13 September 2017

ಸೂರ್ಯೋದಯ : 06.08

ಸೂರ್ಯಾಸ್ತ : 06.22

ರಾಹು ಕಾಲ : 12.00-01.30
ಗುಳಿಕ ಕಾಲ : 10.30-12.00
ಯಮಗಂಡ ಕಾಲ : 07.30-09.00

ಹೇಮಲಂಭಿ, ದಕ್ಷಿಣಾಯನ. ವರ್ಷ ಋತು,ಭಾದ್ರಪದ ಮಾಸ, ಕೃಷ್ಣ ಪಕ್ಷ , ಅಷ್ಟಮಿ. ಬುಧವಾರ. ನಿತ್ಯ ನಕ್ಷತ್ರ- ರೋಹಿಣಿ, ಯೋಗ-ವಜ್ರ, ಕರಣ -ಬಾಲವ.

ಗೆಳೆಯರ ಸಹಾಯ-ಸಹಕಾರದಿಂದ ಇಂದು ಮಹತ್ಕಾರ್ಯ ಸಾಧಿಸಲಿದ್ದೀರಿ. ಪ್ರೀತಿ ಪ್ರೇಮದ ಬಗ್ಗೆ ಎಚ್ಚರದಿಂದ ವರ್ತಿಸಿ. ಅತಿರೇಖತೆ-ಅಸಹಜತೆ ಉಂಟುಮಾಡುವ ಲಕ್ಷಣವಿದೆ.
ಖಾಸಗಿ ಸಂಸ್ಥೆಯಿಂದ ಹಾಗೂ ಅವರ ಜತೆಗಿನ ವ್ಯವಹಾರವೂ ಗೌರವ ಮತ್ತು ಲಾಭ ಉಂಟು ಮಾಡಲಿದೆ. ಮೇಲಾಧಿಕಾರಿಗಳಿಂದ ಉದ್ಯೋಗ ದಲ್ಲಿ ಸ್ವಲ್ಪ ಕಿರಿ ಕಿರಿ ಅನುಭವಿಸುವ ಸಂಭವ.
ಖರ್ಚು ವೆಚ್ಚಗಳು ನಿಮ್ಮ ಲೆಕ್ಕ ತಪ್ಪುವ ಸಾಧ್ಯತೆ ಹೆಚ್ಚಿದೆ. ಕುಟುಂಬದ ಖರ್ಚಿಗಿಂತ ನಿಮ್ಮ ವೈಯಕ್ತಿಕ ಖರ್ಚು ಹೆಚ್ಚುವ ಸಾಧ್ಯತೆ. ಬಂಧು ಮಿತ್ರರ ಸಹಕಾರದಿಂದ ಕುಟುಂಬದಲ್ಲಿ ನೆಮ್ಮದಿ ಕಾಣಲಿದ್ದೀರಿ.
ಕೆಲವು ಪ್ರಮುಖ ಕಾರ್ಯಗಳು ನೆರವೇರಿ ಮನಸ್ಸು ನಿರಾಳತೆ ಹೊಂದುವ ದಿನ. ರಾಜಕೀಯ ಧುರೀಣರ ಭೇಟಿಯಾಗುವ ಅವಕಾಶಗಳು ದೊರಕಿ ಸಮಾಜದಲ್ಲಿ ಗೌರವ ಹೊಂದಲಿದ್ದೀರಿ.
ವ್ಯವಹಾರದಲ್ಲಿ ನಿರೀಕ್ಷಿತ ಲಾಭವನ್ನು ಇಂದು ಹೊಂದಲಿದ್ದೀರಿ. ಕುಟುಂಬ ವರ್ಗದಲ್ಲಿ ನಿಮ್ಮ ಗೌರವವನ್ನು ಇಟ್ಟುಕೊಳ್ಳಬೇಕಾದರೆ ಸಹನಾ ವಂತರಾಗಿ ವರ್ತಿಸಬೇಕಾಗಿದೆ.
ಅಪವಾದ ಹೊರಿಸುವ ಸಾಧ್ಯತೆಗಳು ಇಂದು ಹೆಚ್ಚಿರುವುದರಿಂದ ನಿಮ್ಮ ವಿರೋಧಿಗಳಿಗೆ ನಿಮ್ಮ ತಪ್ಪುಗಳನ್ನು ತೋರಿಸುವ ಸಂಗತಿಗಳು ಉಂಟಾಗಬಹುದು. ತಟಸ್ಥ ನಿಲುವನ್ನು ಹೊಂದುವುದು ಲೇಸು.
ದೇಹಾರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಇಲ್ಲದಿದ್ದರೆ ಅತೀ ಆಯಾಸವೇ ಅನಾರೋಗ್ಯಕ್ಕೆ ಕಾರಣವಾಗಲಿದೆ. ಕೋಪಗೊಳ್ಳುವ ವರ್ತನೆಯೂ ಇಂದು ಹೆಚ್ಚಾಗಲಿದೆ.
ಶ್ರಮಕ್ಕೆ ತಕ್ಕದಾದ ಫಲಗಳು ದೊರಕದೇ ನಷ್ಟ ಹೊಂದುವ ಸಾಧ್ಯತೆ ಇದೆ. ದೇವ ಗುರುವಿನ ಧ್ಯಾನದಿಂದ ದಿನ ಪ್ರಾರಂಭಿಸಿ. ಮನೋಬಲವು ಹೆಚ್ಚಲಿದ್ದು, ಎದುರಿಸುವ ಗುಣಗಳು ಬರಲಿದೆ.
ಜವಬ್ದಾರಿಯಿಂದ ದುಡಿದರೂ ನಿಮಗೆ ಇಂದು ಲಾಭ ಗೌರವವು ಚ್ಯುತಿ. ಹೆದರದೇ ನಿಮ್ಮ ಕೆಲಸವನ್ನ ನಿಷ್ಠೆಯಿಂದ ಮಾಡಿ ಮುಗಿಸಿ. ಮುಂದೊಂದು ದಿನ ಶುಭ ಫಲ ಹೊಂದಲಿದ್ದೀರಿ.
ಅನಾವಶ್ಯಕವಾಗಿ ನಿಮಗೆ ಇಂದು ಪರರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ. ಅದರಲ್ಲೂ ಉದ್ಯೋಗ ಕ್ಷೇತ್ರದಲ್ಲಿ ಮುನ್ನುಗ್ಗುವ ಪ್ರವೃತ್ತಿ ಇಂದು ಬಿಡಿ. ಸಹಜವಾಗಿ ಇರುವುದನ್ನು ರೂಢಿಸಿಕೊಳ್ಳಿ.
ಉದ್ಯೋಗ ಕ್ಷೇತ್ರದ ಜವಾಬ್ದಾರಿ ಮತ್ತು ಲಾಭವು ನಿಮ್ಮನ್ನ ಹುಡುಕಿಕೊಂಡು ಬರಲಿದೆ. ವಾಹನ ಖರೀದಿಯಲ್ಲೂ ಅದೃಷ್ಟ ಹೊಂದಲಿದ್ದೀರಿ. ಮನೋಭಾವದಲ್ಲಿ ಆತಂಕ ಹೊಂದುವ ಲಕ್ಷಣವಿದೆ.
ಆಗು ಹೋಗುಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಡ. ದೇವರ ಮೇಲೆ ಭಾರ ಹಾಕಿ ನಿತ್ಯ ಕಾರ್ಯವನ್ನು ಪ್ರಾರಂಭಿಸಿ . ಶುಭ್ರತೆ ಹೊಂದಲಿದ್ದೀರಿ. ಆತಂಕದ ಮನಸ್ಸನ್ನ ಬಿಟ್ಟುಬಿಡಿ.

By :

Contact No :

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top