ದಿನ ಭವಿಷ್ಯ-21 March 2018

ಸೂರ್ಯೋದಯ : 6.24

ಸೂರ್ಯಾಸ್ತ : 6.31

ರಾಹು ಕಾಲ : 12.00-1.30
ಗುಳಿಕ ಕಾಲ : 10.30-12.00
ಯಮಗಂಡ ಕಾಲ : 7.30-9.30

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ದೊಡ್ಡ ವ್ಯವಹಾರಕ್ಕೆ ಇಂದು ಕೈಹಾಕುವುದು ಬೇಡ. ನಷ್ಟವು ನಿಮ್ಮನ್ನು ನೋಡುತ್ತಲೇ ಇದೆ. ಎಚ್ಚರದಿಂದ ಹಣಕಾಸಿನ ವ್ಯವಹಾರವನ್ನು ಮಾಡಿ. ಲೇವಾದೇವಿಯ ವ್ಯವಹಾರವು ಇಂದು ಸೂಕ್ತವಲ್ಲ. ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಇರಲಿ. ಕಫ ಪ್ರಕೃತಿ ಹೆಚ್ಚಾಗಲಿದೆ.
ಬಂಧು-ಮಿತ್ರರ ಜತೆಯಲ್ಲಿ ಮಾತ ನಾಡುವಾಗ ಬಲು ಎಚ್ಚರದಿಂದ ಇರಿ. ತಪ್ಪು ಮಾತುಗಳು ನಿಮ್ಮಿಂದ ಇಂದು ಹೆಚ್ಚಲಿದೆ. ಇದರಿಂದಲೇ ಮನಸ್ತಾಪಕ್ಕೂ ವಾಗಲಿದೆ. ಉದ್ಯೋಗದಲ್ಲೂ ಕಿರಿಕಿರಿಯು ಹೆಚ್ಚಲಿದೆ. ದೇವತಾ ಆರಾಧನೆ ಮುಖ್ಯ

ವಸ್ತ್ರ-ವಿನ್ಯಾಸದ ಬಗ್ಗೆ ಎಲ್ಲಿಲ್ಲದ ಆಸಕ್ತಿಯು ಮೂಡಲಿದೆ. ಈ ಮುಖದ ಖರ್ಚು ಇಂದು ಹೆಚ್ಚಾಗಲಿದೆ. ಕುಟುಂಬ ವರ್ಗದ ಜತೆ ಪ್ರೀತಿ-ವಿಶ್ವಾಸಗಳು ಬಲವಾಗಲಿದೆ. ವಿಶೇಷವಾಗಿ ಕೌಟುಂಬಿಕ ಕಾರ್ಯದಲ್ಲಿ ಇಂದು ಪ್ರಗತಿಯನ್ನು ಕಾಣಲಿದ್ದೀರಿ

ಶೀಲದ ಬಗ್ಗೆ ಶಂಕೆ ಮೂಡುವಂತೆ ನಿಮ್ಮ ವರ್ತನೆಯು ಇರಲಿದೆ. ಇದನ್ನು ತಿದ್ದಿಕೊಂಡು ನಡೆಯಬೇಕಾದ ಅಗತ್ಯವು ಇಂದಿಗಿದೆ. ಮನೋ ಧರ್ಮದ ಚಾಂಚಲ್ಯತೆಗೆ ಕಡಿವಾಣ ಹಾಕಿಕೊಳ್ಳುವುದು ಒಳ್ಳೆಯದು. ಹಿರಿಯ ಅಧಿಕಾರಿಗಳಿಂದ ಸಹಕಾರ


ಹಿರಿಯರ ಜತೆಯಲ್ಲಿ ನಿಮ್ಮ ಮಾತು ಅವಿಶ್ವಾಸವನ್ನು ಮೂಡಿಸಲಿದೆ. ಇದನ್ನು ನೀವು ಸುಧಾರಿಸಿಕೊಂಡು ನಡೆಯಿರಿ. ಸಾಮಾಜಿಕವಾಗಿ ನಿಮ್ಮ ನಡೆಯು ಕ್ರಮವಾಗಿದ್ದರೂ ಆಪಾದನೆಗಳು ಬರುವ ಸಾಧ್ಯತೆ ಇದೆ. ಎಚ್ಚರದಿಂದ ನಡೆಯಿರಿ.

