14 November 2017

ಸೂರ್ಯೋದಯ : 06:16

ಸೂರ್ಯಾಸ್ತ : 05:51

ರಾಹು ಕಾಲ : 03.೦೦-4.3೦
ಗುಳಿಕ ಕಾಲ : 12.೦೦-1.3೦
ಯಮಗಂಡ ಕಾಲ : 09.೦೦-1೦.3೦

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸಕೃಷ್ಣ ಪಕ್ಷ , ಏಕಾದಶಿ, ಮಂಗಳವಾರ, ನಿತ್ಯ ನಕ್ಷತ್ರ ಉತ್ತರಾಯೋಗವಿಷ್ಕಂಭ, ಕರಣಬಾಲವ.

ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಂಡು ಸಂತೋಷದಿಂದ ಇರಲು ನಿಮಗೆ ಇಂದು ಅವಕಾಶಗಳು ಒದಗಿ ಬರಲಿದೆ. ಇದನ್ನು ಬಳಸಿ ಕೊಂಡು ಕುಟುಂಬದಲ್ಲಿ ನೆಮ್ಮದಿಯನ್ನು ಹೆಚ್ಚಿಸಿಕೊಳ್ಳಿ. ನೀವು ಕೈಗೊಳ್ಳುವ ನಿರ್ಧಾರಕ್ಕೂ ಇಂದು ಬೆಲೆ ದೊರೆಯಲಿದೆ
ವ್ಯಾಪಾರ- ವ್ಯವಹಾರದಲ್ಲಿ ಮಹತ್ವದ ಬದಲಾವಣೆಯನ್ನು ಕಾಣುವ ದಿನವಾಗಿದೆ. ಸಾಮಾಜಿಕ ಕಾರ್ಯ ಚಟುವಟಿಕೆಯನ್ನು ಕಡಿಮೆ ಮಾಡು ವುದು ಒಳಿತು. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ದೊಡ್ಡದಾಗಿಸಿಕೊಳ್ಳದೆ ನೀವೇ ಬಗೆಹರಿಸಿಕೊಳ್ಳಿ.
ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಲಾಭವು ಇಂದು ಉಂಟಾಗಲಿದೆ. ಕ್ಲಿಷ್ಟಕರ ಸಮಸ್ಯೆಗಳಿಗೆ ಇಂದೇ ಪರಿಹಾರ ಕಂಡುಕೊಳ್ಳುವ ಶಕ್ತಿ ನಿಮಗೆ ಇಂದು ಬರಲಿದೆ. ಮನೆಯಲ್ಲಿಯೂ ನಿಮ್ಮಮಾತು ಮಾನ್ಯತೆಯನ್ನು ಪಡೆಯಲಿದೆ.
ಹೊಸ ಯಂತ್ರವೊಂದನ್ನು ಖರೀದಿಸುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ದಾಪುಗಾಲು ಹಾಕಿ ಮುನ್ನಡೆಯುವ ಯೋಗ ಇಂದಿಗಿದೆ. ಆರೋಗ್ಯದ ವಿಚಾರದಲ್ಲಿ ಇಂದು ನೀವು ಬಲಿಷ್ಠರಾಗಿರುತ್ತೀರಿ. ಜಲಯಾನ ಶುಭವಲ್ಲ
ಭೂಮಿಯ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ. ಗುರುವಿನ ಮೇಲೆ ಭಕ್ತಿಯನ್ನು ವ್ಯಕ್ತಪಡಿಸಿ ದೊಡ್ಡ ವ್ಯವಹಾರವನ್ನು ಪ್ರಾರಂಭಿಸಿ, ನಷ್ಟವನ್ನು ಮಾಡಲಾರದು. ಸಾಲದ ಹೊರೆಯು ಕಡಿಮೆಯಾಗುವ ಲಕ್ಷಣವು ಕಂಡು ಬರಲಿದೆ.
