ದಿನ ಭವಿಷ್ಯ-24-April-2018

ಸೂರ್ಯೋದಯ : 6.10

ಸೂರ್ಯಾಸ್ತ : 6.32

ರಾಹು ಕಾಲ : 3.00-4.30
ಗುಳಿಕ ಕಾಲ : 12.00-1.30
ಯಮಗಂಡ ಕಾಲ : 9.00-10.30

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ನವಮಿ, ಮಂಗಳವಾರ, ನಿತ್ಯನಕ್ಷತ್ರ-ಆಶ್ಲೇಷ, ಯೋಗ-ಗಂಡ, ಕರಣ-ಕೌಲವ.

ಅಪಾರವಾದ ನಿರೀಕ್ಷೆ ಇಂದು ಇಟ್ಟುಕೊಳ್ಳು ವುದು ಬೇಡ. ಆಶಾಭಂಗವಾಗಲಿದೆ. ಎಚ್ಚರದಿಂದ ನಿತ್ಯಕರ್ಮವನ್ನು ಮಾತ್ರ ನಿರ್ವಹಿಸಿಕೊಂಡು ದಿನವನ್ನು ಕಳೆಯಿರಿ. ಹೊಂದಾಣಿಕೆಯ ಮನೋಭಾವ ಹೆಚ್ಚಿಸಿಕೊಳ್ಳಿ. ಆಗ ಮಾತ್ರ ಸಂಸಾರದಲ್ಲಿ ಸುಖ ಪ್ರಾಪ್ತಿಯಿದೆ
ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ಪ್ರಗತಿ ಉಂಟಾಗಿ, ಸಂಸಾರಿಕ ಕಷ್ಟಗಳು ನಿವಾರಣೆ ಹೊಂದಲಿದೆ. ಆದರೆ ಬೇಡದ ವಿಚಾರಗಳಿಗೆ ಮೂಗು ತೂರಿಸುವ ಪ್ರವೃತ್ತಿಯು ಇದನ್ನು ನಿಯಂತ್ರಿಸಿಕೊಂಡು ದಿನವನ್ನು ಶುಭವಾಗಿಸಿಕೊಳ್ಳಿ.
ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಶುಭ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವ ದಿನ. ಉದ್ಯೋಗಾಕಾಂಕ್ಷಿಗಳಿಗೆ ಶುಭದಿನ. ಮನೋಧರ್ಮವನ್ನು ಸ್ಥಿರವಾಗಿ ಇಟ್ಟುಕೊಳ್ಳಿ. ನಿರ್ಣಯ-ನಿರ್ಧಾರವನ್ನು ಕೈಗೊಳ್ಳಬೇಕಾದ ದಿನವಿದು
ಶ್ರಮಕ್ಕೆ ತಕ್ಕನಾದ ಪ್ರತಿಫಲದ ಜತೆಗೆ ಇಂದು ಅದೃಷ್ಟವನ್ನು ಹೊಂದಿ, ಮನಸ್ಸನ್ನು ಸಮಾಧಾನಗೊಳಿಸಿಕೊಳ್ಳುವಿರಿ. ಸಂಸಾರದ ಪ್ರೀತಿ-ವಿಶ್ವಾಸದಿಂದ ಕೌಟುಂಬಿಕ ಕಾರ್ಯದಲ್ಲಿ ಸಾಧನೆಯನ್ನು ಮಾಡುವ ದಿನವಾಗಲಿದೆ.
ಮನಸ್ಸಿನಾಳದ ಸುಪ್ತ ಚಿಂತನೆಯು ತಟ್ಟನೆ ಈಡೇರುವ ದಿನವಿದು. ಸಾಮಾಜಿಕವಾಗಿಯೂ ಗೌರವ-ಕೀರ್ತಿಯನ್ನು ಹೊಂದಲಿದ್ದೀರಿ. ಮಕ್ಕಳ ಜತೆಗೆ ಒಡನಾಟ ಇಲ್ಲವಾದರೆ ಪ್ರತಿರೋಧವನ್ನು ಎದುರಿಸ ಬೇಕಾಗುವುದು.
ಜೀರ್ಣಶಕ್ತಿಯಲ್ಲಿ ಏರುಪೇರುಗಳಿಂದ ಆರೋಗ್ಯದಲ್ಲಿ ಕಿರಿ-ಕಿರಿ ಅನುಭವಿಸುವ ದಿನವಿದು. ಮಿತ ಆಹಾರ ಇದಕ್ಕೆ ಪರಿಹಾರ ಎಂಬುದು ತಿಳಿದಿರಲಿ. ವ್ಯವಹಾರಿಕ ಕ್ಷೇತ್ರದಲ್ಲಿ ಲಾಭ ಹೊಂದಲಿದ್ದು, ಉಳಿತಾಯದ ವಿಚಾರ ದಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳಲಿದ್ದೀರಿ.
ದುರಭಿಮಾನದಿಂದ ಹತ್ತಿರದವರರೊಂದಿಗೆ ನಿಷ್ಠುರತೆಯನ್ನು ಎದುರಿಸಬೇಕಾಗಿದೆ. ಆಂತರ‌್ಯದಲ್ಲಿ ಏನೇ ಇದ್ದರೂ ಸಹವರ್ತಿಗಳ ಜತೆಯಲ್ಲಿ ನಯ-ವಿನಯದಿಂದ ನಡೆದುಕೊಳ್ಳ ಬೇಕಾದದ್ದು ಇಂದಿನ ಅನಿವಾರ್ಯತೆ ಇದೆ.
ಕಾರ್ಯ ಕ್ಷೇತ್ರದಲ್ಲಿ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಲು ಇಂದು ಸಕಾಲ. ಕೆಲವೊಂದು ಸಮಸ್ಯೆಗೆ ತೀರಾ ಬೇಡ. ಕೌಟುಂಬಿಕ ವಿಚಾರಗಳಿಗೆ ಇಂದು ಹೆಚ್ಚು ಲಕ್ಷ್ಯ ನೀಡಿ. ಎಲ್ಲವನ್ನು ನಿಧಾನವಾಗಿ ಬಗೆಹರಿಸಿಕೊಳ್ಳಿ
ಜವಾಬ್ದಾರಿಯಿಂದ ದುಡಿದ ನಿಮಗೆ ತಡವಾಗಿಯಾದರೂ ಇಂದು ಶುಭಫಲವು ದೊರಕಲಿದೆ. ಪ್ರತಿಫಲದ ಪರಿಣಾಮ ನಿಮಗೆ ನಿಧಾನವಾಗಿ ಗೋಚರಿಸಿ, ಸಂತೋಷವನ್ನು ಉಂಟು ಮಾಡಲಿದೆ. ಹಣಕಾಸಿನ ವಿಚಾರದಲ್ಲಿ ಲೆಕ್ಕ ತಪ್ಪಿ ವ್ಯವಹರಿಸುವುದು ಶುಭವಲ್ಲ.
ಕಾರ್ಯ ರಂಗದಲ್ಲಿ ನಿಮ್ಮ ವಿಶ್ವಾಸಿಗರು ನಿಮ್ಮ ಮೇಲೆ ಗೂಬೆ ಕೂರಿಸಬಹುದು. ಇದಕ್ಕೆ ಪ್ರಾಮುಖ್ಯತೆಯನ್ನು ನೀಡುವುದು ಬೇಡ. ನಿಮ್ಮ ನಿಲುವಿನಲ್ಲಿ ಬದಲಾವಣೆಯೂ ಬೇಡ. ನಿರ್ಲಿಪ್ತ ಮನಸ್ಸಿನಿಂದ ಮುಂದೆ ಶುಭಫಲವಿದೆ.

