ದಿನ ಭವಿಷ್ಯ-23 February 2018

ಸೂರ್ಯೋದಯ : 6.42

ಸೂರ್ಯಾಸ್ತ : 6.24

ರಾಹು ಕಾಲ : 10.30-12.00
ಗುಳಿಕ ಕಾಲ : 7.30-9.00
ಯಮಗಂಡ ಕಾಲ : 3.00-4.30

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಅಷ್ಟಮಿ, ಶುಕ್ರವಾರ, ನಿತ್ಯ ನಕ್ಷತ್ರ-ಕೃತ್ತಿಕಾ, ಯೋಗ-ವೈಧೃತಿ, ಕರಣ-ಭದ್ರೆ.


ಅಲಂಕಾರಿಕ ವಸ್ತುಗಳ ಖರೀದಿಯ ಹಂಬಲ ಉಂಟಾಗಲಿದೆ. ಖರೀದಿಯ ಗೋಜಿಗೆ ಹೋಗುವುದು ಬೇಡ. ಅತಿ ಆಸೆ ಗತಿಗೇಡು ಎಂಬ ಗಾದೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಯೋಗ್ಯತೆಗೆ ಯೋಗಗಳು ಇನ್ನೂ ಕೂಡಿ ಬಂದಿಲ್ಲ. ಅವಸರ ಬೇಡ. ಅಧ್ಯಾತ್ಮಿಕ ಮನೋಭಾವದಲ್ಲಿ ಕಳೆದರೆ ನೆಮ್ಮದಿ ದೊರೆಯಲಿದೆ. ಇಲ್ಲವಾದರೆ ಗೊಂದಲ ನಿರ್ಮಾಣವಾಗುವ ಸಾಧ್ಯತೆ ಹೆಚ್ಚು

ಅಶ್ಲೀಲ ಮನೋಧರ್ಮಕ್ಕೆ ಹಾಗೂ ಪ್ರವೃತ್ತಿಗೆ ಇಂದು ಅವಕಾಶ ನೀಡಬೇಡಿ. ಅಂತರ‌್ಯದ ಕೊಳಕು ಬುದ್ಧಿಯನ್ನು ಪ್ರಯತ್ನ ಪೂರ್ವಕವಾಗಿ ನಿವಾರಿಸಿಕೊಳ್ಳಿ. ಶುಭತೆಯನ್ನು ಮಾಡಲು ಪ್ರಯತ್ನಿಸಿ.

ಶುಭ ಕಾರ್ಯಕ್ಕೆ ಇಂದು ಅವಕಾಶ ಹೆಚ್ಚು ಒದಗಿ ಬರಲಿದೆ. ಹೆಚ್ಚು ಕ್ರಿಯಾಶೀಲರಾಗಿ ಇಂದು ಇರುವ ಯೋಗವಿದೆ. ಮನೆಮಂದಿಯ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ.

ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡು ಉದ್ಯೋಗ ಸ್ಥಳದಲ್ಲಿ ಗೊಂದಲ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಿಕೊಂಡು ಹೆಜ್ಜೆ ಇಡಿ. ಇಷ್ಟದೇವರ ಸ್ಮರಣೆ ಅಗತ್ಯ.

ಕೊಡುಕೊಳ್ಳುವ ಹಣಕಾಸಿನ ವ್ಯವಹಾರವು ಸ್ವಲ್ಪ ನಷ್ಟವನ್ನು ಉಂಟು ಮಾಡುವ ಸಂಭವವಿದೆ. ದೊಡ್ಡ ವ್ಯವಹಾರ ಇಂದು ಬೇಡ. ಮನೋ ಸ್ಥಿರತೆಗಾಗಿ ಗುರುವಿನ ಸ್ಮರಣೆ ಅಗತ್ಯ.

ಒಟ್ಟಿನಲ್ಲಿ ಪ್ರಸಿದ್ಧರಾಗಿ ಬಿಡುವ ಹಂಬಲವನ್ನು ದೂರವಿಡಿ. ಕೀರ್ತಿ -ಗೌರವವು ದೊರೆಯಲಿಕ್ಕೆ ನಿಮ್ಮ ವರಿಂದಲೇ ತಡೆ ಇದೆ. ಯಾವುದಕ್ಕೂ ನಿತ್ಯಕರ್ಮವನ್ನು ಶ್ರದ್ಧೆ ಯಿಂದ ಕೈಗೊಳ್ಳಿ ಸಮಾಧಾನಿಗಳಾಗಿ.

ವಿರೋಧಿಗಳ ಬಗ್ಗೆ ಜಾಗೃತರಾಗಿರಿ. ನಿಮ್ಮ ಅಪಪ್ರಚಾರವನ್ನು ಮಾಡುವ ಸಾಧ್ಯತೆ ಹೆಚ್ಚಿದೆ. ನ್ಯಾಯಯುತವಾಗಿ ವರ್ತಿಸಿ. ನಿಮ್ಮ ಮಿತ್ರರ ಸಹಾಯ ದೊರಕಲಿದೆ.


ಮಕ್ಕಳ ಯೋಗಕ್ಷೇಮದ ಬಗ್ಗೆ ಲಕ್ಷವಿರಲಿ. ನಿಮ್ಮ ಹಿತನುಡಿಯನ್ನು ಮಕ್ಕಳು ಕೇಳುವಂತರಾಗುತ್ತಾರೆ. ವ್ಯವಹಾರದಲ್ಲಿ ಚಿನ್ನ-ಬೆಳ್ಳಿ ಖರೀದಿಯು ಬೇಡ. ಆರೋಗ್ಯದ ಬಗ್ಗೆಯೂ ನಿಗಾ ಇರಲಿ.


ಉದ್ಯೋಗದಲ್ಲಿ ಇದ್ದ ವಿವಾದವು ಬಗೆಹರಿಯಲಿದ್ದು, ಈ ಮುಖದ ನೆಮ್ಮದಿಯನ್ನು ಹೊಂದುವ ಯೋಗವಿದೆ. ಇಚ್ಛಾಶಕ್ತಿಯು ವೃದ್ಧಿಯಾಗಿ ಎಲ್ಲದರಲ್ಲೂ ಉತ್ಸಾಹಿಗಳಾಗುತ್ತೀರಿ.

ಆದರ್ಶಕ್ಕೆ ಅನುಗುಣವಾಗಿ ನಿಮ್ಮ ನಡೆ ಇರಲಿ. ಕೀರ್ತಿ ಹಂಬಲದಿಂದ ಅತಃ ಸಾಕ್ಷಿಗೆ ವಿರುದ್ಧವಾಗಿ ಸ್ವಭಾವ ಹೆಚ್ಚಾಗಲಿದೆ. ಇದನ್ನು ನಿಯಂತ್ರಿಸಿಕೊಂಡು ದಿನವನ್ನು ಕಳೆಯಿರಿ.

ಸದಾ ಲವಲವಿಕೆಯು ನಿಮ್ಮನ್ನು ಇಂದು ಸ್ವಾಗತಿಸಲಿದೆ. ಉತ್ಸಾಹದ ಬುದ್ಧಿಯಿಂದ ಮಹತ್ವದ ಕಾರ್ಯ ವನ್ನು ಸಾಧಿಸುವ ಯೋಗವಿದೆ. ನೆರೆಯವರಲ್ಲೂ ಸೌಹಾರ್ದ ವಾತಾವರಣ ನಿರ್ಮಾಣವಾಗಲಿದೆ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top