ದೈಹಿಕವಾಗಿ ಬಳಲಿಕೆಯು ಇಂದು ಹೆಚ್ಚಲಿದೆ. ಅದರಲ್ಲೂ ಬೆನ್ನು ನೋವಾದಿಗಳು ಕಾಣಿಸಿಕೊಳ್ಳಲಿದೆ. ಇದಕ್ಕೆ ಸರಿಯಾದ ಚಿಕಿತ್ಸೆ-ವಿಶ್ರಾಂತಿ ಯನ್ನು ಸ್ವೀಕರಿಸಿ. ಸಮಾಜದಲ್ಲಿ ಸೂಕ್ತ ಸ್ಥಾನಮಾನವನ್ನು ಹೊಂದಲು ಇಂದು ಅವಕಾಶ ವಿಪುಲವಾಗಿದೆ
ತುಂಬಾ ಶ್ರಮವಹಿಸಿದ ಕಾರ್ಯ ಶೀಘ್ರದಲ್ಲೇ ಫಲವನ್ನು ಹೊಂದುವ ಲಕ್ಷಣ ಇಂದು ಕಾಣಿಸಲಿದೆ. ಮನೋ ಉಲ್ಲಾಸದ ಪ್ರವೃತ್ತಿಯಿಂದ ಮಿತ್ರರ ಜತೆ ಸೌಹಾರ್ದವಾಗಿರಲು ಇಂದು ಅವಕಾಶಕೂಡಿ ಬರಲಿದೆ. ರಾಜಕೀಯವಾಗಿಯೂ ನೀವು ಇಂದು ಬಲಿಷ್ಠರು.
ಅನಾವಶ್ಯಕವಾಗಿ ಖಿನ್ನತೆಗೆ ನೀವು ಒಳಗಾಗುತ್ತೀರಿ. ಇದನ್ನು ಪ್ರಯತ್ನ ಪೂರ್ಣವಾಗಿ ನೀವೇ ನಿವಾರಿಸಿಕೊಳ್ಳಬೇಕು. ಲಾಭವೊಂದೆ ಯೋಚಿಸು ತ್ತಿರುವುದು ಬೇಡ. ಮನೆಯಲ್ಲಿ ಪ್ರೀತಿ-ವಿಶ್ವಾಸದಿಂದ ವರ್ತಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.
ವಿದ್ಯಾರ್ಥಿಗಳಿಗೆ ಇಂದು ಪ್ರಮುಖ ದಿನ. ಉದ್ಯೋಗಾಕಾಂಕ್ಷಿಗಳಿಗೂ ಸಂತಸದ ದಿನ. ನೆರೆಯವರ ಸಹಾಯ ಸಹಕಾರದಿಂದ ದಿನವಿಡಿ ಖುಷಿ ಯಿಂದ ಕಳೆಯಬಹುದಾದ ದಿನ. ಧನ್ಯತೆಯ ಭಾವ ಪ್ರಬಲವಾಗಿ ದಿನವನ್ನು ಆಚರಿಸಲಿದ್ದೀರಿ.
ಮೂಲ ಆಸ್ತಿ ವಿಚಾರದಲ್ಲಿ ಗೊಂದಲಗಳು ಪ್ರಾರಂಭವಾಗಬಹುದು. ಇದಕ್ಕೆ ಆತಂಕಗೊಂಡು ಇಂದೇ ಈ ಗೊಂದಲವನ್ನು ನಿವಾರಿಸುತ್ತೇನೆಂದು ಅಂದುಕೊಳ್ಳುವುದುಬೇಡ. ನಿಧಾನವಾಗಿ ಸಮಸ್ಯೆ ಬಗೆಹರಿಯಲಿದೆ.ಚಿನ್ನ-ಬೆಳ್ಳಿಯ ವ್ಯವಹಾರ ಬೇಡ.
ನಿದ್ರಾಭಂಗ ಉಂಟಾಗಬಹುದು. ವ್ಯವಹಾರ ವಿಚಾರವಾಗಿ ನೀವು ಒತ್ತಡವನ್ನು ಬಿಟ್ಟು ನಿತ್ಯಕರ್ಮವನ್ನು ಮಾಡಿ. ಆಗ ಮಾತ್ರ ಸಮಾಧಾನ ವನ್ನು ಹೊಂದಲು ಸಾಧ್ಯವಿದೆ. ವಸ್ತು-ವಾಹನಗಳ ಖರೀದಿಯ ವಿಚಾರವನ್ನು ನಿಧಾನಗೊಳಿಸಿ. ವಿವೇಕವೇ ಇಂದು ಪ್ರಧಾನವಾಗಿರಲಿ.
ಹಿರಿಯ ವರ್ಗದ ಅಧಿಕಾರಿಗಳಿಂದ ವಿನಾಕಾರಣ ತೊಂದರೆ ಬರಬಹುದು. ಇದನ್ನು ತಟಸ್ಥ ನಿಲುವಿನಿಂದ ನಿಭಾಯಿಸಿ. ಯಾವುದೇ ಪ್ರತಿಕ್ರಿಯೆ ಬೇಡ. ಕುಟುಂಬ ವರ್ಗದ ಬೆಂಬಲದಿಂದ ಮನೆಯ ಕೆಲಸ ಸುಗಮವಾಗಲಿದೆ. ಇದರಲ್ಲೇಸಂತೋಷನ್ನು ಹೊಂದಿ. ಮಿಶ್ರ ಫಲದ ದಿನ.

By : ವಿ.ಡಿ. ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top