13 January 2018

ಸೂರ್ಯೋದಯ : 06.46

ಸೂರ್ಯಾಸ್ತ : 06.09

ರಾಹು ಕಾಲ : 9.00-10.30
ಗುಳಿಕ ಕಾಲ : 6.00-7.30
ಯಮಗಂಡ ಕಾಲ : 1.30- 3.00

ದಕ್ಷಿಣಾಯನ, ಹೇಮಂತಋತು, ಪುಷ್ಯಮಾಸ, ಕೃಷ್ಣಪಕ್ಷ, ದ್ವಾದಶಿ, ಶನಿವಾರ, ನಿತ್ಯ ನಕ್ಷತ್ರ-ಅನುರಾಧ, ಯೋಗ-ವೃದ್ಧಿ, ಕರಣ-ಕೌಲವ.

ನೆರೆಯವರಿಗೆ ಹೊರೆಯಾಗಬೇಡಿ. ಈ ದಿನ ಪರಾವಲಂಬನೆಯು ಅಷ್ಟೊಂದು ಶುಭವಲ್ಲ. ವಾಯು ಪ್ರಕೋಪದಿಂದ ಉದರ ವ್ಯಾಧಿ ಕಾಣಿಸಿಕೊಳ್ಳಲಿದೆ. ಇದಕ್ಕೆ ಮನೆ ಮದ್ದೇ ಪರಿಹಾರ. ಗಾಬರಿಯಾಗಬೇಡಿ.
ಉಪಕಾರಿಗಳಾಗ ಬೇಕಾದದ್ದು ಬಿಟ್ಟು, ಅಪಕಾರಿಗಳಾಗಬೇಡಿ. ಕುತಂತ್ರದ ಮನಸ್ಸನ್ನು ಹೊಂದುವಿರಿ. ಇದನ್ನು ಸತತ ಪ್ರಯತ್ನದಿಂದ ನಿವಾರಿಸಿಕೊಳ್ಳಿ. ಶುಭತೆಯನ್ನು ಸ್ವೀಕರಿಸಲು ದೇವ ಅನುಗ್ರಹ ಅಗತ್ಯ


ಜನರನ್ನು ಮೆಚ್ಚಿಸುವ ಗೋಜಿಗೆ ಹೋಗುವುದು ಬೇಡ. ಜನಾರ್ಧನ ಮರೆಯಬೇಡಿ. ಗಡಿ ತಂಟೆ ಪ್ರಾರಂಭವಾಗಬಹುದು. ಇದನ್ನು ಸಂಧಾನದಲ್ಲಿ ಪರಿಹರಿಸಿಕೊಳ್ಳಿ. ಪರಿವಾರ ಸುಕ್ಷೇಮ


ಶತ್ರುವೇ ಮಿತ್ರನಾಗಿ ಶುಭ ಕಾರ್ಯಕ್ಕೆ ಕೈ ಜೋಡಿಸುವ ಸಂದರ್ಭ ಈ ದಿನ ಬರಲಿದೆ. ನೌಕರ ವರ್ಗದವರಿಗೆ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚಲಿದೆ. ಇದನ್ನು ಕಾಯಕವೇ ಕೈಲಾಸ ಎಂದು ನಿಭಾಯಿಸಿ.

ನಿದ್ರೆಯಲ್ಲಿ ಕುಂಭ ಕರ್ಣನನ್ನು ನೆನಪಿಸಿಕೊಳ್ಳುವ ಸಂದರ್ಭ ಬರಲಿದೆ. ಲವಲವಿಕೆಯು ನಿಮ್ಮಿಂದ ಜಾರಿ ಹೋಗಲಿದೆ ಎಚ್ಚರ. ಅವಕಾಶ ವಂಚಿತ ಸಾಲಿನಲ್ಲಿ ನಿಲ್ಲಬೇಕಾದೀತು ಎಚ್ಚರ


ನೇರ-ದಿಟ್ಟ ನಿಲುವಿನಿಂದ ಸಮಾಜದಲ್ಲಿ ದೊರಕಲಿದೆ. ಸಹವರ್ತಿಗಳ ವಿಶ್ವಾಸವನ್ನು ಹೆಚ್ಚಿಸಿಕೊಂಡು ಕಾರ್ಯ ಪ್ರವೃತ್ತರಾಗಿ. ಕುಟುಂಬದವರ ಸಹಕಾರದಿಂದ ನೆಮ್ಮದಿಯು ದೊರಕಲಿದೆ.

