Sri Ganesh Tel

07 December 2017

ಸೂರ್ಯೋದಯ : 06.26

ಸೂರ್ಯಾಸ್ತ : 05.53

ರಾಹು ಕಾಲ : 01.30-03.00
ಗುಳಿಕ ಕಾಲ : 09.00-10.30
ಯಮಗಂಡ ಕಾಲ : 06.00-07.00

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ಚತುರ್ಥಿ, ಗುರುವಾರ, ನಿತ್ಯ ನಕ್ಷತ್ರ-ಪುಷ್ಯಾ, ಯೋಗ-ಬ್ರಹ್ಮ, ಕರಣ-ಬಾಲವ

ಮಕ್ಕಳ ಆರೋಗ್ಯದಲ್ಲಿ ಸುಧಾರಣೆ. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ. ನೆರೆಯವ ರಿಂದಲೂ ಹೆಚ್ಚಿನ ಸಹಕಾರ ದೊರಕಿ ಮೇಷ ಲಾಭ ಉಂಟಾಗಲಿದೆ.
ಧರ್ಮ ಕಾರ್ಯದಲ್ಲಿ ನಿಮ್ಮ ಮನಸ್ಸು ತೀವ್ರವಾಗಲಿದೆ. ದಾನ-ಧರ್ಮದ ವಿಚಾರದಲ್ಲಿ ಇಂದು ನಿಮ್ಮದು ಎತ್ತಿದ ಕೈ. ಮನಸ್ಸಿಗೆ ಸಮಾಧಾನವನ್ನ ಹೊಂದುವ ದಿನ.
ಸಿಗಬೇಕಾದ ಹಣಕ್ಕೆ ಇಂದು ಮೋಸವಿಲ್ಲ. ಸಾಮಾಜಿಕವಾಗಿಯೂ ಗೌರವಕ್ಕೂ ಇಂದು ಚ್ಯುತಿ ಬರಲಾರದು. ಅಂದುಕೊಂಡ ಕಾರ್ಯವನ್ನ ನೇರವೇರಿಸಿ ಯಶಸ್ಸು ನಿಶ್ಚಿತ.
ಕಾರಣವಿಲ್ಲದೆ ಉದ್ವೇಗಗೊಳ್ಳುವ ಸ್ವಭಾವ ಇಂದು ನಿಮ್ಮದಾಗಲಿದೆ. ಇದನ್ನ ನಿಯಂತ್ರಿಸಿಕೊಳ್ಳಿ. ಈ ಉದ್ವೇಗದಿಂದ ಮಿತ್ರರನ್ನು ದೂರ ಮಾಡಿ ಕೊಳ್ಳುವ ಸಾಧ್ಯತೆ ಇದೆ. ಎಚ್ಚರದಿಂದ ವರ್ತಿಸಿ.
ಹಣಕಾಸಿನ ವಿಚಾರದಲ್ಲಿ ಬಲು ಎಚ್ಚರದಿಂದ ಹೆಜ್ಜೆ ಹಾಕಲೇಬೇಕು. ಇಲ್ಲವಾದರೆ ಅನಾಯಾಸವಾದ ಖರ್ಚು ಹೆಚ್ಚಾಗುವ ಸಂಭವ ಹೆಚ್ಚಿದೆ. ಆರೋಗ್ಯದ ಬಗ್ಗೆಯೂ ನಿಗಾ ಇರಲಿ.
ಕೀಳರಿಮೆಯು ಬಹುವಾಗಿ ಕಾಡಲಿದೆ. ಇದನ್ನ ನಿವಾರಿಸಿಕೊಳ್ಳಿ. ಕೆಲಸದಲ್ಲಿ ಬೇರೆಯವರ ಜತೆ ಹೋಲಿಕೆಗೆ ಹೋಗದೆ ನಿಮ್ಮ ಕೆಲಸವೊಂದಕ್ಕೆ ಲಕ್ಷ ಹೆಚ್ಚಿರಲಿ. ದೊಡ್ಡ ವ್ಯವಹಾರ ಬೇಡ.
ದೈನದಿಂನ ಕೆಲಸ ಕಾರ್ಯವು ಅತಿ ಚುರುಕುತನದಲ್ಲಿ ನೇರವೇರಲಿದೆ. ಕೌಟುಂಬಿಕ ಕಾರ್ಯಕ್ಕೂ ಯಾವುದೇ ತಡೆ ಬರಲಾರದು.ಹಣಕಾಸಿನ ವ್ಯವಹಾರ ದೊಡ್ಡ ಪ್ರಮಾಣದಲ್ಲಿ ನೆರವೇರಿ ಲಾಭ ಉಂಟಾಗಲಿದೆ.
ಒತ್ತಡ ಮತ್ತು ಗೊಂದಲದ ಈ ದಿನಕ್ಕೆ ನೀವೇ ಪರಿಹಾರವನ್ನ ಕಂಡುಕೊಳ್ಳಬೇಕು. ಇಷ್ಟ ದೇವರ ಭಜನೆ-ಧ್ಯಾನ ಅತೀ ಮುಖ್ಯವಾಗಿ ಮಾಡಿ. ಇದ ರಿಂದ ಆರೋಗ್ಯವು ಸುಧಾರಿಸಲಿದೆ.
ಏಕಾಂತವನ್ನು ಬಯಸುವ ನೀವು ಇಂದು ಮನೋಶಾಂತಿಯನ್ನ ಹೊಂದಿ ದಿನವನ್ನ ಸಮೃದ್ಧವಾಗಿ ಕಳೆಯಲಿದ್ದೀರಿ. ಸಾಮಾಜಿಕ ಕೆಲಸದಲ್ಲಿ ನಿಮ್ಮ ಸಂಘಟನೆಗೆ ಹೆಚ್ಚು ಬೆಲೆ ಬರಲಿದೆ.
ಮಕ್ಕಳ ವಿದ್ಯಾಭ್ಯಾಸವು ಪ್ರಗತಿಯನ್ನ ಹೊಂದಲಿದೆ. ಕೌಟುಂಬಿಕ ಕ್ಷೇತ್ರದಲ್ಲಿ ನೆಮ್ಮದಿಯನ್ನ ಹೊಂದಲಿದ್ದೀರಿ. ವ್ಯವಹಾರದಲ್ಲಿ, ಬ್ಯಾಂಕ್ ಸಂಬಂಧಿ ಕಾರ್ಯದಲ್ಲಿ ಸ್ವಲ್ಪ ಹಿನ್ನೆಡೆ ಇದೆ.
ವಿಧೇಯರಾಗಿ ವರ್ತಿಸಿ. ಇಲ್ಲವಾದರೆ ಇದನ್ನೆ ನಿಮ್ಮ ವಿರೋಧಿಗಳು ಅಪಪ್ರಚಾರವನ್ನು ಮಾಡಲಿದ್ದಾರೆ. ನಿಮ್ಮ ಕಾರ್ಯ ಶೈಲಿಯ ವಿಧಾನದಿಂದ ಹಿರಿಯರ ಅನುಗ್ರಹಕ್ಕೆ ಪಾತ್ರರಾಗುವ ಯೋಗವಿದೆ.
ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಆರೋಗ್ಯದ ಬಲದಿಂದ ಎಲ್ಲವನ್ನೂ ಸಾಧಿಸುವ ಹುಮ್ಮಸ್ಸು ಇಂದು ನಿಮಗೆ ಬರಲಿದೆ. ಶುಭದಿನ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top