೀರಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ
ಕೈ ತಪ್ಪಿದ ಅವಕಾಶಗಳು ಪುನಃ ದೊರಕಲಿದೆ. ಕಾರ್ಯದಲ್ಲಿ ತ್ವರಿತಗತಿಯನ್ನ ಹೊಂದಲಿದ್ದೀರಿ. ನಿರ್ಧಾರಗಳು ಗೌಪ್ಯವಾಗಿಯೇ ಇರಲಿ. ಬೇರೆಯವರು ನಿಮ್ಮ ಕಾರ್ಯದಲ್ಲಿ ಅಡ್ಡಗಾಲು ಹಾಕುವ ಸಾಧ್ಯತೆ ಹೆಚ್ಚು
ಹಣಕಾಸಿನ ಕೊರತೆಯು ಇಂದು ಕಾಡಿದರೂ ಮಿತ್ರರ ಸಹಾಯದಿಂದ ಇಂದು ನಿವಾರಣೆಯಾಗಲಿದೆ. ಹೊಸ ಯೋಜನೆಯನ್ನ ಕೈಗೆತ್ತಿಕೊಳ್ಳುವುದು ಬೇಡ. ಆರೋಗ್ಯದ ಬಗ್ಗೆ ಲಕ್ಷವಿರಲಿ

ಅದೃಷ್ಟದ ಬಗ್ಗೆ ಎಲ್ಲಿಲ್ಲದ ಪಡುವುದು ಬೇಡ. ನಿತ್ಯ ಕರ್ಮದಲ್ಲಿ ನಿಮ್ಮ ಲಕ್ಷವಿರಲಿ. ಬಂಧು-ಮಿತ್ರರ ಜತೆ ನಿಮ್ಮ ವರ್ತನೆಯು ಸೌಮ್ಯವಾಗಿರಲಿ. ಅನಾವಶ್ಯಕವಾಗಿ ಚರ್ಚೆ ಬೇಡ.
ಲಾಭ -ನಷ್ಟಗಳ ವಿಚಾರದಲ್ಲಿ ಅತಿರೇಖದ ಲೆಕ್ಕಾಚಾರ ಬೇಡ. ಆತ್ಮೀಯರಲ್ಲಿ ವ್ಯವಹಾರವನ್ನ ಪ್ರಧಾನಗೊಳಿಸಿ ಸಂಬಂಧವನ್ನ ಹಾಳು ಮಾಡಿಕೊಳ್ಳುವುದು ಬೇಡ. ಎಲ್ಲರ ಜತೆ ಸೌಹಾರ್ದವಾಗಿರಲು ಪ್ರಯತ್ನಿಸಿ.

ಆರೋಪ- ಪ್ರತ್ಯಾರೋಪದಲ್ಲಿ ದಿನ ಕಳೆಯುವುದು ಬೇಡ. ಕುಟುಂಬದ ಸದಸ್ಯರ ಜತೆ ಪ್ರೀತಿ, ವಿಶ್ವಾಸದಿಂದ ವರ್ತಿಸಿ. ಆಗ ಮಾತ್ರ ನಿಮಗೆ ಗೌರವ ದೊರಕಲಿದೆ. ಕೃಷಿ ವ್ಯವಹಾರದಲ್ಲಿ ಲಾಭವಿದೆ.

ನಿಮ್ಮ ಕೌಶಲಕ್ಕೆ ಇಂದು ಮಾನ್ಯತೆಯು ದೊರಯಲಿದೆ. ಮನೆಯಲ್ಲಿ ಸಂತಸದ ವಾತಾವರಣವು ನಿರ್ಮಾಣವಾಗಲಿದೆ. ಆರೋಗ್ಯದಲ್ಲಿ ಶೀತ ಬಾಧೆಯು ಕಾಣಿಸಲಿದೆ ಎಚ್ಚರ.

ಕಾರ್ಯ ದಕ್ಷತೆಯನ್ನ ಹೆಚ್ಚಿಸಿಕೊಂಡು ಎಲ್ಲರನ್ನು ಮೆಚ್ಚಿಸುವ ಗುಣ ಈ ದಿನ ನಿಮಗಿದೆ. ಸಂಘಟನೆಯ ಶಕ್ತಿಯು ಬಲವಾಗಿ ಮೂಡಿಬರಲಿದೆ. ಒಟ್ಟಿನಲ್ಲಿ ಶುಭ ದಿನ.

ಆವೇಶಭರಿತ ಬುದ್ಧಿ ಇಂದು ಹೆಚ್ಚಲಿದೆ. ಎಲ್ಲರ ಮೇಲೂ ಹರಿಹಾಯುವ ಸ್ವಭಾವ ಹೆಚ್ಚಾಗಲಿದೆ. ಎಚ್ಚರದಿಂದ ನಿಗ್ರಹಿಸಿಕೊಳ್ಳಿ. ನಿಮ್ಮ ವಿರೋಧಿಗಳು ಹೆಚ್ಚಾಗಲಿದ್ದಾರೆ.
ಹೊಂದಾಣಿಕೆ ಮನೋಭಾವವು ಇಂದು ಹೆಚ್ಚಾಗಿ ಎಲ್ಲರ ಸ್ನೇಹ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಸಂಸಾರದಲ್ಲೂ ಸಂತಸದ ಘಟನೆಗೆ ಸಾಕ್ಷಿಯಾಗಲಿದ್ದೀರಿ.

ಮಿತ್ರರ ಜತೆಗೂಡಿ ಮಾಡಿದ ವ್ಯವಹಾರವು ಇಂದು ಲಾಭವನ್ನ ತರಲಿದೆ. ಕುಟುಂಬ ವರ್ಗದಲ್ಲಿ ತೆಗೆದುಕೊಂಡ ನಿರ್ಧಾರವು ನೆಮ್ಮದಿಯನ್ನ ನೀಡಲಿದೆ.ಹಣಕಾಸಿನ ಕ್ಷೇತ್ರದಲ್ಲಿ ವೃದ್ಧಿಯೋಗವಿದೆ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top