ಎಲ್ಲರ ಜತೆ ಪ್ರೀತಿ-ವಿಶ್ವಾಸದಿಂದ ವರ್ತಿಸಬೇಕಾದದ್ದು ಈ ದಿನದ ಅತೀ ಅವಶ್ಯಕತೆಯಲ್ಲೊಂದು. ವಿವೇಕವೇ ವಿಕಾಸಕ್ಕೆ ಕಾರಣ ಎಂಬುದನ್ನು ನೆನಪಿಸಿಕೊಳ್ಳಿ. ಉಷ್ಣ ಶರೀರದಿಂದ ಆರೋಗ್ಯ ಏರುಪೇರು ಸಾಧ್ಯ


ವೇಷ-ಭೂಷಣದ ಬಗ್ಗೆ ಎಲ್ಲಿಲ್ಲದ ಆಸಕ್ತಿಯು ಮೂಡಲಿದೆ. ನವೀನ ವಿನ್ಯಾಸದ ವಸ್ತ್ರವನ್ನು ಧರಿಸಿ ಶುಭವಾಗಲಿದೆ. ಮನೆಯಲ್ಲಿ ಆವೇಶ-ಆದೇಶ ಎರಡಕ್ಕೂ ಅವಕಾಶ ನೀಡಬೇಡಿ.

ನಿಮ್ಮ ತಾಳ್ಮೆ-ಸಂಯಮಕ್ಕೆ ಫಲ ದೊರಕುವ ದಿನ. ಬಹುದಿನದಿಂದ ಹಿಡಿಯಲ್ಪಟ್ಟ ಕೆಲಸ ಸುಗಮದಿಂದ ಪ್ರಾರಂಭವಾಗಲಿದೆ. ವಾಹನದ ಸುಖ ಅಷ್ಟೊಂದು ಶುಭವಲ್ಲ. ಮಿತ್ರನ ಸಂಪರ್ಕ ದೊರೆಯಲಿದೆ.


ಮನೋ ಜಾಡ್ಯವನ್ನು ಇಂದೇ ಪರಿಹರಿಸಿಕೊಳ್ಳಿ. ನಿರುಸ್ಸಾಹದಿಂದ ಮೇಲೆ ಬಂದು ನಿತ್ಯಕರ್ಮವನ್ನು ಚುರುಕಾಗಿ ಮಾಡಿ ಮುಗಿಸಿ. ವ್ಯವಹಾರದಲ್ಲಿ ಎಲ್ಲರ ಸಹಕಾರ, ಶ್ರೇಯಸ್ಸು ದೊರಕಲಿದೆ.


ಹಿಂಜರಿಕೆಯ ಸ್ವಭಾವ ಬಿಟ್ಟು ಬಿಡಿ. ಮನಸ್ಸಿನಲ್ಲಿ ಮಂಡಿಗೆ ತಿನ್ನುವ ಹಂತಕ್ಕೆ ಹೋಗುತ್ತೀರಿ ಇದು ಶುಭವಲ್ಲ. ಸಹವರ್ತಿಗಳಲ್ಲಿ ಬಿಚ್ಚು ನುಡಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ.

ಆತ್ಮವಿಶ್ವಾಸವೇ ಈ ದಿನದ ದೊಡ್ಡ ಬಲ. ಕೌಟುಂಬಿಕವಾದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಯೋಗ. ದಿನದ ಎಲ್ಲಾ ಆಗು-ಹೋಗುಗಳನ್ನು ಸುಲಭವಾಗಿ ನಿಭಾಯಿಸಲಿದ್ದೀರಿ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top