ದಿನ ಭವಿಷ್ಯ-21 February 2018

ಸೂರ್ಯೋದಯ : 6.43

ಸೂರ್ಯಾಸ್ತ : 6.24

ರಾಹು ಕಾಲ : 12.00-1.30
ಗುಳಿಕ ಕಾಲ : 10.30-12.00
ಯಮಗಂಡ ಕಾಲ : 7.30-9.00

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಷಷ್ಠಿ, ಬುಧವಾರ, ನಿತ್ಯ ನಕ್ಷತ್ರ-ಅಶ್ವಿನಿ, ಯೋಗ-ಶುಕ್ಲ, ಕರಣ-ಕೌಲವ.

ಮೌಢ್ಯತೆಯನ್ನು ಬಿಟ್ಟು ಕಾರ್ಯ ನಿರ್ವಹಣೆ ಮಾಡುವುದನ್ನು ಇಂದು ಸಂಕಲ್ಪಿಸಿ. ಅನಾವಶ್ಯಕವಾದ ವಿಚಾರದ ಬಗ್ಗೆ ಹೆಚ್ಚು ಕಾಲಹರಣ ಮಾಡುವ ಬಗ್ಗೆ ಇಂದು ಲಕ್ಷವಹಿಸಲಿದ್ದೀರಿ. ಜಾಗರೂಕರಾಗಿ ನಿವಾರಿಸಿಕೊಳ್ಳಿ.
ಕೃಷಿ ವಿಚಾರದಲ್ಲಿ ಆಸಕ್ತಿ ಮೂಡಿ ಬರಲಿದೆ. ವೈಯಕ್ತಿಕ ಕಾರ್ಯದಲ್ಲಿ ಸ್ವಲ್ಪ ಕಾಣಲಿದ್ದೀರಿ. ಮನೆ ಮಂದಿಯ ಸಹಕಾರದಿಂದ ಕೌಟುಂಬಿಕವಾಗಿ ನೆಮ್ಮದಿಯನ್ನು ಹೊಂದಲಿದ್ದೀರಿ.
ಉಪಕಾರದ ಸ್ಮರಣೆಯು ನಿಮಗೆ ಇಂದು ಇರಲೇ ಬೇಕು. ಆಗ ಮಾತ್ರ ನಿಮ್ಮ ಮಿತ್ರರ ಜತೆ ಸಂಬಂಧ ಸರಿ ಹೋಗಲಿದೆ. ಇಲ್ಲವಾದರೆ ವಿರೋಧಿಗಳು ಬಲಿಷ್ಠವಾಗಲಿದ್ದಾರೆ. ಮಾತಿನಿಂದ ವೈರತ್ವ ಬರಬಹುದು.
ಇಷ್ಟ ಮಿತ್ರರ ಆಗಮನ ಸಂತಸದ ದಿನವಾಗಿ ಕಳೆಯುವ ಯೋಗ ನಿಮಗೆ ಇದೆ. ಕುಟುಂಬದಲ್ಲಿ ವಿಶೇಷ ಕಾರ್ಯ ನೆರವೇರುವ ಭಾಗ್ಯವು ಇಂದಿಗಿದೆ. ಶುಭ ದಿನವಾಗಲಿದೆ.
ಇಷ್ಟ ಮಿತ್ರರ ಆಗಮನ ಸಂತಸದ ದಿನವಾಗಿ ಯೋಗ ನಿಮಗೆ ಇದೆ. ಕುಟುಂಬದಲ್ಲಿ ವಿಶೇಷ ಕಾರ್ಯ ನೆರವೇರುವ ಭಾಗ್ಯವು ಇಂದಿಗಿದೆ. ಶುಭ ದಿನವಾಗಲಿದೆ.
ಬೇರೆಯವರ ಕಷ್ಟ-ಕಾರ್ಪಣ್ಯಕ್ಕೆ ಮನ ಮಿಡಿಯುವ ಗುಣ ಸ್ವಭಾವ ಇಂದು ಹೆಚ್ಚಲಿದೆ. ಆ ಮುಖದ ಸನ್ನಿವೇಶಕ್ಕೆ ಸ್ಪಂದಿಸಿ ಸಹಾಯಕರಾಗಿ ನೀವು ಇಂದು ವರ್ತಿಸಲಿದ್ದೀರಿ.
ಧಾರ್ಮಿಕ ವ್ಯಕ್ತಿಗಳ ಭೇಟಿ, ಧಾರ್ಮಿಕ ಕ್ಷೇತ್ರದಲ್ಲಿ ನಿಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಲಿದೆ. ಕುಟುಂಬ ವರ್ಗದ ವ್ಯವಹಾರವು ಪ್ರಗತಿಯನ್ನು ಕಾಣಲಿದೆ.
ಮನೋ ನಿಗ್ರಹಕ್ಕೆ ಹೆಚ್ಚು ಶ್ರಮವಹಿಸ ಬೇಕಾದದ್ದು ಅತೀ ಅವಶ್ಯ. ಬುದ್ಧಿಯು ಪ್ರಬಲವಾಗಿ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡ ಬಹುದು. ಬಲು ಜಾಗರೂಕರಾಗಿ ವರ್ತಿಸಿ.
ಮಿತ್ರರ ಜತೆಗೂಡಿ ಮಾಡಿದ ಹಣಕಾಸಿನ ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಜತೆಯಲ್ಲಿ ಸಂಬಂಧಗಳು ಹಳಸಿ ಹೋಗುವುದಕ್ಕಿಂತ ಮುಂಚೆಯೇ ಸರಿಪಡಿಸಿಕೊಳ್ಳಿ.
ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಅವಶ್ಯ. ಶೀತ ಬಾಧೆಯು ನಿಮ್ಮ ಆರೋಗ್ಯವನ್ನು ಸ್ವಲ್ಪ ಏರುಪೇರು ಮಾಡಬಹುದು. ಕ್ರಯ-ವಿಕ್ರಯ ಇಂದು ಬೇಡ.
ಹೊಸ ವಸ್ತುಗಳ ಖರೀದಿಯ ಯೋಗ ಇಂದು ಪ್ರಬಲವಾಗಿದೆ. ಯಂತ್ರೋಪಕರಣ ಲಾಭವನ್ನು ಹೊಂದಲಿದ್ದೀರಿ. ಆಲೋಚನಾ ಶೈಲಿಯು ಇಂದು ವಿನೂತನವಾಗಿ ಮೂಡಿ ಬರುವುದು.
ಹಾಸ್ಯ ಪ್ರವೃತ್ತಿಯಿಂದ ಪೇಚಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಪರರ ಬಗ್ಗೆ ಮಾತನಾಡುವುದು ಇಂದು ಕಡಿಮೆ ಮಾಡಿ. ವಿರೋಧಿಗಳು ಹೆಚ್ಚಬಹುದು. ಲಾಭದ ವಿಚಾರದಲ್ಲಿ ಸ್ಥಿರತೆಯನ್ನು ಹೊಂದಲಿದ್ದೀರಿ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top