ಉದ್ಯೋಗ ರಂಗದಲ್ಲಿ ಅನಿವಾರ್ಯವಾಗಿ ರಾಜಿಯಾಗುವ ಸಂದರ್ಭ ಇಂದು ಬರಲಿದೆ. ದೇವ ಬಲದಿಂದ ಇದು ಕೆಡಕನ್ನು ಮಾಡಲಾರದು. ಮನೋವ್ಯಾಕುಲತೆಯು ಇಂದು ಹೆಚ್ಚಾಗಿ ಗೊಂದಲವು ಸೃಷ್ಟಿಯಾಗಲಿದೆ. ದೇಹ ಸೌಖ್ಯತೆಯನ್ನು ಹೊಂದಲಿದೆ

ಏರುತ್ತಿರುವ ಆರ್ಥಿಕ ವೆಚ್ಚ ಆತಂಕವನ್ನು ಉಂಟು ಮಾಡುವ ದಿನ. ಸಂಸಾರಿಕ ವಿಚಾರದಲ್ಲಿ ಹೆಚ್ಚು ಸಂಘರ್ಷವನ್ನು ಉಂಟು ಮಾಡುವ ದಿನ. ಇದಕ್ಕೆ ಧ್ಯಾನ ಚಿತ್ತವನ್ನು ಪಡೆಯಬೇಕಾದದ್ದು ಅತೀ ಅಗತ್ಯ. ವರ್ತಮಾನಕ್ಕಿಂತ ಭವಿಷ್ಯ ಶುಭವಿದೆ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top