ಸಂಗೀತದಲ್ಲಿ ನಿಮ್ಮ ಆಸಕ್ತಿಯು ಇಂದು ಮಹತ್ವದ ಘಟ್ಟವನ್ನು ಪಡೆಯಲಿದೆ. ಗುರು ದರ್ಶನವು ಈ ದಿನದ ಭಾಗ್ಯವಾಗಿ ಪರಿಣಮಿಸಲಿದೆ. ಇಚ್ಛಾಶಕ್ತಿಯು ವೃದ್ಧಿಯಾಗಿ ಮಹತ್ವದ ಕಾರ್ಯವನ್ನು ಸಾಧಿಸಲಿದ್ದೀರಿ.


ರಾಜಕೀಯವಾಗಿ ನಿಮ್ಮ ಹಂಬಲ ಹೆಮ್ಮರವಾಗಿ ಬೆಳೆದು ನಿಲ್ಲಲಿದೆ. ಈ ಬಯಕೆ ಯನ್ನು ನೀಗಿಸಿಕೊಳ್ಳಲು ಕಾಲ ಪಕ್ವವಾಗಿದೆ. ಎಲ್ಲವೂ ಗುಪ್ತವಾಗಿರಲಿ. ತಂತ್ರಗಾರಿಕೆಯು ಹೆಚ್ಚು ಫಲವನ್ನು ನೀಡಲಿದೆ.

ಅಧ್ಯಯನ ಶೀಲತೆಯು ಇಂದು ಹೆಚ್ಚಾಗಲಿದೆ. ಎಲ್ಲವನ್ನೂ ಕುಲಂಕಷವಾಗಿ ನೋಡುವ ಮನೋ ಬುದ್ಧಿಯು ಜಾಗ್ರತ ವಾಗಲಿದ್ದು, ಹೊಸ ಯೋಜನೆಯನ್ನು ಪ್ರಾರಂಭಿಸಲು ಉತ್ಸುಕರಾಗಿ ಮುನ್ನುಗ್ಗಿ. ಜಯ ನಿಶ್ಚಿತ.

ಪರ ನಿಂದನೆಯಲ್ಲಿಯೇ ದಿನವನ್ನು ಕಳೆಯುವುದು ಬೇಡ. ಪರರ ವಿಚಾರಕ್ಕಿಂತ ನಿಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಳ್ಳಲು ನೀವು ಇಂದು ಪ್ರಯತ್ನಿಸಿ. ಇಲ್ಲವಾದರೇ ಅಪಮಾನಕ್ಕೂ ಗುರಿಯಾಗಲಿದ್ದೀರಿ. ಜಾಗ್ರತೆಯಿಂದ ಹೆಜ್ಜೆ ಇಡಿ


ಮನಸ್ಸು ಆತಂಕವನ್ನು ತೀವ್ರವಾಗಿ ಪಡೆದುಕೊಳ್ಳಲಿದೆ. ಇದನ್ನು ನಿಯಂತ್ರಿಸಿಕೊಳ್ಳಿ. ಬೆಳ್ಳಿ-ಬಂಗಾರದ ವಹಿವಾಟು ಇಂದು ಬೇಡ. ದೇವ ದರ್ಶನ ದಿಂದ ಶುಭತೆಯನ್ನು ಪಡೆದುಕೊಳ್ಳಿ. ಮಿತ್ರರ ಜತೆ ಸಲಹೆ-ಸೂಚನೆಯನ್ನು ಸ್ವೀಕರಿಸಿ
ಆರೋಗ್ಯದ ಬಲದಿಂದ ಉತ್ಸಾಹ -ಹುಮ್ಮಸ್ಸನ್ನು ಇಂದು ಹೊಂದಲಿದ್ದೀರಿ. ಸಂಗಾತಿ-ಸಂಗಡಿಗರನ್ನು ವಿಶ್ವಾಸ ಇಂದು ಕಾಣುವ ಯೋಗ. ಇವರ ಸಹಕಾರ ದೊರಕಿ ಕಾರ್ಯದಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಈ ದಿನ ಶುಭ.

ಆಯ್ಕೆಯಲ್ಲಿ ಸ್ವಲ್ಪ ಗೊಂದಲದಿಂದಾಗಿ ನಷ್ಟವನ್ನು ಹೊಂದಲಿದ್ದೀರಿ. ದೇವ ಬಲದಿಂದ ಈ ದೋಷವನ್ನು ನಿವಾರಿಸಿಕೊಳ್ಳಬಹುದು. ಇಷ್ಟದೇವರ ಆರಾಧನೆಯನ್ನು ದಿನದ ಪ್ರಾರಂಭದಲ್ಲಿ ಮಾಡಿಕೊಂಡೇ ಪ್ರಾರಂಭಿಸಿ. ಆಗ ಮಾತ್ರ ನಷ್ಟವಾಗಲಾರದು.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top